ಬೆಳಗಾವಿ: ಮೋದಿ ಮಾತನಾಡುವ ಶೈಲಿಯಲ್ಲಿ ಕೈ ಮಾಡಿ ನಟನೆ ಮಾಡುತ್ತಾ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಭಾಷಣ ಮಾಡಿದ್ರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮೋದಿ ಸ್ಟೈಲ್ ನಲ್ಲಿ ಮಾತಾನಾಡಿದ ಸಿಎಂ, ಏನಪ್ಪ ಆಯ್ತು ಸಬ್ ಕಾ ವಿಕಾಸ್? ಅಚ್ಚೇ ದಿನ್ ಆಯೇಗಾ ಅಂದ್ರು, ಕಬ್ ಆಯೇಗಾ? ಕಿಸ್ಕೋ ಆಯೇಗಾ? ಅಂತಾ ಪ್ರಧಾನಿಗೆ ಪ್ರಶ್ನೆ ಹಾಕಿದ್ರು.
ವಿದೇಶದಲ್ಲಿರುವ ಕಪ್ಪು ಹಣ ತಂದು 100 ದಿನಗಳಲ್ಲಿ ಎಲ್ಲರ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂದ್ರು. 15 ಪೈಸೆನಾದ್ರೂ ಹಾಕಿದ್ರಾ ಅಂತ ಕೇಳಿದ್ರು.
ಮಹದಾಯಿ ಸಮಸ್ಯೆ ಯಡಿಯೂರಪ್ಪ ಬಗೆಹರಿಸ್ತಿನಿ ಅಂತಿರೋದು ಸಂತೋಷಕರ ಸಂಗತಿ. ದೆಹಲಿಗೆ ನಿಯೋಗ ಕರೆದುಕೊಂಡು ಹೋದಾಗ ಪ್ರಧಾನಿ ಮುಂದೆ ಯಾವುದೇ ಮಾತಾಡಲಿಲ್ಲ. ಈಗ ಚುನಾವಣೆ ಬರ್ತಿದ್ದಂತೆ ಇವರಿಗೆ ನೆನಪಾಗಿದೆ. ಈ ಭಾಗದಲ್ಲಿ ಪ್ರವಾಸ ಮಾಡ್ತಾ ಇದ್ದಾರೆ. ಯಾತ್ರೆಗೋಸ್ಕರ ಹೀಗೆ ಹೇಳ್ತಾ ಇದ್ದಾರೆ. ಸ್ವತಃ ಟ್ರಿಬುನಲ್ ನವರೇ ಸಮಸ್ಯೆಯನ್ನ ಹೊರಗಡೆ ಬಗೆಹರಿಸಿಕೊಳ್ಳಿ ಅಂತಾ ಹೇಳಿದ್ದಾರೆ. ನಾನು ಗೊವಾ ಸಿಎಂ ಜೊತೆ ಮಾತನಾಡಿದ್ದೇನೆ. ಅವರು ಮಾತುಕತೆಗೆ ಒಪ್ಪುತ್ತಿಲ್ಲ. ಯಡಿಯೂರಪ್ಪ 1 ತಿಂಗಳಲ್ಲಿ ಸಮಸ್ಯೆ ಬಗೆಹರಿಸ್ತಿನಿ ಅಂತಾ ಇದ್ದಾರೆ. ನಾನು ಒಂದು ತಿಂಗಳು ಕಾದು ನೋಡ್ತೀನಿ ಅಂತ ಹೇಳಿದ್ರು.
ಶೋಭಾ ಕರಂದ್ಲಾಜೆ ವಿದ್ಯುತ್ ಹಗರಣ ಪ್ರಕರಣದ ಕುರಿತು ಮಾತನಾಡಿದ ಸಿಎಂ, ತನಿಖೆ ಹೇಗೆ ಮಾಡಿಸಬೇಕು ಅನ್ನೋದು ನಮಗೆ ಗೊತ್ತು. ಯಡಿಯೂರಪ್ಪನ ಕೇಳಿ ತನಿಖೆ ಮಾಡಸೋಕೆ ಆಗಲ್ಲ. ಮೋದಿಯಿಂದ ರಕ್ಷಣೆ ಪಡೆಯಲು ಸಿಬಿಐ ತನಿಖೆಗೆ ಯಡಿಯೂರಪ್ಪ ಒತ್ತಾಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ 6 ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇವೆ. ಚೋರ ಬಚಾವ್ ಸಂಸ್ಥೆ ಅನ್ನುತ್ತಿದ್ದ ಇವರಿಗೆ ಈಗ ಸಿಬಿಐ ಮೇಲೆ ಪ್ರೀತಿ ಬಂದಿದೆ ಅಂದ್ರು.
ಜಾರ್ಜ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪ ಎಫ್‍ಐಆರ್ ಆಗಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ. ತಪ್ಪಿತಸ್ಥ ಎಂದು ಆದೇಶ ಬರುವವರೆಗೂ ಜಾರ್ಜ್ ರಾಜೀನಾಮೆ ಪಡೆಯುವುದಿಲ್ಲ ಅಂತ ಹೇಳಿದ್ರು.
ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಾಣವಾಗಿರುವ ನೂತನ ಶಿಕ್ಷಣ ಇಲಾಖೆಯ ಡಿಡಿಪಿಐ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಈ ಹೇಳಿಕೆ ನೀಡಿದ್ರು.
https://www.youtube.com/watch?v=cJrZDsuA9K8&feature=youtu.be