ಬಳ್ಳಾರಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರ ಜೋರಾಗುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದೆಲ್ಲಡೆ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದ್ದು ರಾಜ್ಯಾದ್ಯಂತ ಸಂಚರಿಸಿ, ವಿವಿಧ ಕಾಮಗರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಪೂರ್ಣಗೊಳ್ಳದ ಕಟ್ಟಡವನ್ನೂ ಉದ್ಘಾಟಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಹೂವಿನಹಡಗಲಿಯಲ್ಲಿ 2008ರಲ್ಲಿ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ 9 ವರ್ಷ ಕಳೆದ್ರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಸರಿಯಾಗಿ ಹಣ ಬಿಡುಗಡೆಯಾಗದೆ ಅರ್ಧಕ್ಕೆ ನಿಂತಿರುವ ಕಾಲೇಜು ಕಟ್ಟಡದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಆದರೆ ಶಾಸಕರಾದ ಪರಮೇಶ್ವರ್ ನಾಯ್ಕ್, ಇದೇ ತಿಂಗಳ 18ರಂದು ಸಿಎಂ ಸಿದ್ದರಾಮಯ್ಯ ಕೈಯ್ಯಲ್ಲಿ ಈ ಕಾಲೇಜನ್ನು ಉದ್ಘಾಟನೆ ಮಾಡಿಸಲು ಮುಂದಾಗಿದ್ದಾರೆ.
Advertisement
Advertisement
ಈ ಕಾಲೇಜು ಕಟ್ಟಡವನ್ನು ಸಿಎಂ ಸಿದ್ದರಾಮಯ್ಯರಿಂದ ಇದೇ ತಿಂಗಳ 18ರಂದು ಉದ್ಘಾಟನೆ ಮಾಡಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಸರ್ಕಾರದ ನಡೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೇನಾದ್ರೂ ಸಿಎಂ ಕಟ್ಟಡ ಉದ್ಘಾಟನೆಗೆ ಮುಂದಾದ್ರೆ ಅಡ್ಡಿಪಡಿಸುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
Advertisement
ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭಿವೃದ್ಧಿ ಪಟ್ಟಿಗೆ ಮತ್ತೊಂದು ಯೋಜನೆಯನ್ನು ಸೇರಿಸಿಕೊಳ್ಳಲು ಮಾಜಿ ಸಚಿವ, ಹಾಲಿ ಶಾಸಕ ಪರಮೇಶ್ವರ ನಾಯ್ಕ್ ಇದೀಗ ಮುಂದಾಗಿರುವುದು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಹಡಗಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.