ಸುನೀಲ್ ಜಿಎಸ್
ಬೆಂಗಳೂರು: ಹನುಮ ಜಯಂತಿ ಆಚರಣೆ ಮಾಡುತ್ತಿದ್ದವರಿಗೆ ಲಾಠಿ ಏಟು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂಗಳಿಗೆ ಮೋಸ ಆಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು. ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿಗಳ ಸಚಿವಾಲಯ ನೀಡಿದ ಉತ್ತರದಿಂದಾಗಿ ಆರೋಪ ಕೇಳಿ ಬಂದಿದೆ. ಆರ್ ಟಿಐ ಕಾರ್ಯಕರ್ತ ಭಾಸ್ಕರನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಯಾವ ಧರ್ಮದವರಿಗೆ 2017 ಅಕ್ಟೋಬರ್ 31 ರವರೆಗೆ ಎಷ್ಟು ಬಾರಿ ಭೋಜನ/ಉಪಹಾರ ಕೂಟವನ್ನು ಆಯೋಜಿಸಿದ್ದಾರೆ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಕೇವಲ ಮುಸ್ಲಿಮರಿಗೆ ಹೊರತು ಪಡಿಸಿ ಬೇರೆ ಯಾವುದೇ ಧರ್ಮದವರಿಗೆ ಸಿದ್ದರಾಮಯ್ಯ ಭೋಜನ ಕೂಟವನ್ನು ಆಯೋಜಿಸಿಲ್ಲ ಎಂದು ಸಚಿವಾಲಯ ಉತ್ತರ ನೀಡಿದೆ.
Advertisement
Advertisement
ಸಚಿವಾಲಯದ ಉತ್ತರ ಇಲ್ಲಿದೆ:
ಮುಖ್ಯಮಂತ್ರಿಯಾಗಿ 2013 ಮೇ 13ರಂದು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಸಿದ್ದರಾಮಯ್ಯನವರು ಪವಿತ್ರ ರಂಜನ್ ಮಾಸದ ಸಂದರ್ಭದಲ್ಲಿ ಇಫ್ತಿಯಾರ್ ಭೋಜನ ಕೂಟವನ್ನು ಅರಮನೆ ಮೈದಾನದಲ್ಲಿ ಮುಸ್ಲಿಮ್ ಬಾಂಧವರಿಗೆ ಸ್ವಂತ ಖರ್ಚಿನಲ್ಲಿ ಆಯೋಜಿಸಿದ್ದರು. ಇದನ್ನು ಹೊರತು ಪಡಿಸಿ ಮುಸ್ಲಿಮ್ ಸಮುದಾಯದ ಇತರೇ ಹಬ್ಬಗಳ ಸಂದರ್ಭದಲ್ಲಿ ಸರ್ಕಾರಿ ಅಥವಾ ಸ್ವಂತ ವೆಚ್ಚದಲ್ಲಿ ಯಾವುದೇ ಭೋಜನ ಕೂಟವನ್ನು ಆಯೋಜಿಸಿಲ್ಲ. ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯ ಮುಸಲ್ಮಾನ ಬಂಧುಗಳು, ರಾಜ್ಯ ಸರ್ಕಾರ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Advertisement
ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ವಾಮಿ ವಿವೇಕಾನಂದ ಜಯಂತಿ, ಬಸವ ಜಯಂತಿ ಇನ್ನಿತರ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರು ಸರ್ಕಾರದ ವತಿಯಿಂದ ಮಾಡಿರುತ್ತಾರೆ. ಇಲಾಖೆಯ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಭೋಜನ/ ಲಘು ಉಪಹಾರವನ್ನು ಏರ್ಪಾಡು ಮಾಡಿಲ್ಲ.
Advertisement
ಬೇರೆಯವರಿಗೆ ಯಾಕಿಲ್ಲ?:
ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ. ಇಲ್ಲಿ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು, ಕ್ರೈಸ್ತರು, ಜೈನರು, ಬೌದ್ಧರು ಹಲವು ಧರ್ಮದವರು ನೆಲೆಸಿದ್ದು ಎಲ್ಲರೂ ತೆರಿಗೆಯನ್ನು ಪಾವತಿಸುತ್ತಾರೆ. ಇವರಿಗೆಲ್ಲ ನೀಡದ ವಿಶೇಷ ಉಪಹಾರ ಕೇವಲ ಮುಸ್ಲಿಮರಿಗೆ ಮಾತ್ರ ನೀಡುತ್ತಿರುವುದು ಯಾಕೆ? ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯೇ? ಭೋಜನ ಕೂಟವನ್ನು ಆಯೋಜಿಸಿದರೆ ಯಾವ ಧರ್ಮದವರಿಗೆ ತಾರತಮ್ಯ ಮಾಡದೇ ಆಯೋಜಿಸಬೇಕು. ಹಿಂದೂಗಳು ಗಣೇಶ ಚತುರ್ಥಿ, ದೀಪಾವಳಿ ಆಚರಿಸುತ್ತಾರೆ. ಕ್ರೈಸ್ತರು ಕ್ರಿಸ್‍ಮಸ್ ಆಚರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಉಪಹಾರ ಕೂಟವನ್ನು ಆಯೋಜಿಸದ ಸಿಎಂ ಸಿದ್ದರಾಮಯ್ಯ ಮುಸ್ಲಿಮರ ವೋಟ್ ಬ್ಯಾಂಕಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಆರ್ ಟಿಐ ಕಾರ್ಯಕರ್ತ ಭಾಸ್ಕರನ್ ಪ್ರಶ್ನೆ ಮಾಡಿದ್ದಾರೆ.
ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಈಗ ಹನುಮ ಜಯಂತಿ, ದತ್ತ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಸರ್ಕಾರ ನಿರ್ಬಂಧ ಹೇರಿದ್ದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಹನುಮ ಜಯಂತಿ ವೇಳೆ ಪಾಲ್ಗೊಂಡಿದ್ದವರನ್ನು ಸರ್ಕಾರ ಕ್ಷಣ ಮಾತ್ರದಲ್ಲೇ ಬಂಧಿಸುತ್ತದೆ. ಹಿಂದೂ ಮುಖಂಡರ ಬಂಧನಕ್ಕೆ ಕ್ಷಣಾರ್ಧದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಹೇಳಿಕೆ ನೀಡಿದ ಮೌಲ್ವಿಯನ್ನು ಕೂಡಲೇ ಬಂಧಿಸುವುದಿಲ್ಲ ಯಾಕೆ? ಮತಬ್ಯಾಂಕ್‍ಗಾಗಿ ಹಿಂದುಗಳ ಕಡೆಗಣನೆ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
https://youtu.be/HP6PMNpDDbg