– ರಝಾಕರು ತಮ್ಮ ಕುಟುಂಬವನ್ನು ನಡೆಸಿಕೊಂಡ ರೀತಿ ಬಹಿರಂಗಪಡಿಸಲಿ ಎಂದು ಸವಾಲ್
ಲಕ್ನೋ: ಮುಂದೊಂದು ದಿನ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೂಡ ಗಂಗಾ ಸ್ನಾನ ಮಾಡಲೇಬೇಕಾಗುತ್ತದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭವಿಷ್ಯ ನುಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ (Uttar Pradesh) ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ಹೋಗುವುದಿಲ್ಲ, ಹೊಟ್ಟೆ ತುಂಬಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮುಂದೊಂದು ದಿನ ಖರ್ಗೆ ಕೂಡ ಗಂಗಾ ಸ್ನಾನ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 3ನೇ ಮದ್ವೆಗೆ ಸಜ್ಜಾದ ರಾಖಿ ಸಾವಂತ್..? – ಪಾಕಿಸ್ತಾನದ ಪೊಲೀಸ್ ಆಫೀಸರ್ ಜೊತೆ ವಿವಾಹ
Advertisement
Advertisement
ಖರ್ಗೆ ಅವರು ಈಗ ಏನೇನೋ ಹೇಳ್ತಿದ್ದಾರೆ. ಆದ್ರೆ ಯಾವುದೇ ಒಬ್ಬ ವ್ಯಕ್ತಿಗೆ ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಸತ್ಯಕ್ಕೆ ಹತ್ತಿರವಾಗುತ್ತಾನೆ. ಆದ್ರೆ ಖರ್ಗೆ ಅವರು ರಾಜಕೀಯ ಸ್ವಾರ್ಥಕ್ಕಾಗಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಅಂತಹವರೊಂದಿಗೆ ಪ್ರಯಾಗ್ರಾಜ್ನ ಸತ್ಯಗಳನ್ನು ಚರ್ಚಿಸಿದ್ರೆ ಅದು ನಾನು ನನಗೆ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ ಎಂದಿದ್ದಾರೆ.
Advertisement
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ರಝಾಕರು ತಮ್ಮ ಕುಟುಂಬವನ್ನು ಹೇಗೆ ನಡೆಸಿಕೊಂಡರು ಎಂಬ ಸತ್ಯವನ್ನು ಖರ್ಗೆ ಬಹಿರಂಗಪಡಿಸಬೇಕು. ಸತ್ಯ ಒಪ್ಪಿಕೊಳ್ಳುವ ದಿನ ಹತ್ತಿರವಾಗುತ್ತಿದೆ ಎಂದು ಸಹ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದನ್ನೂ ಓದಿ: Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ
Advertisement
ಈ ಹಿಂದೆಯೂ ಯೋಗಿ ಆದಿತ್ಯನಾಥ್, ರಝಾಕರ್ಗಳಿಂದಲೇ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರ ಹತ್ಯೆ ನಡೆದಿದೆ. ಆದರೆ ಮುಸ್ಲಿಂ ವೋಟ್ ಬ್ಯಾಂಕ್ಗಾಗಿ ಖರ್ಗೆಯವರು ಏನೂ ಮಾತನಾಡುತ್ತಿಲ್ಲ ಎಂದು ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಮೇಲೆ ಅನಗತ್ಯವಾಗಿ ಕೋಪ ಮಾಡಿಕೊಳ್ಳುತ್ತಿದ್ದಾರೆ. ನಾನು ಅವರ ವಯಸ್ಸನ್ನು ಗೌರವಿಸುತ್ತೇನೆ. ಆದರೆ ನನ್ನ ಮೇಲೆ ಕೋಪ ಮಾಡಿಕೊಳ್ಳುವ ಬದಲು ಅವರು ಹೈದರಾಬಾದ್ ನಿಜಾಮಾನ ಮೇಲೆ ಆಕ್ರೋಶ ಹೊರಹಾಕಬೇಕು. ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಒಮ್ಮೆ ಹೈದರಾಬಾದ್ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿದರು. ಅದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಸ್ವಾತಂತ್ರ್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಯಿತು ನಂತರ ಹಿಂಸಾಚಾರ ಆರಂಭವಾಯಿತು. ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟುಹಾಕಿದರು.
ಹಿಂದೂಗಳನ್ನು ಬರ್ಬರವಾಗಿ ಕೊಂದರು ಮತ್ತು ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟುಹಾಕಿದರು. ಈ ವಿಚಾರ ಖರ್ಗೆ ಅವರಿಗೆ ಗೊತ್ತಿದ್ದರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ. ಮುಸ್ಲಿಂ ವೋಟ್ಬ್ಯಾಂಕ್ಗಾಗಿ ಅವರು ಎಲ್ಲವನ್ನೂ ಮರೆಯುತ್ತಾರೆ ಎಂದು ತಿರುಗೇಟು ನೀಡಿದ್ದರು.