ಬೆಂಗಳೂರು:ಮುಖ್ಯಮಂತ್ರಿ ಅವರ ಗ್ರಾಮವಾಸ್ತವ್ಯಕ್ಕೆ ಭರದ ಸಿದ್ಧತೆ ನಡೆದಿದ್ದು, ಇದೀಗ ಜನರ ಬಳಿಗೆ ಸಿಂಪಲ್ಲಾಗಿ ಹೋಗಲು ಸಿಎಂ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಜೂನ್ 21ರಂದು ಯಾದಗಿರಿಯ ಗುರುಮಿಠ್ಕಲ್ನ ಚಂಡ್ರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಹೊರಟ ಸಿಎಂ ಸಿಂಪಲ್ಲಾಗಿಯೇ ಜನರ ಬಳಿಗೆ ಹೋಗಲು ತೀರ್ಮಾನ ಮಾಡಿದ್ದು, ಈ ಗ್ರಾಮಕ್ಕೆ ತೆರಳಲು ಮುಖ್ಯಮಂತ್ರಿಗಳು ರೈಲು ಮಾರ್ಗ ಬಳಸುತ್ತಿದ್ದಾರೆ.
Advertisement
ಜೂನ್ 20ರಂದು ರಾತ್ರಿ ಬೆಂಗಳೂರಿನಿಂದ ಯಾದಗಿರಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣ ಬೆಳೆಸಲಿದ್ದಾರೆ. ಜೂನ್ 21 ರಿಂದ ಹಳ್ಳಿ ಜನರ ಕಷ್ಟ ಕೇಳುವ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ. ಇಷ್ಟು ದಿನ ಬೇರೆ ಬೇರೆ ಗೊಂದಲಗಳಲ್ಲಿ ಸಿಲುಕಿದ್ದ ಸಿಎಂ, ಈಗ ಜನರ ಬಳಿಗೆ ಸಿಂಪಲ್ಲಾಗೆ ಹೋಗಲು ಮುಂದಾಗಿದ್ದು, ತಾವು ಬದಲಾಗಿದ್ದೇವೆ ಎಂದು ತೋರಿಸುತ್ತಿದ್ದಾರಾ ಅನ್ನೋ ಚರ್ಚೆ ಆರಂಭವಾಗಿದೆ.
Advertisement
Advertisement
ಮಂಗಳವಾರ ಇಡೀ ದಿನ ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆ ಸಭೆ ನಡೆಸಿದ್ದ ಸಿಎಂ ಇಂದು ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಸಿಇಓಗಳ ಸಭೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಇಡೀ ದಿನ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ರೈತರ ಸಾಲಮನ್ನಾ, ಬರ ನಿರ್ವಹಣೆ ಕುರಿತು ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಪ್ರತಿ ಜಿಲ್ಲಾವಾರು ಸಭೆ ನಡೆಸಲಿರುವ ಸಿಎಂ, ಜಿಲ್ಲೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.