ಲಕ್ನೋ: ಉತ್ತರ ಪ್ರದೇಶ ಸರ್ಕಾರವು ಗೋರಖ್‍ಪುರದಲ್ಲಿ ವಿಶ್ವದ ಮೊದಲ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ನಿರ್ಮಿಸುತ್ತಿದ್ದು, ಇದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೆಪ್ಟೆಂಬರ್ 3 ರಂದು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು
Advertisement
ಉತ್ತರ ಪ್ರದೇಶದ ಗೋರಖ್‍ಪುರ ಅರಣ್ಯ ವಿಭಾಗದಲ್ಲಿ ಮಹಾರಾಜ್‍ಗಂಜ್‍ನ ಫರೆಂಡಾದಲ್ಲಿ ನಿರ್ಮಿಸಲಾಗುತ್ತಿರುವ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರದ ನಿರ್ಮಾಣಕ್ಕೆ 1.06 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಸಂರಕ್ಷಣಾ ಕೇಂದ್ರವು ಗೋರಖ್‍ಪುರ ನಗರದ ಅಭಿವೃದ್ಧಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದೆ 2021ರಲ್ಲಿ ರೆಡ್ ಹೆಡೆಡ್ ರಣಹದ್ದು ಸಂರಕ್ಷಣಾ ಕೇಂದ್ರ ಯೋಜನೆಗೆ 80 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ – ಕೆಲಸದಿಂದ ಪೌರಕಾರ್ಮಿಕ ವಜಾ
Advertisement
Advertisement
ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವನ್ನು ಸೆಪ್ಟೆಂಬರ್ 3 ರಂದು ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದು, ಇದು ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಸಹ ಗುರುತಿಸುತ್ತದೆ.