– ರಕ್ಷಣೆಗಾಗಿ ಪೊಲೀಸರ ಮೊರೆಹೋದ ಸ್ಮಿತಾ ರಾಕೇಶ್
ಬೆಂಗಳೂರು: ಸಿಎಂ ಸಿದ್ದರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಿದ್ದಾರೆ.
ತಮ್ಮ ನಿವಾಸದ ಹೊರಗೆ ರಾತ್ರಿಯಲ್ಲಿ ಅಪರಿಚಿತರು ಓಡಾಟ ನಡೆಸುತ್ತಾರೆ. ಎರಡು ದಿನದ ಹಿಂದೆ ಹಲಸಿನ ಮರ ಹಣ್ಣುಗಳನ್ನು ಮನೆಯ ಕಾಂಪೌಂಡ್‍ನಲ್ಲಿ ಕಿತ್ತು ಹಾಕಿದ್ದಾರೆ. ಲೈಟ್ ಅನ್ನು ಒಡೆದು ಹಾಕಿದ್ದಾರೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ, ಮಕ್ಕಳು ವಾಸವಾಗಿದ್ದು ಯಾರೋ ತಿಳಿದವರೇ ಹೆದರಿಸುತ್ತಿದ್ದಾರೆ. ತಮಗೆ ಸೂಕ್ತ ರಕ್ಷಣೆ ನೀಡಿ ಎಂದು ಸ್ಮಿತಾ ರಾಕೇಶ್ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಲ್ಲೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೂಂಡು ತನಿಖೆ ಕೈಗೂಂಡಿದ್ದಾರೆ. ಈಗ ಪಿಂಕ್ ಹೊಯ್ಸಳ ಮತ್ತು ಪೊಲೀಸರನ್ನು ರಕ್ಷಣೆಗೆ ನಿಯೋಜಿಸಲಾಗಿದೆ.