BelgaumDistrictsKarnatakaLatestMain Post

ಮನೆದೇವತೆ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದರ್ಶನ ಪಡೆದ ಸಿಎಂ ಧರ್ಮಪತ್ನಿ!

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (Basavaraj Bommai) ಧರ್ಮಪತ್ನಿ ಚನ್ನಮ್ಮ ಬೊಮ್ಮಾಯಿ (Channamma Bommai) ಅವರು ನವರಾತ್ರಿ ನಿಮಿತ್ತ ಮನೆದೇವತೆ ಸವದತ್ತಿ ಶ್ರೀರೇಣುಕಾ ದೇವಿಯ (Sri Renuka Devi) ದರ್ಶನ ಪಡೆದುಕೊಂಡು ಪುನೀತರಾದರು.

ಬೆಳಗಾವಿ (Belgavi) ಜಿಲ್ಲೆಯ ಸವದತ್ತಿ (Savadatti) ಪಟ್ಟಣದ ಹೊರವಲಯದಲ್ಲಿರುವ ಯಲ್ಲಮ್ಮನ ಗುಡ್ಡದ ಶ್ರೀರೇಣುಕಾದೇವಿ ದೇಗುಲಕ್ಕೆ ಚನ್ನಮ್ಮ ಬೊಮ್ಮಾಯಿ ಇಂದು ಬೆಳಗ್ಗೆ ಭೇಟಿ ನೀಡಿದ್ದರು. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಘಟ್ಟಕ್ಕೆ ಎಣ್ಣೆ ಸಮರ್ಪಿಸಿದರು. ಬಳಿಕ ಭಕ್ತಿ ಭಾವದಿಂದ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಬೆಂಗಾವಲು ವಾಹನ ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ

ಶ್ರೀರೇಣುಕಾದೇವಿ ಯಲ್ಲಮ್ಮ ಬಸವರಾಜ ಬೊಮ್ಮಾಯಿಯ ಮನೆದೇವತೆಯೂ ಆಗಿದ್ದರಿಂದ ಹುಬ್ಬಳ್ಳಿಯಿಂದ ಖಾಸಗಿ ವಾಹನದಲ್ಲಿ ಬಂದು ಚನ್ನಮ್ಮ ಬೊಮ್ಮಾಯಿ ದೇವಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ದೇವಸ್ಥಾನ ಸಿಇಓ ಬಸವರಾಜ್ ಜಿರಗ್ಯಾಳ ಹಾಗೂ ನಾಗರತ್ನ ಚೋಳಿನ್ ಅವರು ಚನ್ನಮ್ಮ ಬೊಮ್ಮಾಯಿ ಅವರಿಗೆ ಸತ್ಕಾರ ಮಾಡಿದರು. ಇದನ್ನೂ ಓದಿ: ಟಿಪ್ಪು ಹಿಂದೂಗಳ ರಕ್ತ ಹರಿಸಿದ ನೆಲದಿಂದಲೇ ರಾಹುಲ್ ಯಾತ್ರೆ – ಕಾಂಗ್ರೆಸ್‌ಗೆ ರಾಹುಕಾಲ ಎಂದ BJP

Live Tv

Leave a Reply

Your email address will not be published. Required fields are marked *

Back to top button