ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಈ ಮಧ್ಯೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಿಎಂ ಬದಲಾಗುತ್ತಾರಾ ಅನ್ನೋ ಪ್ರಶ್ನೆಯೊಂದು ರಾಜ್ಯ ರಾಜಕಾರಣದಲ್ಲಿ ಮೂಡಿದೆ.
ಹೌದು. ದೋಸ್ತಿ ಸರ್ಕಾರದಲ್ಲಿ ಸಿಎಂ ಬದಲಾವಣೆಯ ಅನಿವಾರ್ಯತೆ ಸೃಷ್ಟಿಯಾದರೆ ಸಿಎಂ ಸ್ಥಾನಕ್ಕೆ ಬಂದು ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
Advertisement
ಒಂದು ಕಾಲದಲ್ಲಿ ಜನತ ಪರಿವಾರದಲ್ಲಿದ್ದ ದೇಶಪಾಂಡೆ, ಆ ಬಳಿಕ ಕಾಂಗ್ರೆಸ್‍ಗೆ ಬಂದರು. ಇವರು ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಕಾಮನ್ ಕ್ಯಾಂಡಿಡೇಟ್ ಆಗಿದ್ದಾರೆ. ಹೀಗಾಗಿ ಸಿಎಂ ಬದಲಾವಣೆಯ ಅನಿವಾರ್ಯತೆ ಎದುರಾದರೆ ದೇಶಪಾಂಡೆಯವರನ್ನ ಸಿಎಂ ಸ್ಥಾನದಲ್ಲಿ ಕೂರಿಸಲು ಎರಡೂ ಕಡೆಯಿಂದ ಒಂದು ಹಂತದ ಸಮ್ಮತಿ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
Advertisement
Advertisement
ಯಾವ ಕಾರಣಕ್ಕೆ ಸಿಎಂ ರೇಸ್‍ನಲ್ಲಿದ್ದಾರೆ?
ದೇಶಪಾಂಡೆಯವರು ಏನೇ ಸಮಸ್ಯೆ ಆದರೂ ಅವರೇ ಫೇಸ್ ಮಾಡುತ್ತಾರೆ. ಆ ಒಂದು ಸಾಮರ್ಥ್ಯ ಅವರಿಗೆ ಇರುವ ಕಾರಣಕ್ಕೆ ದೋಸ್ತಿ ನಾಯಕರಿಗೆ ದೇಶಪಾಂಡೆ ಅವರ ಮೇಲೆ ನಂಬಿಕೆಯಿದೆ. ಜೊತೆಗೆ ದೇಶದ ಬೇರೆ ಬೇರೆ ರಾಜಕೀಯ ನಾಯಕರ ಜೊತೆ ಆತ್ಮೀಯ ಒಡನಾಟ ಹೊಂದಿರುವ ಆರ್.ವಿ ದೇಶಪಾಂಡೆ, ಯಾವ ಸಂದರ್ಭವನ್ನು ಬೇಕಾದರೂ ಎದುರಿಸ ಬಲ್ಲವರಾಗದ್ದಾರೆ. ಅಲ್ಲದೆ ಎಲ್ಲವನ್ನೂ ಮ್ಯಾನೇಜ್ ಮಾಡುವ ಕೆಪಾಸಿಟಿ ಕೂಡ ಅವರಿಗಿದೆಯಂತೆ.
Advertisement
ಬಿಜೆಪಿಯವರು ಆಪರೇಷನ್ ಕಮಲ ಆರಂಭಿಸಿದರೆ ಅದನ್ನ ತಡೆದು ಶಾಸಕರನ್ನ ಹಿಡಿದಿಡುವ ಸಂಪನ್ಮೂಲ ದೇಶಪಾಂಡೆಯವರ ಬಳಿ ಇದೆ. ಅಲ್ಲದೆ ಹೈಕಮಾಂಡ್ ಮ್ಯಾನೇಜ್ ಮಾಡುವ ಸಾಮರ್ಥ್ಯವೂ ಇವರಿಗಿದೆಯಂತೆ. ಇಷ್ಟೇ ಅಲ್ಲದೆ ಮೈತ್ರಿ ಪಕ್ಷದ ಆಗು ಹೋಗುಗಳನ್ನು ನೋಡಿಕೊಳ್ಳುವ ಶಕ್ತಿಯಿದೆಯಂತೆ.
ದೇವೇಗೌಡರು ಹಾಗೂ ಕುಮಾರಸ್ವಾಮಿಯವರೊಂದಿಗೆ ಹೊಂದಿಕೊಳ್ಳುವ ಚಾಕಚಕ್ಯತೆಯು ಕೂಡ ಇವರಿಗಿದ್ದು, ನಾನು ಸಿಎಂ ಆಗಬೇಕು ಅನ್ನೋದು ದೇಶಪಾಂಡೆಯವರ ದಶಕದ ಕನಸಾಗಿದೆ. ಸಮ್ಮಿಶ್ರ ಸರ್ಕಾರದ ಮಾತು ಬಂದಾಗಲೆಲ್ಲಾ ದೇಶ ಪಾಂಡೆಯವರ ಹೆಸರು ಹಲವು ಬಾರಿ ಸಿಎಂ ರೇಸ್ ಗೆ ಕೇಳಿ ಬಂದಿದೆ. ಈಗ ಮೈತ್ರಿಯಲ್ಲಿ ಬದಲಾವಣೆ ಅನಿವಾರ್ಯವಾದರೆ ಯಾವುದೇ ಅಡ್ಡಿ ಆತಂಕವಿಲ್ಲದೆ ದೇಶಪಾಂಡೆ ಸಿಎಂ ಸ್ಥಾನಕ್ಕೆ ಬಂದು ಕೂರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಮಾಡಬೇಕಾದರೆ ದೇಶಪಾಂಡೆಯವರೆ ಸಿಎಂ ರೇಸ್ ನಲ್ಲಿರುವುದು ಸತ್ಯವಾಗಿದ್ದು, ದೇಶಪಾಂಡೆಯವರು ಸಿಎಂ ಆಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.