Connect with us

Districts

2018ರ ಚುನಾವಣೆ ಗೆಲ್ಲಲು ‘ಕೈ’ ಕಸರತ್ತು- ಪ್ರೊ. ಕೃಷ್ಣೇಗೌಡರಿಗೆ ಸಿಎಂ ಗಾಳ

Published

on

ಮಂಡ್ಯ: 2018 ರ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು ಆರಂಭಿಸಿದ್ದು, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಸಿಎಂ ಸಿದ್ದರಾಮಯ್ಯ ಪ್ರೊ. ಕೃಷ್ಣೇಗೌಡರಿಗೆ ಗಾಳ ಹಾಕಿದ್ದಾರೆ.

ಈಗಾಗಲೇ ಪಾಂಡವಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲುವಂತೆ ಮನವೊಲಿಸಲು ಕೃಷ್ಣೆಗೌಡರ ಜೊತೆ ಎರಡು ಸುತ್ತಿನ ಮಾತುಕತೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಜನರನ್ನು ಆಕರ್ಷಿಸಲು ಸಿಎಂ ಸಿದ್ದರಾಮಯ್ಯ ಫೇಸ್ ವ್ಯಾಲ್ಯು ಇರುವವರಿಗೆ ಮಣೆ ಹಾಕಲು ಮುಂದಾಗಿದ್ದಾರಾ ಎಂಬ ಅನುಮನಕ್ಕೆ ಕಾರಣವಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಅಂಬರೀಶ್ ಆಪ್ತ ಎಲ್.ಡಿ.ರವಿ ಅವರಿಗೆ ಟಿಕೆಟ್ ನೀಡಿಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದರು.

ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಶತಯ ಗಾತಯ ಗೆಲ್ಲುವ ವ್ಯಕ್ತಿಗಳಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು, ಪಾಂಡವಪುರ ಕ್ಷೇತ್ರದಿಂದ ಕೃಷ್ಣೇಗೌಡರನ್ನು ಕಣಕ್ಕಿಳಿಸಲು ಮಾಸ್ಟರ್‍ಪ್ಲಾನ್ ಸಿದ್ಧವಾಗಿದೆ. ತಮ್ಮ ಮಾತಿನ ಮೂಲಕ ಇಡೀ ಕರ್ನಾಟಕದ ಉದ್ದಗಾಲಕ್ಕೂ ಹೆಸರು ಮಾಡಿರುವ ಪ್ರೊ. ಕೃಷ್ಣೇಗೌಡರು ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಮರಡಿ ಗ್ರಾಮದವರು. ಹಾಸ್ಯ ಕಲಾವಿದರಾಗಿ ರಾಜ್ಯಾದ್ಯಂತ ಮನೆಮಾತಾಗಿರುವ ಪ್ರೊ.ಕೃಷ್ಣೆಗೌಡರ ಜನಪ್ರಿಯತೆಯನ್ನು ಬಳಸಿಕೊಂಡು ಪಾಂಡವಪುರದಲ್ಲಿ ಗೆಲುವಿನ ದಡ ಸೇರಲು ಸಿಎಂ ತಯಾರಿ ನಡೆಸಿದ್ದಾರೆ.

ಸಿಎಂ ಆಫರ್‍ಗೆ ಯಾವುದೇ ಖಚಿತ ನಿರ್ಣಯವನ್ನು ಕೃಷ್ಣೇಗೌಡರು ತೆಗೆದುಕೊಂಡಿಲ್ಲ ಎಂಬ ಮಾಹಿತಿ ಲಭಿಸಿದ್ದು, ನೋಡೋಣ ಎಂಬ ಉತ್ತರವಷ್ಟೇ ಸಿಎಂ ಅವರಿಗೆ ತಲುಪಿದೆ. ಇನ್ನುಳಿದಂತೆ ಪಾಂಡವಪುರ ಕೇತ್ರದಿಂದ ಪುಟ್ಟಣ್ಣಯ್ಯ ಹಾಗೂ ಪುಟ್ಟರಾಜು ಪ್ರಬಲ ಅಭ್ಯರ್ಥಿಗಳಾಗಿ ಸ್ಪರ್ಧೆಗೆ ಸಿದ್ಧರಾಗಿದ್ದು, ಕಾಂಗ್ರೆಸ್‍ನ ಲೆಕ್ಕಾಚಾರಗಳು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

https://www.youtube.com/watch?v=OmqBEZOWzLw

https://www.youtube.com/watch?v=FSUs8LUBMP8

https://www.youtube.com/watch?v=J-zH0UQ_pmk

Click to comment

Leave a Reply

Your email address will not be published. Required fields are marked *