ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವ (Suttur Jatra Mahotsava) ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಟ್ರಾಫಿಕ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ. ಈ ವೇಳೆ ವಾಹನ ದಟ್ಟಣೆ ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ವಾಹನ ತೆರವುಗೊಳಿಸುವ ವೇಳೆ ಮಧ್ಯ ಬಂದ ಬೈಕ್ ಸವಾರನಿಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿ ಒದಿಯಲು ಮುಂದಾದ ದೃಶ್ಯ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಜನಾರ್ದನ ರೆಡ್ಡಿಯದ್ದು ಗೂಂಡಾ ಸಂಸ್ಕೃತಿ, ಅವ್ರೇನು ನಮ್ಗೆ ಪಾಠ ಮಾಡ್ತಾರೆ – ಸಿಎಂ
ಹೌದು. ಸುತ್ತೂರು ಜಾತ್ರಾ ಮಹೋತ್ಸವ ಮುಗಿಸಿ ಸಿಎಂ ವಾಪಸ್ ತೆರಳುತ್ತಿದ್ದ ವೇಳೆ ಏಕಾಏಕಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ವಾಹನಗಳನ್ನ ತೆರವುಗೊಳಿಸುತ್ತಿದ್ದರು. ಈ ವೇಳೆ ಬೈಕ್ ಸವಾರನೊಬ್ಬ ಮಧ್ಯೆ ಬೈಕ್ ನುಗ್ಗಿಸಲು ಯತ್ನಿಸಿದ್ದಾರೆ. ಇದರಿಂದ ಅಸಮಧಾನಗೊಂಡ ಎಸ್ಪಿ ಒದಿಯಲು ಮುಂದಾಗಿ ಕೊನೇ ಕ್ಷಣದಲ್ಲಿ ಸುಮ್ಮನಾಗಿದ್ದಾರೆ. ಎಸ್ಪಿ ಒದಿಯಲು ಮುಂದಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ

