ಮೈಸೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ದೊಡ್ಡ ಸದ್ದು ಮಾಡ್ತಿರೋ ಬೆನ್ನಲ್ಲೇ 50:50 ಅನುಪಾತದಲ್ಲೇ ಸಿಎಂ (Siddaramaiah) ಪತ್ನಿಗೂ ಭಾರೀ ಪ್ರಮಾಣದ ಭೂಮಿ ದೊರಕಿರುವ ದಾಖಲೆ ಸಿಕ್ಕಿವೆ.
ಸಿಎಂ ಪತ್ನಿ ಪಾರ್ವತಿ (Parvathamma) ಅವರ ಹೆಸರಿನಲ್ಲಿ ಇದ್ದ ಜಾಗವನ್ನು 1997 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದು, ಆ ಭೂಮಿಗೆ 2021 ರಲ್ಲಿ ಪರಿಹಾರ ಕೊಟ್ಟಿದೆ. ಸಿಎಂ ಪತ್ನಿಗೆ ನೀಡಿರುವ 50:50 ಅನುಪಾತದ ಪರಿಹಾರದ ಸುತ್ತ ಅನುಮಾದ ಹುತ್ತ ಬೆಳೆದಿದೆ. 1997 ರ ಆಗಸ್ಟ್ 20 ರಂದು ಮೈಸೂರು ತಾಲೂಕು ಕೆಸೆರೆ ಗ್ರಾಮದ ಸರ್ವೆ ನಂ.464 ರಲ್ಲಿ 3.16 ಎಕರೆ ಭೂಮಿ ನೋಟಿಫೈ ಮಾಡಲಾಗಿತ್ತು.
Advertisement
Advertisement
ದೇವನೂರು ಮೂರನೇ ಹಂತ ಬಡವಾಣೆ ಅಭಿವೃದ್ದಿಗೆ ಅದಿಸೂಚನೆ ಮಾಡಲಾಗಿದ್ದ ಭೂಮಿ ಇದಾಗಿತ್ತು. ಆ ಕಾಲದಲ್ಲೇ 3,24,700 ರೂ. ವೈಯಕ್ತಿಕ ಅವಾರ್ಡ್ ನೀಡಲಾಗಿತ್ತು. 2014ರ ಜೂನ್ 23ರಲ್ಲಿ ಮುಡಾಗೆ ಬದಲಿ ನಿವೇಶನ ನೀಡುವಂತೆ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಈ ಸಂಬಂಧ 2017 ಡಿಸೆಂಬರ್ 15 ಹಾಗೂ 2014ರ ಡಿಸೆಂಬರ್ 30 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಅರ್ಜಿದಾರರ ಭೂಮಿಗೆ ಸಮನಾಗಿ ಅಭಿವೃದ್ಧಿಪಡಿಸದ ಜಮೀನನ್ನ ನೀಡಲು ತೀರ್ಮಾನ ಮಾಡಿದ್ದಾರೆ. ಅದಕ್ಕೂ ಒಪ್ಪದ ಸಿಎಂ ಪತ್ನಿ 2021 ರ ಅಕ್ಟೋಬರ್ 25 ರಲ್ಲಿ ಮುಡಾಗೆ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ನೀಡುವಂತೆ ಕೋರಿ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಈ ಕೋರಿಕೆಯಂತೆ 2021ರ ಅಕ್ಟೋಬರ್ 29 ರಂದು 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ 38,284 ಚದರ ಅಡಿ ಅಳತೆಯ ನಿವೇಶನವನ್ನ ಆಯುಕ್ತರು ನೀಡಿದ್ದರು. ಇದರೊಂದಿಗೆ 1997 ರಲ್ಲಿ ಕಳೆದುಕೊಂಡ ಭೂಮಿಗೆ 2021 ರಲ್ಲಿ ಸಿಎಂ ಪತ್ನಿ ಪರಿಹಾರ ಪಡೆದಿರುವು ದಾಖಲೆ ಬಯಲಾಗಿದೆ.