– ಕ್ರೀಡಾಂಗಣದಲ್ಲಿ ಸಿಎಂ ಭೇಟಿಯಾದ ನಟ ಶಿವಣ್ಣ
ಬೆಂಗಳೂರು: ರಾಜಕೀಯ ಒತ್ತಡಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್‌ಸಿಬಿ ವರ್ಸಸ್ ಸಿಎಸ್‌ಕೆ (RCB vs CSK) ಪಂದ್ಯವನ್ನು ವೀಕ್ಷಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ ಅವರು ಸಹ ಸಿಎಂ ಜೊತೆ ಪಂದ್ಯ ವೀಕ್ಷಿಸಿದರು. ಈ ವೇಳೆ ಅಲ್ಲೇ ಇದ್ದ ನಟ ಶಿವರಾಜ್‌ಕುಮಾರ್ ಸಿಎಂ ಭೇಟಿಯಾದರು. ಸಿದ್ದರಾಮಯ್ಯ ಕಡೆ ಬಂದ ಶಿವಣ್ಣ, ಸಿಎಂ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಇದನ್ನೂ ಓದಿ: ಬಿಡುವು ಕೊಟ್ಟ ವರುಣ – RCB vs CSK ನಾಕೌಟ್ ಕದನ ಪುನಾರಂಭ; ಅಭಿಮಾನಿಗಳಲ್ಲಿ ಚಿಗುರಿದ ಉತ್ಸಾಹ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡಗಳು ನಾಕೌಟ್ ಕದನ ನಡೆಸುತ್ತಿವೆ. ಟಾಸ್ ಸೋತು ಕ್ರೀಸ್‌ಗಿಳಿದಿರುವ ಆರ್‌ಸಿಬಿ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ.
14 ಓವರ್ ಪೂರೈಸಿರುವ ಆರ್‌ಸಿಬಿ 2 ವಿಕೆಟ್ ನಷ್ಟಕ್ಕೆ 132 ರನ್‌ಗಳಿಸಿದೆ. ವಿರಾಟ್ ಕೊಹ್ಲಿ 47 ರನ್ ಸಿಡಿಸಿ ಕ್ಯಾಚ್ ನೀಡಿ ಔಟಾಗಿದ್ದಾರೆ. ಡು ಪ್ಲೆಸಿಸ್ ಅರ್ಧಶತಕ ಬಾರಿಸಿದ್ದಾರೆ. ಪಾಟಿದಾರ್, ಗ್ರೀನ್ ಆಟ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್ ಪಂದ್ಯ – ಚಿನ್ನಸ್ವಾಮಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್