ಬೇರೆ ಪಕ್ಷದವರು ಪತ್ರ ಬರೆದಿರಬಹುದು ಬಿ.ಶಿವರಾಂ
ಹಾಸನ: ಕಾಂಗ್ರೆಸ್ (Congress) ಪಕ್ಷಕ್ಕೆ ಶಕ್ತಿ ತುಂಬಲು ಡಿ.5ರಂದು ಹಾಸನದ (Hassan) ಎಸ್.ಎಂ.ಕೃಷ್ಣನಗರದಲ್ಲಿ ಸ್ವಾಭಿಮಾನಿ ಸಮಾವೇಶ (Swabhimani Samavesha) ನಡೆಯಲಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಸಮಾವೇಶದ ಮೂಲಕ ರಾಜ್ಯಕ್ಕೆ ನಮ್ಮ ಮುಖ್ಯಮಂತ್ರಿಗಳು (Siddaramaiah) ಒಂದು ಸಂದೇಶ ಕೊಡಲಿದ್ದಾರೆ. ಈ ಮೂಲಕ ರಾಜಕೀಯವಾಗಿ ಪಕ್ಷವನ್ನು ಸದೃಢಗೊಳಿಸಲು ಮತ್ತು ಒಂದು ಒಳ್ಳೆಯ ಆಡಳಿತ ಕೊಡುತ್ತಿದ್ದೇವೆ ಎಂಬ ಸಂದೇಶ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಮಾವೇಶದ ವಿರುದ್ಧ ಹೈಕಮಾಂಡ್‍ಗೆ ಪತ್ರ ಕಳುಹಿಸಿದ ವಿಚಾರವಾಗಿ, ವ್ಯಕ್ತಿಯ ಶಕ್ತಿ ನೋಡದೆ ಟೀಕೆ, ಟಿಪ್ಪಣಿ ಅಥವಾ ಪ್ರಶಂಸೆ ಮಾಡಲ್ಲ. ಭಿನ್ನಾಭಿಪ್ರಾಯ ಒಬ್ಬರಿಂದ ಒಬ್ಬರಿಗೆ ಇದ್ದೇ ಇರುತ್ತೆ. ಅವರ ಚಿಂತನೆ ತಕ್ಕಂತೆ ಬರೆದಿರುತ್ತಾರೆ. ಎಐಸಿಸಿಗೆ ಪತ್ರ ಹೋದ ಮೇಲೂ ಸಮಾವೇಶ ನಡೆಯುತ್ತಿದೆ ಎಂದರೆ ಎಐಸಿಸಿ ದೃಷ್ಟಿಯಿಂದಲೂ ಸಮಾವೇಶ ಸರಿ ಇದೆ ಎಂದರ್ಥ. ಭಿನ್ನಮತ ಮೂಡಿಸಲು ಈ ರೀತಿ ಮಾಡಿದ್ದಾರೆ. ಬೇರೆ ಪಕ್ಷದವರು ಪತ್ರ ಬರೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಯಾರ ಹೆಸರಿಲ್ಲ ಎಂದರೆ ಅದು ಫೇಕ್ ಲೆಟರ್. ಅವನು ಧೈರ್ಯವಂತ ಅಭಿಮಾನಿ ಆಗಿದ್ದರೆ ನೇರವಾಗಿ ಹೇಳಬೇಕಿತ್ತು. ಪತ್ರ ಬರೆದವನಿಗೆ ವ್ಯಕ್ತಿ, ಪಕ್ಷದ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಅದಕ್ಕೆ ಒಂದು ಫೇಕ್ ಲೆಟರ್ ರೆಡಿ ಮಾಡಿ ಕಳುಹಿಸಿ ಗೊಂದಲ ಸೃಷ್ಟಿ ಮಾಡಿದ್ದಾನೆ ಎಂದಿದ್ದಾರೆ.