ಬೆಂಗಳೂರು: ರಾಜ್ಯ ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜಕೀಯ ದಾಳ ಉರುಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. 16ನೇ ದಾಖಲೆ ಬಜೆಟ್ (Budget) ಮಂಡನೆ ಬಳಿಕ ಪೊಲಿಟಿಕಲ್ ಟ್ವಿಸ್ಟ್ ಸಿಗುವ ಲೆಕ್ಕಚಾರಗಳು ಗರಿಗೆದರಲಿವೆ.
ಪವರ್ ಶೇರ್ ವಿಚಾರವಾಗಿ ಯಾವುದೇ ಸ್ಪಷ್ಟತೆ ಸಿಗದೇ ಕಾಂಗ್ರೆಸ್ (Congress) ಒಳಗಿನ ವಾರ್ ನಿಲ್ಲುತ್ತಿಲ್ಲ. ಯಾರಿಗೆ ಹೇಳಬೇಕು? ಯಾರನ್ನ ಸಮಾಧಾನಪಡಿಸಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ (High Command) ಇದೆ. ಹಾಗಾಗಿ ಹೈಕಮಾಂಡ್ ಧರ್ಮಸಂಕಟಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಪರಿಹಾರ ಮಾರ್ಗ ತೋರಿಸುವ ಬಗ್ಗೆ ಕುತೂಹಲ ಇದೆ. ಇದನ್ನೂ ಓದಿ: ಅನ್ನಭಾಗ್ಯ ದುಡ್ಡು ಇಲ್ಲ, ಗೃಹಲಕ್ಷ್ಮಿಯೂ ಇಲ್ಲ – ಗ್ಯಾರಂಟಿಗೆ ʼಗ್ಯಾರಂಟಿʼ ಇಲ್ಲ!
Advertisement
Advertisement
ಸದ್ಯ ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ಧತಾ ಸಭೆಗಳಲ್ಲಿ ಬ್ಯುಸಿ ಇದ್ದಾರೆ. ದಾಖಲೆಯ 16ನೇ ಬಜೆಟ್ ಮಂಡನೆ ಬಳಿಕ ಪೊಲಿಟಿಕಲ್ ಗೇಮ್ ಚೇಂಜ್ ಗೆ ಮುಂದಾಗುವ ಸಾಧ್ಯತೆ ಇದೆ. ದೇವರಾಜ ಅರಸು ಅವರ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆ ಬರೆಯವ ಉತ್ಸಾಹದಲ್ಲಿರುವ ಸಿಎಂ ಸಿದ್ದರಾಮಯ್ಯ, ದಾಖಲೆ ಬಳಿಕ ಮುಂದೇನು ಎಂಬ ಬಗ್ಗೆ ಸೂಕ್ಷ್ಮವಾಗಿ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಬಗ್ಗೆ ಸಿದ್ದು ಆಪ್ತ ವಲಯದಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ:ಮೂವರನ್ನು ಕೊಲೆ ಮಾಡಿದ್ದೇನೆ, ನಾನು ಸಾಯ್ತಿನಿ – ಅಮೆರಿಕದಲ್ಲಿರುವ ಅಣ್ಣನಿಗೆ ಫೋನ್ ಮಾಡಿ ಹೇಳಿದ್ದ ಚೇತನ್
Advertisement
ರೆಕಾರ್ಡ್ ಎಂಬ ಚೆಕ್ ಮೇಟ್ ಸುತ್ತ ಅನುಮಾನದ ಹುತ್ತ ಹೆಚ್ಚಾಗಿದ್ದು,ಹೈಕಮಾಂಡ್ ನಾಜೂಕಾಗಿ ಬಗೆಹರಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ಸಿದ್ದರಾಮಯ್ಯ ಆ ಸಂದೇಶದಿಂದ ರಾಜಕೀಯ ದಿಕ್ಕು ಬದಲಾಗುತ್ತಾ? ಯಾರಿಗೆ ಲಕ್? ಯಾರಿಗೆ ಶಾಕ್? ಹೈಕಮಾಂಡ್‌ಗೆ ಸ್ಪಷ್ಟನೆ ನೀಡುತ್ತಾರಾ ಸಿಎಂ ಸಿದ್ದರಾಮಯ್ಯ ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ.
Advertisement