Connect with us

Dakshina Kannada

ದೀಪಕ್ ರಾವ್, ಬಶೀರ್ ಮನೆಗೆ ಸಿಎಂ ಭೇಟಿ- ದೀಪಕ್ ರಾವ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸೂಚನೆ

Published

on

ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ದೀಪಕ್ ರಾವ್ ಮತ್ತು ಬಶೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಲೂಕಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳಿದ್ದ ಸಿಎಂ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ದೀಪಕ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಥಮ್

ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಾಡಹಗಲೇ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಮೃತಪಟ್ಟಿದ್ದ ದೀಪಕ್ ರಾವ್ ಮನೆಗೆ ಭೇಟಿಯಿತ್ತ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡುತ್ತೇವೆ ಎಂದು ಹೇಳಿದ್ರು. ದೀಪಕ್ ತಮ್ಮನಿಗೆ ಎಂಆರ್ ಪಿಎಲ್ ನಲ್ಲಿ ಕೆಲಸ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇದನ್ನೂ ಓದಿ: ಬಿಜೆಪಿ ನಾಯಕ ಕೃಷ್ಣ ಪಾಲೇಮಾರ್ ವಿರುದ್ಧ ಬಶೀರ್ ಕುಟುಂಬಸ್ಥರ ಆಕ್ರೋಶ

ದೀಪಕ್ ರಾವ್ ಮನೆಯಿಂದ ತೆರಳಿದ ಸಿದ್ದರಾಮಯ್ಯ, ಮಂಗಳೂರಿನ ಆಕಾಶಭವನದಲ್ಲಿರುವ ಬಶೀರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಈ ವೇಳೆ ಸಿಎಂ ಗೆ ಸಚಿವರಾದ ರಮನಾಥ್ ರೈ, ಯು.ಟಿ ಖಾದರ್, ಮೊಯ್ದೀನ್ ಬಾವ, ಮೇಯರ್ ಕವಿತಾ ಸನಿಲ್ ಸಾಥ್ ನೀಡಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ರು. ಇದನ್ನೂ ಒದಿ: ಕರಾವಳಿಯಲ್ಲಿ ಹಿಂದೂಗಳು ಹತ್ಯೆ ಮಾಡ್ತಿದ್ದಾರೆ- ಸಿಎಂ ಎದುರೇ ರೈ ವಿವಾದಾತ್ಮಕ ಹೇಳಿಕೆ

ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಸದ್ಯ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಅಬ್ದುಲ್ ಬಶೀರ್ ಕೊಲೆ ಯತ್ನ- ನಾಲ್ವರು ಆರೋಪಿಗಳ ಬಂಧನ

ಇತ್ತ ಅದೇ ದಿನ ರಾತ್ರಿ ನಗರದ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಆಕಾಶಭವನ ನಿವಾಸಿ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಿಂದ ತಲೆ, ಎದೆ ಹಾಗೂ ಗಂಟಲು ಭಾಗಕ್ಕೆ ಗಂಭೀರ ಗಾಯವಾಗಿದ್ದ ಅವರನ್ನು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ಬಶೀರ್ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು.

 

 

Click to comment

Leave a Reply

Your email address will not be published. Required fields are marked *