ಬೆಂಗಳೂರು: ಮನೆಗೆ ಹೆಚ್ಚು ಬರಬೇಡ. ಒಂದು ವೇಳೆ ಬಂದರೂ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಬೇಡ ಎಂದು ಪುತ್ರ ವಿಜಯೇಂದ್ರಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವಿಧಾನ ಸೌಧ, ಗೃಹ ಕಚೇರಿ ಕೃಷ್ಣಾಗೂ ಬರಬೇಡ ಎಂದಿರುವ ಯಡಿಯೂರಪ್ಪ, ಬಿಜೆಪಿ ಕಚೇರಿಗೆ ನೀನು ಪ್ರತಿದಿನ ಹೋಗಿ ಎರಡ್ಮೂರು ಗಂಟೆ ಕಾಲ ಕಳೆಯಬೇಕು ಎಂದು ಪುತ್ರನಿಗೆ ಹೇಳಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳಿಂದ ಲಭ್ಯವಾಗಿದೆ.
Advertisement
Advertisement
ಈ ಮೂಲಕ ಪುತ್ರನ ಭವಿಷ್ಯದ ಬಗ್ಗೆ ಮೆಗಾ ಪ್ಲಾನ್ ಮಾಡಿರುವ ಯಡಿಯೂರಪ್ಪ, ಪಕ್ಷದ ವಿರೋಧಿಗಳನ್ನ ಮಣಿಸಲು ಸಿಎಂ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಯ್ತು ಈಗ ಅವರ ಬೆಂಬಲಿಗರು ಕೂಡ ಟಾರ್ಗೆಟ್
Advertisement
ಬೆಂಗಳೂರಿನಲ್ಲಿ ಇದ್ದಾಗ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಹೋಗಬೇಕು. ದಿನಕ್ಕೆ ಎರಡ್ಮೂರು ಗಂಟೆ ಕುಳಿತು ಪಕ್ಷದ ಚಟುವಟಿಕೆ ಗಮನ ಕೊಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ತಂದೆಯ ಮಾತನ್ನು ವಿಜಯೇಂದ್ರ ಕೂಡ ಪಾಲಿಸುತ್ತಿದ್ದು, ಬಿಜೆಪಿ ಕಚೇರಿಗೆ ಹೋಗಿ ಬರುತ್ತಿದ್ದಾರೆ. ಈ ಮೂಲಕ ಸರ್ಕಾರದ ವಿಚಾರದಲ್ಲಿ ತೆರೆಮರೆ ಹಸ್ತಕ್ಷೇಪ, ಪಕ್ಷದ ವಿಚಾರದಲ್ಲಿ ಬಹಿರಂಗ ಸರ್ಕಸ್ ನಡೆಯುತ್ತಿದೆ.