ಬೆಂಗಳೂರು: ಎಲ್ಲರೂ ಒಟ್ಟಾಗಿ ಇರಿ, ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ ಹುಷಾರ್ ಅಂತ ಸಿಎಂ ಹೇಳಿದ್ದಾರೆ ಎಂದು ಜಿ.ಟಿ ದೇವೇಗೌಡರು ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಟಿಡಿ, ಸರ್ಕಾರ ಗಟ್ಟಿಯಾಗಿದೆ. ನೀವು ಎಲ್ಲರೂ ಒಟ್ಟಾಗಿ ಇರಿ. ಬಿಜೆಪಿ ಅವರು ಮೂವರು ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಈಗ ಮತ್ತೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ನೀವು ಎಲ್ಲರೂ ಕೂಡ ಒಗ್ಗಟಾಗಿ ಇರಿ. ನಾವು ಸರ್ಕಾರ ಉಳಿಸೋಣ. ನೀವು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಕೆ.ಸಿ ವೇಣುಗೋಪಾಲ್, ಸಿದ್ದರಾಮಯ್ಯ, ದೇವೇಗೌಡರು, ಸಿಎಂ, ಡಿ.ಕೆ ಶಿವಕುಮಾರ್, ಪರಮೇಶ್ವರ್, ಎಂ.ಬಿ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರು ಎಲ್ಲರೂ ಸೇರಿ ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ಮಾಡಿದ್ದಾರೆ. ಹೋಗಿರುವ ಎಲ್ಲ ಶಾಸಕರ ಜೊತೆ ಮಾತನಾಡಿ ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ. ಹಿರಿಯ ಸಚಿವರು ರಾಜೀನಾಮೆ ಕೊಡಬಹುದು. ಮಂತ್ರಿ ಮಾಡಿಲ್ಲ ಅಸಾಮಾಧಾನ ಮಾಡಿಕೊಂಡವರಿಗೆ ಮಂತ್ರಿ ಸ್ಥಾನ ಕೊಟ್ಟು ಸರ್ಕಾರ ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿದ್ದಾರೆ ಎಂದರು.
Advertisement
Advertisement
ನಮ್ಮ ಪಕ್ಷದ ಮೂವರು ಶಾಸಕರ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಎಲ್ಲರೂ ಒಟ್ಟಾಗಿ ಇರಿ ಎಂಬ ಸಂದೇಶವನ್ನು ನೀಡಿದ್ದಾರೆ. ಮೂವರು ಶಾಸಕರ ಬಗ್ಗೆ ನಾನೇ ನೋಡಿಕೊಳ್ಳುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನೀವು ಎಲ್ಲರೂ ಬೇಕಾದರೆ ಒಟ್ಟಿಗೆ ಉಪಾಹಾರಕ್ಕೆ ಸೇರಿ ಎರಡು ದಿನ ಎಲ್ಲರೂ ಒಟ್ಟಾಗಿ ಇರಿ. ನನ್ನದೇನು ಅಭ್ಯಂತರ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿಎಂಗೆ ಆತಂಕ ಇಲ್ಲ. ಅದರ ಬಗ್ಗೆ ನೀವು ಯೋಚನೆ ಮಾಡಬೇಡಿ. ನಮ್ಮ ಸರ್ಕಾರ ಮುಂದುವರಿಯುತ್ತದೆ ಎಂದು ಜಿಟಿಡಿ ಹೇಳಿದ್ದಾರೆ.
ವಿಶ್ವನಾಥ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅವರು ಯಾಕೆ ಪಕ್ಷ ಬಿಟ್ಟು ಹೋಗಿದ್ದಾರೆ ಎನ್ನುವ ಚರ್ಚೆ ಇಲ್ಲ. ಅದೆಲ್ಲವನ್ನೂ ನನಗೆ ಬಿಟ್ಟು ಬಿಡಿ. ಅದರ ಬಗ್ಗೆ ನೀವು ಮಾತನಾಡಬೇಡಿ. ಹಿರಿಯ ಸಚಿವರಿಗೆ ರಾಜೀನಾಮೆ ಕೊಡಿಸಬೇಕೆಂಬುದು ಕಾಂಗ್ರೆಸ್ – ಜೆಡಿಎಸ್ ಪಕ್ಷದಲ್ಲಿ ಮಾತನಾಡುತ್ತಿದ್ದಾರೆ. ಸರ್ಕಾರ ಉಳಿಸಿ, ನಾವು ಎಲ್ಲ ತ್ಯಾಗಕ್ಕೂ ಸಿದ್ಧವಿದ್ದೇವೆ. ನೀವೇ ಸಿಎಂ ಆಗಿ ಮುಂದುವರಿಯಬೇಕು. ಈ ಸರ್ಕಾರ ಉಳಿಸಿ ಎಂದು ಸಚಿವರು ಹೇಳುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ನಾವು ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ಸೇರಿ ಚರ್ಚೆ ನಡೆಸುತ್ತೇವೆ. ನಂತರ ನೀವೇ ಮಾತನಾಡಿ ಎಂದು ಸಿಎಂ ಹೇಳಿದ್ದಾರೆ. ಈ ಪಕ್ಷ ಕಟ್ಟುವ ಕೆಲಸ ನನ್ನದು. ನನ್ನ ಕೆಲಸವನ್ನು ನನಗೆ ಬಿಟ್ಟುಬಿಡಿ. ನಾನು ಪಕ್ಷ ಕಟ್ಟುತ್ತೇನೆ, ಸರ್ಕಾರ ನಡೆಸುವುದನ್ನು ಸಿಎಂ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ ಎಂದು ಜಿ.ಟಿ ದೇವೇಗೌಡ್ರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.