ಬೆಂಗಳೂರು: ಕೆಲವರು ಬಿ ಫಾರಂ ಸಿಗ್ತಿಲ್ಲ ಅಂತಾ ಒದ್ದಾಡುತ್ತಿದ್ರೆ, ಇತ್ತ ಮಾಜಿ ಶಾಸಕ ಅಂಬರೀಶ್ ಮಾತ್ರ ಬಿ ಫಾರಂ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಮೂಲಗಳ ಪ್ರಕಾರ ಅಂಬರೀಶ್ ಹೆಸರನ್ನು ನಮೂದಿಸದ ಫಾರಂ ಕೇಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಏನಿದು ಬಿ ಫಾರಂ? ಫಾರಂ-26 ಏನು?
ಯಾವುದೇ ಹೇಳಿಕೆ ನೀಡದೇ ತಟಸ್ಥವಾಗಿ ಉಳಿದಿರುವ ಅಂಬರೀಶ್ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಪಡುತ್ತಿದ್ದಾರೆ. ಅದೇ ರೀತಿ ಬಿಫಾರಂ ನೀಡಲು ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಫೋನ್ ಮಾಡಿದ್ರೂ, ಸಚಿವ ಕೆಜೆ ಜಾರ್ಜ್ ಅಂಬಿ ಮನೆಗೆ ಹೋಗಿ ಬಿ ಫಾರಂ ತಗೊಳಿ ಅಂದ್ರೂ ತಗೊಂಡಿರಲಿಲ್ಲ. ಸಿಎಂ ಬರ್ಲಿ ಮಾತಾಡ್ತಿನಿ ಅಂತಾ ಹೇಳಿದ್ದರಂತೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇದನ್ನೂ ಓದಿ: ಅಂಬಿ ಸ್ಪರ್ಧೆ: ಮಂಡ್ಯದಲ್ಲಿ ಭಾರೀ ಚರ್ಚೆ ಆಗ್ತಿದೆ 4 ವದಂತಿ
Advertisement
ಇಂದು ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ನೇರವಾಗಿ ಅಂಬರೀಶ್ ನಿವಾಸಕ್ಕೆ ತೆರಳಲಿದ್ದಾರೆ. ಈ ವೇಳೆ ಸಿಎಂ ಅಂಬರೀಶ್ ಅವರಿಗೆ ಬಿ ಫಾರಂ ತೆಗೆದುಕೊಳ್ಳುವಂತೆ ಮನವೊಲಿಸುವ ಕೆಲಸ ಮಾಡಲಿದ್ದಾರೆ. ಮಂಡ್ಯದಿಂದ ಅಂಬರೀಶ್ ಕಣಕ್ಕಿಳಿತಾರೋ ಇಲ್ವೋ ಅನ್ನೋ ಸಸ್ಪೆನ್ಸ್ ಇನ್ನೂ ಹಾಗೇ ಮುಂದುವರೆದಿದೆ. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್