ಬೆಂಗಳೂರು: ಖಜಾನೆಯಲ್ಲಿ ದುಡ್ಡಿಲ್ಲ ಅಂತಾರೆ ಆದರೂ ದುಂದುವೆಚ್ಚ ಮಾಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ಮತ್ತೆ ಸಿಎಂ ಯಡಿಯೂರಪ್ಪ ಹೆಲಿಕಾಪ್ಟರ್ ಪ್ರಯಾಣಕ್ಕೆ ಮೊರೆ ಹೋಗಿದ್ದಾರೆ.
ಹೌದು, ಬಿಜೆಪಿ ಶಾಸಕರ ಕುಟುಂಬದ ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಸಿಎಂ ಯಡಿಯೂರಪ್ಪ ಪಯಣ ಮಾಡಲಿದ್ದಾರೆ. ಇಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ತಮ್ಮನ ಮಕ್ಕಳ ಮದುವೆ ಇದೆ. ಕೊಪ್ಪಳದ ಕುಕನೂರಿನಲ್ಲಿ ನಡೆಲಿರುವ ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಸಿಎಂ ಹೊರಡಲಿದ್ದಾರೆ.
Advertisement
Advertisement
ಇಂದು ಬೆಳಗ್ಗೆ 9.30ಕ್ಕೆ ಹೊರಟು, ಮಧ್ಯಾಹ್ನ 1.30ಕ್ಕೆ ಸಿಎಂ ಯಡಿಯೂರಪ್ಪ ವಾಪಸ್ ಆಗಲಿದ್ದಾರೆ. ಸಿಎಂ ಯಡಿಯೂರಪ್ಪಗಾಗಿ 3.45 ಗಂಟೆ ಕಾಲ ಬಾಡಿಗೆಗೆ ಹೆಲಿಕಾಪ್ಟರ್ ಬುಕ್ ಮಾಡಲಾಗಿದೆ. ಈ ಖಾಸಗಿ ಪ್ರಯಾಣಕ್ಕೆ ಲಕ್ಷ ಲಕ್ಷ ಹಣ ವೆಚ್ಚ ಮಾಡುತ್ತಿದ್ದಾರೆ.
Advertisement
ಈ ಹಿಂದೆ ಅಂದರೆ ಮೈತ್ರಿ ಸರ್ಕಾರಕ್ಕೂ ಮುನ್ನ ಮೂರು ದಿನ ಸಿಎಂ ಆಗಿದ್ದಾಗಲೂ ಹೆಲಿಕಾಪ್ಟರ್ ಬಳಕೆ ಮಾಡಿದ್ದ ಬಿ.ಎಸ್.ಯಡಿಯೂರಪ್ಪ, ಆಗ ಎರಡು ದಿನದ ಹೆಲಿಕಾಪ್ಟರ್ ಬಳಕೆಗೆ ಬರೋಬ್ಬರಿ 13 ಲಕ್ಷ ರೂ. ಖರ್ಚಾಗಿತ್ತು. ಕುಮಾರಸ್ವಾಮಿ ಸಿಎಂ ಆದ ಬಳಿಕ ಬಿಎಸ್‍ವೈ ಹೆಲಿಕಾಪ್ಟರ್ ಪ್ರೇಮವನ್ನು ಟೀಕಿಸಿದ್ದರು. ಆಗ ಕುಮಾರಸ್ವಾಮಿ ಟೀಕೆಯ ಕಾರಣ 13 ಲಕ್ಷ ವೆಚ್ಚ ತಾವೇ ಭರಿಸುವುದಾಗಿ ಸವಾಲು ಹಾಕಿದ್ದರು.
Advertisement
ಈಗ ಸರ್ಕಾರದ ಬೊಕ್ಕಸ ಖಾಲಿ ಖಾಲಿ ಆಗಿದೆ. ಖುದ್ದು ಪಕ್ಷದ ಸಚಿವರು, ಶಾಸಕರಿಗೆ ಚಾಪರ್ ಪ್ರಯಾಣ ಬಿಟ್ಟು, ಬಸ್, ಟ್ರೈನ್ ಮೂಲಕ ಜಿಲ್ಲಾ ಪ್ರವಾಸ ಮಾಡಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಈಗ ಯಡಿಯೂರಪ್ಪ ಮದುವೆಗೆ ಚಾಪರ್ ಬಳಸಿ ದುಂದು ವೆಚ್ಚ ಮಾಡುತ್ತಿದ್ದಾರೆ. ಇದು ಎಷ್ಟು ಸರಿ ಅನ್ನೋದನ್ನು ಜನತೆ ಪ್ರಶ್ನೆ ಮಾಡುತ್ತಿದ್ದಾರೆ.