ಬೆಂಗಳೂರು/ಹಾವೇರಿ: ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದಕ್ಕೆ ಬಂಡಾಯವೆದ್ದಿದ್ದ ಅಜ್ಜಂಪೀರ್ ಖಾದ್ರಿ (Ajjampir Khadri) ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಯಶಸ್ವಿಯಾಗಿದ್ದಾರೆ.
ತೀವ್ರ ಪೈಪೋಟಿ ನಡುವೆ ಶಿಗ್ಗಾಂವಿ (Shiggaon) ಕಾಂಗ್ರೆಸ್ ಟಿಕೆಟ್ ಯಾಸಿರ್ ಅಹ್ಮದ್ ಖಾನ್ ಪಠಾಣ್ ಪಾಲಾಯ್ತು. ಪಠಾಣ್ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದರು. ತನಗೆ ಟಿಕೆಟ್ ಸಿಗಲಿಲ್ಲ ಎಂದು ಅಜ್ಜಂಪೀರ್ ಮುನಿಸಿಕೊಂಡಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ
Advertisement
ಶಿಗ್ಗಾಂವ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರ ಜೊತೆ ಮಾತುಕತೆ ನಡೆಸಿ, ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆಯುವಂತೆ ತಿಳಿಸಿದೆ.
ಈ ವೇಳೆ ಅವರು ತಮ್ಮ ನಾಮಪತ್ರ ಹಿಂಪಡೆಯುವ ಜೊತೆಗೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ. pic.twitter.com/JR7lntdVwp
— Siddaramaiah (@siddaramaiah) October 26, 2024
Advertisement
ಬಂಡಾಯ ಶಮನ ಜವಾಬ್ದಾರಿಯನ್ನು ಜಮೀರ್‌ಗೆ ವಹಿಸಲಾಗಿತ್ತು. ಅಜ್ಜಂಪೀರ್ ಮನವೊಲಿಸುವ ಸಚಿವ ಜಮೀರ್ ಅವರ ಪ್ರಯತ್ನ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಸಿಎಂ ನಿವಾಸಕ್ಕೆ ರೆಬೆಲ್ ನಾಯಕನನ್ನು ಕರೆತಂದಿದ್ದರು.
Advertisement
ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ಅಜ್ಜಂಪೀರ್ ಬಂಡಾಯ ಶಮನಗೊಳಿಸಿದ್ದಾರೆ. ಇದರಿಂದ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಮತ ವಿಭಜನೆಯ ಆತಂಕ ದೂರವಾಗಿದೆ. ಇದನ್ನೂ ಓದಿ: ಧರ್ಮ ಕಾರ್ಯಗಳ ಮೂಲಕ ಶೃಂಗೇರಿ ಮಠ ಮುಂಚೂಣಿಯಲ್ಲಿದೆ: ಡಿಕೆಶಿ
Advertisement
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ, ಶಿಗ್ಗಾಂವ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಪೀರ್ ಖಾದ್ರಿ ಅವರ ಜೊತೆ ಮಾತುಕತೆ ನಡೆಸಿ, ಪಕ್ಷದ ಹಿತದೃಷ್ಟಿಯಿಂದ ನಾಮಪತ್ರ ಹಿಂಪಡೆಯುವಂತೆ ತಿಳಿಸಿದೆ. ಈ ವೇಳೆ ಅವರು ತಮ್ಮ ನಾಮಪತ್ರ ಹಿಂಪಡೆಯುವ ಜೊತೆಗೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಕ್ರಿಯವಾಗಿ ಕೆಲಸ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ ಎಂದಿದ್ದಾರೆ.
ಶಿಗ್ಗಾಂವಿಯಲ್ಲಿ ಖಾದ್ರಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಕಳೆದ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು. ಆದರೆ, ಉಪಚುನಾವಣೆಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಸೆಯಾಯಿತು. ಬಂಡಾಯವೆದ್ದು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ವಿರುದ್ಧ ಡ್ಯಾಮೇಜಿಂಗ್ ಹೇಳಿಕೆಗಳು ಹೊರಬಂದವು. ಯಾಸಿರ್ ಒಬ್ಬ ರೌಡಿಶೀಟರ್ ಎಂದೆಲ್ಲ ಬಿಂಬಿಸಲಾಯಿತು. ಇದು ಪಕ್ಷಕ್ಕೆ ಸಮಸ್ಯೆಯಾಗಬಹುದು ಎಂಬುದನ್ನು ಅರಿತು ಖಾದ್ರಿ ಮನವೊಲಿಸುವ ಪ್ರಯತ್ನ ನಡೆಯಿತು. ಈ ಪ್ರಯತ್ನದಲ್ಲಿ ಸಿಎಂ ಕೊನೆಗೂ ಯಶಸ್ವಿಯಾಗಿದ್ದಾರೆ.