ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸಿಎಂ ಕಸರತ್ತು ಮಾಡುತ್ತಿದ್ದು, ಜೆಡಿಎಸ್ ತಂತ್ರಕ್ಕಿಂತ ಕಾಂಗ್ರೆಸ್ ನಾಯಕರ ಮೇಲೆ ಸಿಎಂ ಅವಲಂಬನೆಯಾಗಿದ್ದಾರೆ.
ಸರ್ಕಾರ ಉಳಿಸಿಕೊಳ್ಳುವುದಕ್ಕೆ ಸಿಎಂ ಅವರಿಗೆ ಕಾಂಗ್ರೆಸ್ ಒಂದೇ ದಾರಿ ಇರುವುದು. ಹೀಗಾಗಿ ಕಾಂಗ್ರೆಸ್ ನಡೆ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಅದರಂತೆಯೇ ಇಂದು ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರನ್ನು ಮನವೊಲಿಸಲು ಮುಂಬೈಗೆ ತೆರಳಿದ್ದಾರೆ.
ಜೆಡಿಎಸ್ ಮುಂದಿರುವ ಆಯ್ಕೆ:
ಹೆಚ್ಚು ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದರಿಂದ ಸ್ವತಃ ಸಿಎಂ ಅವರು ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಪ್ರಯತ್ನ ಮಾಡಬಹುದು. 14 ಜನ ಅತೃಪ್ತರಲ್ಲಿ 5-6 ಜನರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನೇ ಮನವೊಲಿಸಬಹುದು. ಕಾಂಗ್ರೆಸ್ ನಾಯಕರ ಮೂಲಕ ಶಾಸಕರ ಮನವೊಲಿಸಿ ಸರ್ಕಾರ ಸೇಫ್ ಮಾಡಿಕೊಳ್ಳುವುದು.
ಮೂವರು ಜೆಡಿಎಸ್ ಶಾಸಕರು ವಾಪಸ್ ಬರುವುದಿಲ್ಲ ಎಂದು ಸಿಎಂ ತೀರ್ಮಾನ ಮಾಡಿದ್ದಾರೆ. ಹೀಗಾಗಿ 3 ಮಂದಿ ಜೆಡಿಎಸ್ ಶಾಸಕರ ಆಸೆ ಕೈ ಬಿಟ್ಟು ಉಳಿದ ಶಾಸಕರನ್ನ ಭದ್ರ ಮಾಡಿಕೊಳ್ಳುವುದು. ಇನ್ನೂ ಎರಡು-ಮೂರು ದಿನ ಶಾಸಕರನ್ನ ರೆಸಾರ್ಟಿನಲ್ಲಿ ಇಟ್ಟು ಬಿಜೆಪಿ ಆಮಿಷಕ್ಕೆ ಬಲಿಯಾಗದಂತೆ ನೋಡಿಕೊಳ್ಳುವುದು. ಈಗ ರಾಜೀನಾಮೆ ಕೊಟ್ಟಿರುವವರಿಗೆ ಪಾಠ ಕಲಿಸಲು ಅನರ್ಹತೆ ಅಸ್ತ್ರ ಬಳಕೆ ಮಾಡಿ ಅವರ ರಾಜಕೀಯ ಜೀವನ ಮುಗಿಸುವುದು.
ರಾಜೀನಾಮೆ ಕೊಟ್ಟಿರುವ ಹೆಚ್ಚು ಜನ ಶಾಸಕರು ಕಾಂಗ್ರೆಸ್ ಅವರಾಗಿದ್ದಾರೆ. ಹೀಗಾಗಿ ಸಿಎಂ ಮತ್ತು ದೇವೇಗೌಡರು ಹೈಕಮಾಂಡ್ ಮೇಲೆ ಒತ್ತಡ ಹಾಕಿ ಕಾಂಗ್ರೆಸ್ ನಾಯಕರ ಮೂಲಕ ಶಾಸಕರ ಮನವೊಲಿಸಿ ಸರ್ಕಾರ ಸೇಫ್ ಮಾಡಿಕೊಳ್ಳುವುದು. ಇದೆಲ್ಲವೂ ಆಗಿಲ್ಲ ಅಂದರೆ ರಿವರ್ಸ್ ಆಪರೇಷನ್ ಮಾಡುವುದು. ಖುದ್ದು ಸಿಎಂ ಅತೃಪ್ತ ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿ ಸಚಿವ ಸ್ಥಾನದ ಆಫರ್ ನೀಡದೇ ರಾಜೀನಾಮೆ ಕೊಡಿಸುವುದು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿಎಂ ಆಗಬಾರದು ಅಂತ ಇರುವ 2-3 ಜನ ಶಾಸಕರನ್ನ ರಾಜೀನಾಮೆ ಕೊಡುವಂತೆ ಮಾಡಿ ಸದ್ಯಕ್ಕೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.