Monday, 16th July 2018

Recent News

ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ

ಮೈಸೂರು: ಸಿದ್ದರಾಮಯ್ಯಗೆ ಏಕವಚನವು ಗೊತ್ತಿಲ್ಲ ಹಾಗೂ ಬಹುವಚನವು ಗೊತ್ತಿಲ್ಲ. ಅಂತಹ ವ್ಯಕ್ತಿ ಸಂಧಿ ಪಾಠ ಮಾಡಲು ಬರುತ್ತಾರೆ ಎಂದು ಸಿಎಂ ವ್ಯಾಕರಣದ ಕುರಿತು ಮಾಜಿ ಸಂಸದ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ. ಆ ಸಂಧಿ ಯಾವುದು ಅಂತ ನನಗೆ ಗೊತ್ತಿಲ್ಲಪ್ಪ ಎಂದು ಪ್ರತಿಕ್ರಿಯಿಸಿದರು.

ವಿಶ್ವನಾಥ್ ಒಬ್ಬ ಹುಚ್ಚ ಅಂತಾ ಸಿಎಂ ಖಾಸಗಿ ಮಾತುಕತೆಯಲ್ಲಿ ಹೇಳಿದ್ದಾರೆ. ಇದು ಸರಿಯಲ್ಲ, ಇಷ್ಟು ಲಘುವಾಗಿ ಮಾತಾಡಬೇಡಿ. ನೀವು ಸಿಎಂ ಇರಬಹುದು, ನಾನು ಸಿಎಂ ಅಲ್ಲದೇ ಇರಬಹುದು. ಆದರೆ ಶಾಸಕನಾಗಿ, ಮಂತ್ರಿಯಾಗಿ ಸಂಸದನಾಗಿ ಜನ ಮೆಚ್ಚುವಂತಹ ಕೆಲಸ ಮಾಡಿದ್ದೇನೆ. ಅನ್ನಭಾಗ್ಯದಂತಹ ಯೋಜನೆ ನಿಮಗೆ ಕೊಟ್ಟಿದ್ದು ಇದೇ ವಿಶ್ವನಾಥ್ ನೆನಪಿರಲಿ. ನೀವು ಒಂದು ಪಕ್ಷದಿಂದ ಹೊರಬಂದಾಗ ಇದೇ ವಿಶ್ವನಾಥ್ ನಿಮ್ಮ ನೆರವಿಗೆ ಬಂದಿದ್ದು ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.

ನಿಮ್ಮ ಗನ್ ಮ್ಯಾನ್ ಥರ ನಾನು ಎಲ್ಲರ ಮನೆಗೆ ಕರೆದುಕೊಂಡು ಹೋಗಿ ಹೂವಿನ ಬೊಕ್ಕೆ ಕೊಟ್ಟು ಬಂದಿದ್ದು ನೆನಪಿಲ್ವಾ? ಯಾರು ನಿಮಗೆ ಸಹಾಯ ಮಾಡುತ್ತಾರೋ ಅವರನ್ನು ಸಾಯಿಸಿ ಅನ್ನೋದು ನಿಮ್ಮ ಜಾತಕದಲ್ಲಿ ಇರಬೇಕು. ನನಗೆ ಮತ ಹಾಕಬೇಡಿ ಅನ್ನೋಕೆ ನೀವೇನೂ ಕುರುಬ ಸಮಾಜದ ಮನೆ ನಡೆಸುವ ವ್ಯಕ್ತಿಯೇ? ನಿಮಗೆ ದುಡಿದೆ, ಅಧಿಕಾರ ಇದೆ, ದರ್ಪ ಇದೆ. ಆದರೆ ಕಾಮನ್ ಸೆನ್ಸ್ ಇಲ್ಲ ಎಂದು ಸಿಎಂ ವಿರುದ್ಧ ವಿಶ್ವನಾಥ್ ತಮ್ಮ ಆಕ್ರೋಶವನ್ನು ಹೊರಹಾಕಿದರು.

ನನಗೆ ಫ್ಹೀರಾನ್ ಅನ್ನೋ ವ್ಯಕ್ತಿ ದೆಹಲಿಯಲ್ಲಿ ಸಹಾಯ ಮಾಡಿದ ಅಂತಾ ಹೇಳುತ್ತಿರಲ್ಲವಾ? ಈ ಫ್ಹೀರಾನ್ ಒಬ್ಬ ಹಣದ ದಂಧೆ ಮಾಡೋ ವ್ಯಕ್ತಿ. ಇಡೀ ಕುರುಬರೆಲ್ಲಾ ನನ್ನ ಜೊತೆ ಇದ್ದಾರೆ ಅಂತಾ ಅಂದುಕೊಂಡಿದ್ದೀರಾ. ಹಿಂದೆ ಆ ಕಾಲ ಇತ್ತು. ಆದರೆ ಈಗ ಹಾಗಿಲ್ಲ. ನಿಮ್ಮ ಜೊತೆ ಕುರುಬರು ಇಲ್ಲ. ಈ ರಾಜ್ಯದ ಒಬ್ಬ ಕಿಕ್ ಬ್ಯಾಕ್ ಸಿಎಂ ಅಂದರೆ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲೂ ಚುನಾವಣೆಗೆ ನಿಲ್ಲಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ಎದರಿಸೋಕೆ ಹೀಗೆ ಹೇಳುತ್ತಿದ್ದಾರೆ. ಚುನಾವಣೆಗೆ ಒಂದು ತಿಂಗಳು ಮುಂಚೆ ನಾನು ಎಲ್ಲೂ ಚುನಾವಣೆಗೆ ನಿಲ್ಲಲ್ಲ ಅಂತಾ ಹೇಳುತ್ತಾರೆ. ನೋಡ್ತಾ ಇರಿ ಎಂದರು.

Leave a Reply

Your email address will not be published. Required fields are marked *