ರಾಮನಗರ: ಅಹಿಂದ ಸಚಿವರ ಸಭೆಗೆ ಬೇರೆ ಅರ್ಥ ಕಲ್ಪಿಸೋದು ಬೇಡ, ಸಭೆ ಮಾಡಿದ ತಕ್ಷಣ ಸಿಎಂ ಬದಲಾವಣೆ ಆಗಲ್ಲ ಎಂದು ಕಾಂಗ್ರೆಸ್ (Congress) ಎಂಎಲ್‌ಸಿ ಎಸ್.ರವಿ (MLC S Ravi) ಹೇಳಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ಹಾಗೂ ದಲಿತ ಸಚಿವರ ಡಿನ್ನರ್ ಮೀಟಿಂಗ್ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಯಾರೂ ಕೂಡಾ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ನಾನೊಬ್ಬ ಪರಿಷತ್ ಶಾಸಕನಾಗಿ ಪಕ್ಷದ ಆಂತರಿಕ ಚರ್ಚೆಗಳಲ್ಲೂ ಭಾಗಿಯಾಗಿದ್ದೇನೆ. ಕಳೆದ ವಾರ ನಾವೆಲ್ಲಾ ಒಕ್ಕಲಿಗ ಸಚಿವರು, ಶಾಸಕರು ಸೇರಿದ್ದೆವು. ಅಭಿವೃದ್ಧಿ ಹಾಗೂ ಸಮಾಜದ ಒಳಿತಿನ ಬಗ್ಗೆ ಚರ್ಚೆ ಮಾಡಿದ್ದೇವೆ. ಪಕ್ಷದ ಆಗು-ಹೋಗುಗಳ ಬಗ್ಗೆ ಚರ್ಚೆ ಆಗುತ್ತದೆ. ಸಭೆ ಸೇರಿ ಮಾತನಾಡಿದ್ದಕ್ಕೆಲ್ಲಾ ಬೇರೆ ಅರ್ಥಗಳನ್ನು ಕಲ್ಪಿಸುವುದು ತಪ್ಪು. ಯಾರೋ ನಾಲ್ಕು ಹಿರಿಯ ಸಚಿವರು ಸಭೆ ಸೇರಿ ಮಾತಾನಾಡಿದ್ದನ್ನೇ ಸಿಎಂ ಬದಲಾವಣೆಗೆ ಸಭೆ ಮಾಡಿದ್ದಾರೆ ಅಂತಾ ಯಾಕೆ ತಿಳಿದುಕೊಳ್ಳುತ್ತೀರಿ ಎಂದು ಹೇಳಿದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!
Advertisement
Advertisement
ಸತೀಶ್ ಜಾರಕಿಹೊಳಿ ನಮ್ಮ ಕಾರ್ಯಾಧ್ಯಕ್ಷರಾಗಿದ್ದವರು. ಸಚಿವರು ಕರೆದರೆ ಎಲ್ಲರೂ ಹೋಗುತ್ತಾರೆ. ಅವರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೆ. ಮುಡಾ ಕೇಸ್‌ಗೂ ಸಭೆ ಮಾಡೋದಕ್ಕೂ ಏನು ಸಂಬಂಧ? ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ರಾಜ್ಯ ಪ್ರವಾಸ ಮಾಡ್ತಾ ಇದ್ದಾರೆ. ಸಿಎಂ ಯಾರು ಅನ್ನೋದನ್ನ ಹೈಕಮಾಂಡ್ ನಿರ್ಣಯ ಮಾಡುತ್ತೆ. ಶಿವಕುಮಾರ್ ಅಥವಾ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಅನ್ನೋದು ನಮ್ಮ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್‌ಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು
Advertisement
Advertisement
ಜಾತಿಗಣತಿ ವರದಿ ಬಿಡುಗಡೆ ವಿಚಾರ ಕುರಿತು ಮಾತನಾಡಿದ ಅವರು, ಜಾತಿಗಣತಿ ವರದಿ ಬಿಡುಗಡೆ ಮಾಡಬೇಕೆಂದು ನಮ್ಮ ಪಕ್ಷದ ಹೈಕಮಾಂಡ್ ಪ್ರಣಾಳಿಕೆಯಲ್ಲೇ ತಿಳಿಸಿದೆ. ನಮ್ಮ ಪಕ್ಷದ ಸಿದ್ಧಾಂತ ಕೂಡ ಅದೇ ಇದೆ. ಶೋಷಿತ ಸಮಾಜಕ್ಕೆ ಸಮ ಸಮಾಜ ನಿರ್ಮಾಣ ಆಗಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ಜಾತಿಗಣತಿ ವರದಿ ಬಗ್ಗೆ ಚರ್ಚೆ ಆಗಬೇಕು. ಚರ್ಚೆಗಳು ಆದಾಗಲೇ ವಾಸ್ತವ ತಿಳಿಯುತ್ತದೆ. ಜೆಡಿಎಸ್, ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ (H D Kumaraswamy), ವಿಜಯೇಂದ್ರ (B Y Vijayendra), ರಾಜಕೀಯವಾಗಿ ಲಾಭ ನೋಡುತ್ತಾರೆ. ಬಿ.ಕೆ.ಹರಿಪ್ರಸಾದ್ ಹೇಳಿಕೆ ಅವರ ವೈಯಕ್ತಿಕ. ಅವರ ನಿಲುವನ್ನ ತಿಳಿಸಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