ಬೆಂಗಳೂರು: ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ದಾಖಲೆಯ 17ನೇ ಬಜೆಟ್ (Budget) ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನದ ವೇಳಾಪಟ್ಟಿ ಅಧಿಕೃತ ಪ್ರಕಟವಾಗಿದ್ದು ಬೆಳಗ್ಗೆ 10:15ಕ್ಕೆ ಮಂಡನೆಯಾಗಲಿದೆ. ಕಳೆದ ಬಾರಿ ಮಾರ್ಚ್ 7 ರಂದು ಸಿದ್ದರಾಮಯ್ಯ ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ ಮಾಡಿದ್ದರು.
ಮಾರ್ಚ್ 6 ರಿಂದ ಮಾರ್ಚ್ 27 ರವರೆಗೆ ಒಟ್ಟು 14 ದಿನ ಬಜೆಟ್ ಅಧಿವೇಶನ ನಡೆಯಲಿದೆ.
ಸಿದ್ದರಾಮಯ್ಯನವರು ಈಗಾಗಲೇ ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದು, ಮುಂಬರುವ ಚುನಾವಣೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ದೃಷ್ಟಿಯಿಂದ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದೆ.

