ಮೈಸೂರು: ಶನಿವಾರ ಮಾಜಿ ಸಿಎಂ ಸಿದ್ದರಾಮಯ್ಯನವರು ನಗರದ ಡಿಆರ್‍ಸಿ ಮಾಲ್ ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ.
ಡಿಆರ್‍ಸಿ ಮಾಲ್ ನಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರವನ್ನು ವೀಕ್ಷಿಸಿದರು. ಈ ಹಿಂದೆಯೂ ಸಿದ್ದರಾಮಯ್ಯವರು ಪುನೀತ್ ರಾಜ್‍ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ವೀಕ್ಷಿಸಿದ್ದರು. ರಾಜಕೀಯದಲ್ಲಿ ಸಖತ್ ಫುಲ್ ಆ್ಯಕ್ಟೀವ್ ಆಗಿರುವ ಮಾಜಿ ಸಿಎಂ ಸಿನಿಮಾ ನೋಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ತೆಲುಗು ಭಾಷೆಯ `ಬಾಹುಬಲಿ’ ಚಿತ್ರವನ್ನು ಮೊಮ್ಮಕ್ಕಳೊಂದಿಗೆ ವೀಕ್ಷಿಸಿದ್ದರು.
ಅಪ್ಪಟ ಕನ್ನಡ ಸಿನಿಮಾ ಎಂದು ಕರೆಯಬಹುದಾದ ಚಿತ್ರ ಎಂಬ ಭಾವನೆಯನ್ನು ಚಿತ್ರ ತೋರಿಸುತ್ತಿದೆ. ಚಿತ್ರ ಕಲಾತ್ಮಕವಾಗಿ ಮೂಡಿಬಂದಿದ್ದರೂ ಪಕ್ಕ ಕಾಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಹೊಸ ಬಗೆಯ ಪ್ರಯೋಗತ್ಮಾಕ ಚಿತ್ರ ಅನ್ನಿಸುತ್ತಿದೆ. ಚಿತ್ರಕ್ಕೆ ರಾಮ ರಾಮಾ ರೇ ಖ್ಯಾತಿಯ ವಾಸುಕಿ ವೈಭವ್ ಸಂಗೀತವನ್ನು ಹೊಂದಿದೆ. ಹಿರಿಯ ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ನೋಡುಗರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಲ್‍ನಲ್ಲಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಂತೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಿದ್ದರಾಮಯ್ಯನವರು ಸಹ ನಗುತ್ತಲೇ ಎಲ್ಲರ ಸೆಲ್ಫಿಗೆ ಪೋಸ್ ನೀಡಿದರು. ಸಿನಿಮಾ ವೀಕ್ಷಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 3ಕ್ಕೆ ವಿದೇಶ ಪ್ರವಾಸ ಕೈಗೊಳ್ಳಲಿದ್ದೇನೆ. ಲಂಡನ್ ನಲ್ಲಿ ಓರ್ವ ಗೆಳೆಯನಿದ್ದು, ತುಂಬಾ ದಿನಗಳಿಂದ ತಮ್ಮ ಮನೆಗೆ ಬರಬೇಕೆಂದು ಒತ್ತಾಯ ಮಾಡುತ್ತಿದ್ದನು. ಹಾಗಾಗಿ ನಾನು ಮತ್ತು ನನ್ನ ಮಗ ಹೋಗಲಿದ್ದೇವೆ ಎಂದು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv