ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಇನ್ನೊಂದೇ ದಿನ ಬಾಕಿ ಇದೆ. ನಾಳೆ(ಗುರುವಾರ) ಬೆಳಗ್ಗೆ 10.30 ಕ್ಕೆ 10+3 ಶಾಸಕರು ನೂನತ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ನೂತನ ಸಚಿವರಿಗೆ ಯಾವ್ಯಾವ ಖಾತೆ ಸಿಗಲಿವೆ? ಯಾವ ಸಚಿವ ಯಾವ “ಖಾತೆ”ದಾರನಾಗುತ್ತಾರೆ ಅನ್ನೋ ಕುತೂಹಲಕ್ಕೆ ಇಂದೇ ತೆರೆ ಬೀಳಲಿದೆ.
ನೂತನ ಸಚಿವರ ಖಾತೆಗಳ ಪಟ್ಟಿಯನ್ನೂ ಸಿಎಂ ಇಂದೇ ಫೈನಲ್ ಮಾಡಲಿದ್ದಾರೆ. ಯಾರು ಯಾರಿಗೆ ಯಾವ್ಯಾವ ಖಾತೆ ಅಂತ ಫಿಕ್ಸ್ ಮಾಡಿದ ಬಳಿಕ ರಾಜಭವನಕ್ಕೆ ಪಟ್ಟಿ ರವಾನಿಸಲಾಗುತ್ತದೆ. ಸಚಿವರ ಖಾತೆ ಹಂಚಿಕೆ ಪಟ್ಟಿ ಇಂದು ಸಂಜೆ ರಾಜಭವನಕ್ಕೆ ತಲುಪಲಿದೆ.
Advertisement
ಗೊಂದಲ ಉಂಟಾಗಬಾರದೆಂಬ ಕಾರಣಕ್ಕೆ ಸಿಎಂ ಯಡಿಯೂರಪ್ಪ ಅವರು ಬೆಂಗಳೂರು ಅಭಿವೃದ್ಧಿ ಇಲಾಖೆ ಮತ್ತು ಇಂಧನ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ. ಇವೆರಡು ಖಾತೆಗಳ ಹೊರತು ಉಳಿದವುಗಳನ್ನು ಸಿಎಂ ನೂತನ ಸಚುವರಿಗೆ ಹಂಚಿಕೆ ಮಾಡಲಿದ್ದಾರೆ.
Advertisement
Advertisement
ನೂತನ ಸಚಿವರ ಸಂಭಾವ್ಯ ಖಾತೆಗಳು:
1. ರಮೇಶ್ ಜಸರಕಿಹೊಳಿ – ಜಲಸಂಪನ್ಮೂಲ ಖಾತೆ
2. ಎಸ್ ಟಿ ಸೋಮಶೇಖರ್ – ಸಹಕಾರ ಖಾತೆ
3. ಬೈರತಿ ಬಸವರಾಜು – ನಗರಾಭಿವೃದ್ಧಿ ಇಲಾಖೆ
4. ಬಿ.ಸಿ.ಪಾಟೀಲ್ – ಅರಣ್ಯ ಇಲಾಖೆ
5. ಆನಂದ್ ಸಿಂಗ್ – ಯುವಜನ, ಕ್ರೀಡಾ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ
6. ಗೋಪಾಲಯ್ಯ – ಕಾರ್ಮಿಕ ಇಲಾಖೆ
7. ಶಿವರಾಮ್ ಹೆಬ್ಬಾರ್ – ಪೌರಾಡಳಿತ ಇಲಾಖೆ
8. ಶ್ರೀಮಂತ ಪಾಟೀಲ್ – ತೊಟಗಾರಿಕೆ ಇಲಾಖೆ ಮತ್ತು ಸಕ್ಕರೆ ಖಾತೆ
9. ಡಾ.ಕೆ.ಸುಧಾಕರ್ – ವೈದ್ಯಕೀಯ ಇಲಾಖೆ
10. ನಾರಾಯಣ ಗೌಡ – ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
11. ಉಮೇಶ್ ಕತ್ತಿ – ಕೃಷಿ ಖಾತೆ
12. ಅರವಿಂದ ಲಿಂಬಾವಳಿ – ಸಮಾಜ ಕಲ್ಯಾಣ ಇಲಾಖೆ
13.ಸಿ.ಪಿ.ಯೋಗೇಶ್ವರ್ – ಸಣ್ಣ ನೀರಾವರಿ ಮತ್ತು ರೇಷ್ಮೆ ಇಲಾಖೆ
Advertisement