ಚಿಕ್ಕಬಳ್ಳಾಪುರ: ಹೊಸ ಪಂಚೆ, ಹೊಸ ಶಲ್ಯ ಧರಿಸಿ ಹೆಲಿಕಾಪ್ಟರ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯನವರು ಅರೆಕ್ಷಣ ಕಸಿವಿಸಿಗೊಂಡ ಘಟನೆ ನಡೆದಿದೆ.
ಅದಕ್ಕೆ ಕಾರಣವಾಗಿದ್ದು ಅವರ ಪಂಚೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ನೂತನ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆಗೆಂದು ಜಿಲ್ಲೆಗೆ ಆಗಮಿಸಿದ್ದರು.
ಇದನ್ನೂ ಓದಿ: ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ
ಹೆಲಿಕಾಪ್ಟರ್ ನಿಂದ ಇಳಿದು ನಡೆದುಕೊಂಡು ಬರುವಾಗ ಮುಖ್ಯಮಂತ್ರಿಯವರಿಗೆ ತನ್ನ ಪಂಚೆಯ ಕೊನೆ ಹರಿದಿರುವ ವಿಚಾರ ಗಮನಕ್ಕೆ ಬಂತು. ಅಂತೆಯೇ ಸಿಎಂ ಅವರು ಅಲ್ಲಿಯೇ ಹರಿಯಲು ಯತ್ನಿಸಿದರಾದ್ರೂ ಅದು ಸಾಧ್ಯವಾಗಲಿಲ್ಲ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಲು ನಿಂತಿದ್ದ ವೇಳೆ ಪಂಚೆಯ ಕೊನೆಯನ್ನು ತನ್ನ ಕೈಯಲ್ಲಿ ಕಿತ್ತಾಕಿದ್ರು.
ನಂತರ ಎಸ್ ಜೆ ಸಿ ಐಟಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ಬಂದ ಸಿಎಂ ಸಿದ್ದರಾಮಯ್ಯ, ಹರಿದ ಪಂಚೆಯನ್ನ ಬದಲಿಸಿ, ಹೊಸ ಪಂಚೆ ಉಟ್ಟುಕೊಂಡು ದೇವರ ದರ್ಶನಕ್ಕೆ ತೆರಳಿದ್ರು.
https://www.youtube.com/watch?v=w3IRCe2EFgk