ಬೆಂಗಳೂರು: ಉಡುಪಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಗುದ್ದು ನೀಡಿದ್ದಾರೆ.
ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಸಡನ್ ಆಗಿ ಪ್ರೀತಿ ಗೌರವ ಉಕ್ಕಿ ಬಂದಿದೆ. ನಾಲ್ಕು ವರ್ಷದ ಹಿಂದೆ ಇದೇ ಮೋದಿ, ನಾನು ಪ್ರಧಾನಿಯಾದ ಮೇಲೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸ್ತೀನಿ ಅಂದಿದ್ರು.
ಮೋದಿಗೆ ಇದೀಗ ದೇವೇಗೌಡರ ಮೇಲೆ ಉಕ್ಕಿರುವ ಲವ್, ಬಿಜೆಪಿ-ಜೆಡಿಎಸ್ ನಡುವಿನ ಒಳ ಒಪ್ಪಂದದ ಸಂಕೇತವೇ ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜಕೀಯದಲ್ಲಿ ಅವರು ನಮ್ಮ ವಿರೋಧಿಯಾಗಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಅವರು ನಮ್ಮ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷರು ದೇವೇಗೌಡರನ್ನು ಟೀಕಿಸಿದ್ದು ಎಷ್ಟು ಸರಿ? ಇದು ರಾಜಕೀಯ ಸಂಸ್ಕಾರವೇ ಎಂದು ಪ್ರಶ್ನಿಸಿ ಮೋದಿ ಟೀಕಿಸಿದ್ದರು.
ದೇವೇಗೌಡರು ವರಿಷ್ಠ ನಾಯಕರಲ್ಲಿ ಒಬ್ಬರು. ಅವರ ಬಗ್ಗೆ ಕೀಳಾಗಿ ಮಾತಾಡುವ ಹಕ್ಕು ಯಾರಿಗೂ ಇಲ್ಲ. ನಮಗೆ ರಾಜಕೀಯವಾಗಿ ಅವರೊಂದಿಗೆ ವಿರೋಧ ಇರಬಹುದು. ಆದರೆ ದೇವೇಗೌಡರು ಹೇಳಿದಾಗಲೆಲ್ಲಾ ನಾನು ಭೇಟಿ ಮಾಡಿದ್ದೇನೆ. ಮನೆಗೆ ಬಂದಾಗ ನಾನೇ ಮನೆಬಾಗಿಲಿಗೆ ಬಂದು ಸ್ವಾಗತಿಸಿದ್ದೇನೆ. ರಾಹುಲ್ ಗಾಂಧಿ ತಮ್ಮ ಪ್ರಚಾರ ಭಾಷಣದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕರೆದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ನರೇಂದ್ರ ಮೋದಿ ಉಡುಪಿಯಲ್ಲಿ ದೇವೇಗೌಡರನ್ನು ಹೊಗಳಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.