Connect with us

Bengaluru City

Exclusive 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ

Published

on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ದುಬೈ ಪ್ರವಾಸದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಒರಾಯನ್ ಮಾಲ್‍ನಲ್ಲಿ ಬಾಹುಬಲಿ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಹೌದು. ಬರೋಬ್ಬರಿ 48 ಟಿಕೆಟ್ ಬುಕ್ ಮಾಡಿ ಸಿಎಂ ಪುತ್ರನೊಂದಿಗೆ ಸೋಮವಾರ ಮಧ್ಯಾಹ್ನ  ಬಾಹುಬಲಿ ಸಿನಿಮಾವನ್ನು ವೀಕ್ಷಿಸಿದ್ದಾರೆ. ಎರಡು ವಾರಗಳ ಹಿಂದಷ್ಟೇ ರಾಜಕುಮಾರ ಸಿನಿಮಾ ನೋಡಿದ್ದ ಸಿದ್ದರಾಮಯ್ಯ, ಬಹಳ ವರ್ಷಗಳ ನಂತರ ಕುಟುಂಬ ಸಮೇತ ಒಟ್ಟು 48 ಟಿಕೆಟ್ ಬುಕ್ ಮಾಡಿ ಬಾಹುಬಲಿ ದೃಶ್ಯ ಕಾವ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಒಂದು ಟಿಕೆಟ್‍ಗೆ 1,050 ರೂಪಾಯಿ ತೆತ್ತಿರುವ ಸಿಎಂ ಒಟ್ಟು 48 ಸೀಟುಗಳಿಗೆ ಅರ್ಧ ಲಕ್ಷ ರೂಪಾಯಿ ಕೊಟ್ಟು ಬಾಹುಬಲಿ ಸಿನಿಮಾವನ್ನು ವೀಕ್ಷಿಸಿದ್ದಾರೆ.

ಸಿಎಂಗೆ ‘ಪಬ್ಲಿಕ್’ ಪ್ರಶ್ನೆಗಳು:
ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನಿಗೆ ಬೆಲೆ ಇಲ್ವಾ..?
ಕಾನೂನು ರೂಪಿಸಿದವರೇ ಉಲ್ಲಂಘನೆ ಮಾಡಿದ್ರೆ ಏನು ಬೆಲೆ..?
ಸಿದ್ದರಾಮಯ್ಯ ಸರ್ಕಾರದಲ್ಲಿ ಆಡಳಿತ ದಿಕ್ಕು ತಪ್ಪಿದ್ಯಾ..?
ಏಕರೂಪದ ಟಿಕೆಟ್ ದರ ಘೋಷಣೆ ಮಾಡಿದ್ರು ಜಾರಿಯಾಗಿಲ್ಲ ಯಾಕೆ..?
ಮಲ್ಟಿಪ್ಲೆಕ್ಸ್ ನಲ್ಲಿ 200 ರೂಪಾಯಿ ಟಿಕೆಟ್ ಫಿಕ್ಸ್ ಮಾಡಿ ತಾವೇ ಕಾನೂನು ಉಲ್ಲಂಘನೆ..?

ಇದನ್ನೂ ಓದಿ: ಭಾರತೀಯ ಚಿತ್ರರಂಗದ ಎಲ್ಲ ದಾಖಲೆ ಉಡೀಸ್: ಮೂರು ದಿನದ ಕಲೆಕ್ಷನ್ ಎಷ್ಟು? ಯಾವ ದೇಶದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

ಇದನ್ನೂ ಓದಿ: ರಾಜಕುಮಾರ ನೋಡಿ ಪುನೀತ್ ಗೆ  ಅಭಿನಂದನೆ ಸಲ್ಲಿಸಿದ್ದ ಸಿಎಂ 

https://www.youtube.com/watch?v=s2oyir37e4o

 

Click to comment

Leave a Reply

Your email address will not be published. Required fields are marked *