ಮೈಸೂರು: ಉಪ ಚುನಾವಣೆ (By Election) ರಾಜಕೀಯ ಕಾವೇರಿರುವ ಹೊತ್ತಲ್ಲೇ ಮುಡಾ ಹಗರಣದ ತನಿಖೆಗೆ ಮಹತ್ವದ ಘಟ್ಟ ತಲುಪಿದೆ. ನಿರೀಕ್ಷೆಗಿಂತ ವೇಗವಾಗಿ ಲೋಕಾಯುಕ್ತ (Lokayukta) ತನಿಖೆ ನಡೀತಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಮೈಸೂರು ಲೋಕಾಯುಕ್ತ ಎಸ್‌ಪಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿದ ಹಿನ್ನೆಲೆಯಲ್ಲಿಂದು ಸಿಎಂ ಪತ್ನಿ ವಿಚಾರಣೆಗೆ ಹಾಜರಾಗಿದ್ರು. ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿಯನ್ನು ಮೂರು ಗಂಟೆಗಳ ಕಾಲ ಲೋಕಾಯುಕ್ತ ಎಸ್‌ಪಿ ವಿಚಾರಣೆ ಮಾಡಿದ್ದಾರೆ. ವಿವಾದಿತ ಜಮೀನು ಮತ್ತು 14 ಸೈಟ್‌ಗಳ ಖರೀದಿ ವಿಚಾರವಾಗಿ ಹತ್ತಾರು ಪ್ರಶ್ನೆಗಳನ್ನು ಲೋಕಾಯುಕ್ತ ಎಸ್‌ಪಿ ಕೇಳಿದ್ದಾರೆ. ಇದಕ್ಕೆ ತಮ್ಮಲ್ಲಿರುವ ಮಾಹಿತಿಯನ್ನು ಸಿಎಂ ಪತ್ನಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement
ಈ ಮಧ್ಯೆ, ಇಡಿ ತನಿಖೆಯೂ ಚುರುಕಾಗಿದೆ. ಇಡಿ ಸಮನ್ಸ್ ಹಿನ್ನೆಲೆಯಲ್ಲಿ ಪ್ರಶಾಂತ್, ಶ್ರುತಿ ಸೇರಿ ಮುಡಾದ ಆರು ಅಧಿಕಾರಿಗಳು ಬೆಂಗಳೂರಿನ ಜಾರಿನಿರ್ದೇಶನಾಲಯದ ಕಚೇರಿಗೆ ದಾಖಲೆ ಸಮೇತ ಹಾಜರಾಗಿ ವಿಚಾರಣೆ ಎದುರಿಸಿದ್ರು. ಇದೇ ವೇಳೆ, ಮತ್ತೊಬ್ಬ ದೂರುದಾರ ಪ್ರದೀಪ್ ಬಳಿಯಿಂದ ಇಡಿ ಅಧಿಕಾರಿಗಳು ಹೆಚ್ಚುವರಿ ಮಾಹಿತಿ ಸಂಗ್ರಹಿಸಿದ್ದಾರೆ.
Advertisement
Advertisement
ಲೋಕಾಯುಕ್ತ ಪ್ರಶ್ನೆಗೆ ಪಾರ್ವತಿ ಸಿದ್ದರಾಮಯ್ಯ ಉತ್ತರ:
* ಲೋಕಾ – ಪರಿಹಾರ ಕೇಳಿ ನೀವು ಎಷ್ಟು ಬಾರಿ ಮುಡಾಗೆ ಪತ್ರ ಕೊಟ್ಟಿದ್ರಿ?
* ಸಿಎಂ ಪತ್ನಿ – ಐದಾರು ಬಾರಿ ಕೊಟ್ಟಿದ್ದೇನೆ. ನನಗೆ ಸ್ಪಷ್ಟವಾಗಿ ನೆನಪಾಗುತ್ತಿಲ್ಲ.
* ಲೋಕಾ – ನಿರ್ದಿಷ್ಟ ಸ್ಥಳದಲ್ಲೆ ಪರ್ಯಾಯ ನಿವೇಶನ ಬೇಕು ಅಂತಾ ಕೇಳಿದ್ರಾ?
* ಸಿಎಂ ಪತ್ನಿ – ಖಂಡಿತ ಇಲ್ಲ. ನಮಗೆ ಪರಿಹಾರ ಕೊಡಿ ಅಂತ ಅಷ್ಟೇ ಕೇಳಿದ್ದೇನೆ.
* ಲೋಕಾ – ಈ ವಿಚಾರದಲ್ಲಿ ನಿಮ್ಮ ಪತಿ ಅಥವಾ ಮಗನ ಮಧ್ಯಪ್ರವೇಶ ಆಗಿತ್ತಾ?
* ಸಿಎಂ ಪತ್ನಿ – ಇದು ತವರುಮನೆ ಉಡುಗೊರೆ. ನನಗೆ ಅನ್ಯಾಯ ಆಗಿತ್ತು. ಇದಕ್ಕಾಗಿ ನ್ಯಾಯ ಕೇಳಿದ್ದೆ ಅಷ್ಟೇ. ಅದಕ್ಕಾಗಿ ಪ್ರಭಾವ ಬಳಸಿಲ್ಲ.
* ಲೋಕಾ – ನಿಮ್ಮ ಒಂದು ಪತ್ರದ ಮೇಲೆ ವೈಟ್ನರ್ ಯಾಕೆ ಹಾಕಿದ್ರಿ? ವೈಟ್ನರ್ ಹಾಕಿದ್ದು ನೀವಾ?ಬೇರೆಯವರಾ?
* ಸಿಎಂ ಪತ್ನಿ – ವೈಟ್ನರ್ ಹಾಕಿದ್ದು ನಾನೇ. ಅಲ್ಲಿ ಯಾವುದೋ ತಪ್ಪಾದ ವಾಕ್ಯ ಇತ್ತು. ಏನದು ಎಂಬುದನ್ನು ಮರೆತಿದ್ದೇನೆ.
* ಲೋಕಾ – ಪದೇ ಪದೇ ನಿಮ್ಮ ಸಹಿಗಳು ವ್ಯತ್ಯಾಸ ಆಗಿರೋದು ಯಾಕೆ?
* ಸಿಎಂ ಪತ್ನಿ – ನಾನು ರೆಗ್ಯೂಲರ್ ಆಗಿ ದಾಖಲೆಗಳಿಗೆ ಸಹಿ ಹಾಕಲ್ಲ.. ಹೀಗಾಗಿ ಸಹಿ ಸ್ವಲ್ಪ ಬದಲಾಗುತ್ತೆ.
* ಲೋಕಾ – ನಿಮ್ಮ ಸಹೋದರ ನಿಮಗೆ ಗಿಫ್ಟ್ ಆಗಿ ಜಮೀನು ಕೊಟ್ಟಾಗ ನೀವು ಆ ಜಾಗ ನೋಡಿರಲಿಲ್ವಾ?
* ಸಿಎಂ ಪತ್ನಿ – ನಾನು ಅವತ್ತು ಜಾಗ ನೋಡಿರಲಿಲ್ಲ. 3-4 ವರ್ಷವಾದ ಮೇಲೆ ಜಾಗ ನೋಡಿದ್ದೆ.