ಚೆನ್ನೈ: ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಹುತಾತ್ಮರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಣ್ಣಾ (ಸಿಎನ್ ಅಣ್ಣಾದೊರೈ) ಅವರು 1967ರಲ್ಲಿ ಅಧಿಕಾರಕ್ಕೆ ಬಂದಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತಂದು ರಾಜ್ಯಕ್ಕೆ ತಮಿಳುನಾಡು ಅಂತ ಹೆಸರಿಟ್ಟರು. ರಾಜ್ಯದ ಭಾಷೆಗಳನ್ನು ರಾಷ್ಟ್ರದ ಅಧಿಕೃತ ಭಾಷೆಗಳನ್ನಾಗಿ ಮಾಡುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಇನ್ನು ನಾವು ಹೆಣಗಾಡುತ್ತಿದ್ದೇವೆ. ನಾವು ತಮಿಳಿಗರು ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಯಾವುದೇ ಸಂಕುಚಿತ ಮನಸ್ಸನ್ನು ಹೊಂದಿಲ್ಲ. ನಾವು ಹಿಂದಿ ಮಾತ್ರವಲ್ಲ. ಯಾವುದೇ ಭಾಷೆಯ ವಿರೋಧಿಗಳಲ್ಲ ಎಂದಿದ್ದಾರೆ. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ
Advertisement
Advertisement
ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ನಾವು ತಮಿಳನ್ನು ಇಷ್ಟಪಡುತ್ತೇವೆ. ಹಾಗೆಂದ ಮಾತ್ರಕ್ಕೆ ನಾವು ಇನ್ನೊಂದು ಭಾಷೆಯನ್ನು ದ್ವೇಷಿಸುತ್ತೇವೆ ಎಂದು ಅರ್ಥವಲ್ಲ. ಒಂದು ಭಾಷೆಯನ್ನು ಕಲಿಯಲು ಒಬ್ಬ ವ್ಯಕ್ತಿಗೆ ಆಸಕ್ತಿ ಬರಬೇಕು ಮತ್ತು ಅದನ್ನು ಎಂದಿಗೂ ಹೇರಬಾರದು ಹೇಳಿದ್ದಾರೆ.
Advertisement
ಹಿಂದಿಯನ್ನು ಹೇರಲು ಬಯಸುವವರು ಅದನ್ನು ಪ್ರಾಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಒಂದೇ ಧರ್ಮ ಇರಬೇಕು ಎಂದು ಕೊಂಡಂತೆ, ಒಂದೇ ಭಾಷೆ ಇರಬೇಕು ಎಂದು ಭಾವಿಸುತ್ತಾರೆ. ಹಿಂದಿಯನ್ನು ಹೇರಲು ಬಯಸುವವರು ಹಿಂದಿ ಭಾಷಿಕರನ್ನು ಎಲ್ಲಾ ಇಲಾಖೆಗಳಲ್ಲಿ ಸೇರಿಸಿ ಹಿಂದಿ ಭಾಷಿಕರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಈಗ ಮನೆಯಲ್ಲೇ ಕುಳಿತು ಡಿಎಲ್ ನವೀಕರಣ ಮಾಡಿ
Advertisement
ಒಬ್ಬರ ಮಾತೃಭಾಷೆಯನ್ನು ಹಿಂದಿಯಾಗಿ ಬದಲಾಯಿಸಲು ಪ್ರಯತ್ನಿಸುತ್ತಿರುವುದನ್ನು ನಾವು ವಿರೋಧಿಸುತ್ತೇವೆ. ಅವರಿಗೆ ತಮಿಳು ಮತ್ತು ತಮಿಳುನಾಡು ಕಹಿಯಾಗಿವೆ ಎಂದರು. ಅಲ್ಲದೇ ತಮಿಳುನಾಡು ಟ್ಯಾಬ್ಲೋವನ್ನು ತಿರಸ್ಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದಿದ್ದಾರೆ.