ರಾಮನಗರ: ರಾಮನಗರ ಟೌನ್ ನಲ್ಲಿ ಪ್ರಚಾರದ ಸಮಯದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಮುಸ್ಲಿಂ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಮನಗರದ ಗೀತಾಮಂದಿರ ಬಡಾವಣೆಯ ದರ್ಗಾ ಬಳಿ ಈ ಘಟನೆ ನಡೆದಿದೆ. ಪ್ರಚಾರದ ವೇಳೆ ಮುಸ್ಲಿಮರು ಮೂಲಭೂತ ಸೌಕರ್ಯ, ರಸ್ತೆ ಮತ್ತು ಚರಂಡಿ ಅವ್ಯವಸ್ಥೆಯಿಂದ ಆಕ್ರೋಶಗೊಂಡು ಅನಿತಾ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿ ಕಿಡಿಕಾರಿದ್ದಾರೆ.
Advertisement
Advertisement
ನಮಗೆ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ. ಆದರೆ ನೀವು ಚುನಾವಣೆ ಬಂದಾಗ ಬರುತ್ತೀರಿ ಆಮೇಲೆ ಈ ಕಡೆ ಮುಖ ಕೂಡಾ ಹಾಕಲ್ಲ. ನಮ್ಮ ಪ್ರದೇಶಕ್ಕೆ ಸಮಸ್ಯೆ ನೋಡಲು ಬನ್ನಿ. ಮೊದಲು ನಮ್ಮ ಸಮಸ್ಯೆಯನ್ನು ನೀವು ಬಗೆಹರಿಸಿ. ಆಮೇಲೆ ನೀವು ವೋಟ್ ಕೇಳಿ ಎಂದು ಸಾರ್ವಜನಿಕರು ಗರಂ ಆಗಿಯೇ ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಸಾರ್ವಜನಿಕರ ಮಾತಿನಿಂದ ಅನಿತಾ ಕುಮಾರಸ್ವಾಮಿ ಅವರು ಇರಿಸು ಮುರಿಸಿಗೆ ಒಳಗಾಗಿ ಕೆಲಹೊತ್ತು ಏನೂ ಮಾತನಾಡದೇ ನಿಂತಿದ್ದರು. ಕಡೆಗೆ ಸ್ಥಳೀಯ ನಗರಸಭೆ ಸದಸ್ಯರಿಂದ ಸಮಾಧಾನ ಮಾಡುವ ಯತ್ನ ಮಾಡಿಸಿದ ಬಳಿಕ ಹಾಗೆ ಅನಿತಾ ಕುಮಾರಸ್ವಾಮಿ ಮುಂದೆ ಸಾಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv