ಬೆಂಗಳೂರು: ನಮ್ಮ ಹೊಟ್ಟೆ ಹಸಿಯುವ ಹಾಗೆ ಮಾಡಿ ಅವರಿಗೆ ಅನುದಾನ ಕೊಡಬೇಡಿ ಎಂದು ಉತ್ತರ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯಕ್ಕೆ ಕೇಂದ್ರದ ತೆರಿಗೆ ತಾರತಮ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ರಾಜ್ಯದ ತೆರಿಗೆ ನಮ್ಮದು 77% ಇದೆ. ಉತ್ತರ ಪ್ರದೇಶದ್ದು 49% ಇದೆ. ಕೇಂದ್ರದಿಂದ ಯುಪಿ ಅವರಿಗೆ ಬಿಡುಗಡೆ ಆಗೋದು 3.12 ಲಕ್ಷ ಕೋಟಿ ರೂ.. ನಮಗೆ 59 ಸಾವಿರ ಕೋಟಿ ಮಾತ್ರ ಕೇಂದ್ರ ಕೊಡುತ್ತೆ. ಇದು ನಮಗೆ ಮಾಡಿದ ಅನ್ಯಾಯ ಅಲ್ಲವಾ? ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಕ್ಕೆ ಅನುದಾನ ಕೊಡಬೇಡಿ ಅಂತ ಹೇಳೊಲ್ಲ. ನಮ್ಮ ಹೊಟ್ಟೆ ಹಸಿಯುವ ಹಾಗೆ ಮಾಡಿ ಅವರಿಗೆ ಅನುದಾನ ಕೊಡಬೇಡಿ. ಚಿನ್ನದ ಕೋಳಿ ಅಂತ ಕೊಯ್ದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 1983ರಿಂದ ನಾನು ವಿಧಾನಸಭೆಯಲ್ಲಿದ್ದೇನೆ.. ಬಜೆಟ್ ಮಂಡಿಸುವಾಗ ಯಾರೂ ವಾಕ್‌ಔಟ್ ಮಾಡಿರಲಿಲ್ಲ: ಬಿಜೆಪಿ ವಿರುದ್ಧ ಸಿಎಂ ಗರಂ
Advertisement
Advertisement
ಈ ಅನ್ಯಾಯ ಹೇಳಿದ್ರೆ ಬಿಜೆಪಿ ಅವರಿಗೆ ಕೋಪ. ಇವರು ಬಾಯಿ ಬಿಡದೇ ಇರೋದ್ರಿಂದ ಕನ್ನಡಿಗರಿಗೆ ದ್ರೋಹ ಮಾಡ್ತಿದ್ದಾರೆ. ಇವರು ಕನ್ನಡಿಗರಿಗೆ ಮಾಡ್ತಿರೊ ದ್ರೋಹ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಬಾರದು. ನ್ಯಾಯಯುತವಾಗಿ ನಮಗೆ ಕೊಟ್ಟಿದ್ದರೆ 1.87 ಲಕ್ಷ ಕೋಟಿ ಬರುತ್ತಿತ್ತು. ಡೆವಲೂಷನ್‌ನಲ್ಲಿ ನಮಗೆ 62 ಸಾವಿರ ಕೋಟಿ ನಷ್ಟ ಆಗ್ತಿದೆ. ಇವೆಲ್ಲ ನಮಗೆ ಬಂದಿದ್ದರೆ ಯೂರೋಪ್ ಕಂಟ್ರಿ ತರಹ ಆಗ್ತಿತ್ತು ನಮ್ಮ ರಾಜ್ಯ. ಇವರು ಅನುದಾನ ಕೊಡದೇ ಇದ್ದರೂ ಸುಭದ್ರವಾಗಿ ಇದ್ದೇವೆ. ನಾವು ದಿವಾಳಿ ಆಗಿಲ್ಲ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಹಣ ಅಂದಾಜು ಮಾಡಿದ್ದೇವೆ. ಹೆಚ್ಚು ಹಣ ಆದ್ರು ಬಿಡುಗಡೆ ಮಾಡ್ತೀವಿ ಎಂದು ತಿಳಿಸಿದ್ದಾರೆ.
