ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇದೆ. ಇಲ್ಲಿ ನಾವು ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಪಂಚರಾಜ್ಯಗಳ ಚುನಾವಣಾ ರಿಸಲ್ಟ್ ಹೊರಬೀಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದಕ್ಕೆ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರಿಬ್ಬರ ಮಧ್ಯೆ ನಡೆದ ಜಗಳವೂ ಕಾರಣವಾಗಿರಬಹುದು. ಏನೇ ಆಗ್ಲಿ ಇಲ್ಲಿ ನಾವು ಜನ ಕೊಟ್ಟಿರೋ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಯಾವುದೇ ರಾಜ್ಯದಲ್ಲಿ ಏನೇ ಕಾರಣಗಳಿದ್ದರೂ ಕೂಡ ಜನ ಕೊಟ್ಟಿರೋ ತೀರ್ಪಿಗೆ ಬದ್ಧರಾಗಬೇಕು ಅಂತಾ ತಿಳಿಸಿದ್ರು.
Advertisement
ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್‍ನ ಗೆಲುವನ್ನು ನಿರೀಕ್ಷಿಸಿದ್ದೇವೆ. ಪಂಜಾಬ್‍ನಲ್ಲಿ ಮೋದಿ ಬಹಳ ಸರಿ ಭಾಷಣ ಮಾಡಿದ್ದಾರೆ. ಆದ್ರೆ ಯಾಕೆ ಅಲ್ಲಿ ಮೋದಿ ಅಲೆ ಫಲಫ್ರದವಾಗಿಲ್ಲ. ಉತ್ತರ ಪ್ರದೇಶಕ್ಕೆ ಮಾತ್ರ ಮೋದಿ ಅಲೆ ಸೀಮಿತವಾಗಿದೆಯಾ ಅಂತಾ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಅಲೆಯಿಂದ ಗೆಲುವು ಅನ್ನೋದು ಸುಳ್ಳು ಅಂತಾ ಹೇಳಿದ್ರು.