– ಸಿಎಂಗೆ ಕಾನೂನು ಹೋರಾಟ ಅನಿವಾರ್ಯ
– ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಉಳಿದ ಆರೋಪಿಗಳು ತನಿಖೆ ಎದುರಿಸುವುದು ಅನಿವಾರ್ಯ
ಬೆಂಗಳೂರು: ಮುಡಾ ನಿವೇಶನಗಳನ್ನು ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಂದಾಗಿರುವ ವಿಚಾರ ನಾನಾ ಚರ್ಚೆಗಳಿಗೆ ಗ್ರಾಸವಾಗಿದೆ. ಸಿಎಂ ಪತ್ನಿ ನಿರ್ಧಾರವು ಕಾನೂನು ಹೋರಾಟದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
Advertisement
ಕಾನೂನು ಹೋರಾಟದ ಪರಿಣಾಮ ಏನು?
ಮುಡಾ ಹಗರಣ ಈಗ ತನಿಖಾ ಹಂತಕ್ಕೆ ಬಂದಿದೆ. ಈ ಹೊತ್ತಿನಲ್ಲಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ನಿರ್ಧಾರದಿಂದ ಕಾನೂನಾತ್ಮಕ ವಿಚಾರದಲ್ಲಿ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಈ ನಿರ್ಧಾರವು ಕಾನೂನಾತ್ಮಕವಾಗಿ ಯಾವುದೇ ಪರಿಣಾಮ ಬಿರೋದಿಲ್ಲ.
Advertisement
Advertisement
ಈಗಾಗಲೇ ಲೋಕಾಯುಕ್ತ ತನಿಖೆಗೆ ಆದೇಶ ಆಗಿರುವುದರಿಂದ ತನಿಖೆ ನಡೆಯುತ್ತದೆ. ಸಿಎಂ, ಸಿಎಂ ಪತ್ನಿ ಹಾಗೂ ಉಳಿದ ಆರೋಪಿಗಳು ತನಿಖೆ ಎದುರಿಸಬೇಕಾಗುತ್ತದೆ. ತನಿಖೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ.
Advertisement
ಕಾನೂನು ಹೋರಾಟ ಸಿಎಂಗೆ ಅನಿವಾರ್ಯವಾಗಿದೆ. ತನಿಖೆಯಲ್ಲಿ ತಪ್ಪು ಕಂಡು ಬಂದರೆ ಕಾನೂನಿನ ಅನ್ವಯ ಕ್ರಮ ಎದುರಿಸಬೇಕಾಗುತ್ತದೆ.