ಬೆಂಗಳೂರು: ಕಾಂಗ್ರೆಸ್ ಸಮಾವೇಶದಲ್ಲಿ ದುರಂತವೊಂದು ತಪ್ಪಿದ್ದು, ಕಟೌಟ್ ಹಾಕಿದ್ದ ಮರದ ಸ್ಟ್ಯಾಂಡ್ ಗಾಳಿಗೆ ಮುರಿದುಬಿದ್ದಿದೆ.
ಅರಮನೆ ಮೈದಾನದಲ್ಲಿ ಭಾನುವಾರದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ಎಸ್‍ಆರ್ ಪಾಟೀಲ್, ದಿನೇಶ್ ಗುಂಡೂರಾವ್ ಅವರ ದೊಡ್ಡ ಕಟೌಟ್ ಹಾಕಲಾಗಿತ್ತು. ಆದರೆ ಗಾಳಿಗೆ ಈ ಕಟೌಟ್ ಮುರಿದು ಬಿದ್ದಿದೆ.
Advertisement
Advertisement
ವೇದಿಕೆ ಎಡಭಾಗದ ಕಟೌಟ್ ಸ್ಟ್ಯಾಂಡ್ ಕುಸಿದು ಬಿದ್ದು ಐದು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಪೊಲೀಸ್ ಪೇದೆ ಹಾಗೂ ನಾಲ್ವರು ಸಾರ್ವಜನಿಕರಿಗೆ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Advertisement
ಇಷ್ಟು ದೊಡ್ಡ ಗಾತ್ರದ ಮರಗಳ ಕಟೌಟ್ ಹೂಳಬೇಕಾದರೆ ಕನಿಷ್ಟ ನಾಲ್ಕು ಅಡಿ ಮಣ್ಣನ್ನು ತೆಗೆಯಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಕೇವಲ ಅರ್ಧ ಅಡಿ ಮಣ್ಣನ್ನು ತೆಗೆದು ಕಟ್ಟಲಾಗಿತ್ತು. ಬೃಹತ್ ಗಾತ್ರದ ಕಟೌಟ್ ಗಳು ಆಗಿದ್ದ ಕಾರಣ ವೇಗವಾಗಿ ಬೀಸಿದ ಗಾಳಿಗೆ ನೆಲಕ್ಕೆ ಉರುಳಿದೆ.
Advertisement
ಗಾಳಿ ಜೋರಾಗಿ ಬೀಸಿದ ಪರಿಣಾಮ ಕಟೌಟ್ ಗಳು ಕೆಳಗೆ ಬಿದ್ದಿವೆ. ಇಂತಹ ಕಾರ್ಯಕ್ರಮ ನಡೆಯುವಾಗ ಸರಿಯಾಗಿ ಕಟೌಟ್ ಗಳನ್ನು ನಿರ್ಮಿಸಬೇಕಿತ್ತು. ಸರಿಯಾಗಿ ಕಟ್ಟದೆ ಇರೋದಕ್ಕೆ ಈ ರೀತಿ ಆಗಿದೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=rc32_blkBXU