Advertisement
ಕೋಲಾರ ಎಂಪಿ ಯಾವತ್ತಾದ್ರು ಅನ್ಯಾಯ ಆಗಿದೆ ಅಂತ ಬಾಯಿ ಬಿಟ್ಟಿದ್ದಾರಾ? ಇಷ್ಟು ಕೊಡಬೇಕಿತ್ತು ಅಂತ ಹೇಳಿಲ್ಲ. ಸಂಸತ್‌ನಲ್ಲಿ ಒಂದು ದಿನ ಮಾತಾಡಿಲ್ಲ. ಮುನಿಸ್ವಾಮಿ ಎಂಪಿ ಆಗೋಕೆ ಲಾಯಕ್ಕಾ? ಅಲ್ಲವಾ? ಕೇಂದ್ರದಿಂದ ಬರುವ ಹಣ ಕೇಳೋಕೆ ಅವರಿಗೆ ಆಗಿಲ್ಲ ಅಂದರೆ ಹೇಗೆ? ಬೊಮ್ಮಾಯಿ ಅವರಿಗೆ ನಾನು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೆ. 15ನೇ ಹಣಕಾಸು ಆಯೋಗದಲ್ಲಿ 5 ಸಾವಿರ ಕೋಟಿ ವಿಶೇಷ ಅನುದಾನ ಕೊಡೋದಕ್ಕೆ ಶಿಫಾರಸು ಮಾಡಿದೆ. ಅದನ್ನ ತೆಗೆದುಕೊಳ್ಳಿ ಅಂತ ಯಡಿಯೂರಪ್ಪ, ಬೊಮ್ಮಾಯಿಗೆ ಹೇಳಿದೆ. ಅದನ್ನೆ ನಾನು ಪ್ರಸ್ತಾಪ ಮಾಡಿದ್ದು. ಅದು ಕೇಳಿದ್ರೆ ಇವರಿಗೆ ಕೋಪ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?
Advertisement
15ನೇ ಹಣಕಾಸು ಆಯೋಗ 11 ಸಾವಿರ ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು. ಅದನ್ನ ಕೇಳಿ ಅಂತ ಹೇಳಿದ್ದು ತಪ್ಪಾ? ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡೋದಾಗಿ ಕೇಂದ್ರ ಹೇಳಿತ್ತು. ರಾಷ್ಟ್ರೀಯ ಯೋಜನೆ ಮಾಡ್ತೀನಿ ಅಂತ ಹೇಳಿದ್ರು, ಅದನ್ನ ಮಾಡಿಲ್ಲ. ಇವರು ಭದ್ರಾ ಯೋಜನೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಹಣ ಕೇಳಿ ಅಂದರೆ ಪ್ಲೆಕಾರ್ಡ್ ಹಿಡಿದುಕೊಂಡು ಬಂದರೆ ಇದು ಕರ್ನಾಟಕದ ಜನರಿಗೆ ಮಾಡೋ ದ್ರೋಹ ಅಲ್ಲವಾ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಅವರು (ಬಿಜೆಪಿ) ಹೇಳಿದ್ದು ನಾನು ರಿಪೀಟ್ ಮಾಡಿದ್ದೇನೆ. ಯಾಕೆ ಅವರು ಕೋಪ ಮಾಡಿಕೊಳ್ತಾರೆ. ಅದನ್ನ ಹೇಳಿದ್ರೆ ವಾಕ್‌ಔಟ್ ಮಾಡ್ತೀರಾ? ಪ್ಲೆಕಾರ್ಡ್ ಹಿಡಿದುಕೊಂಡು ಬರ್ತೀರಾ? ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವಾ? ನಾನು ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ಕೊಟ್ಟಿಲ್ಲ ಅಂತ ಪ್ರೂವ್ ಮಾಡಲಿ. ಅಭಿವೃದ್ಧಿಗೆ ಹಣ ಕೊಟ್ಟಿಲ್ಲವಾ ಅಂತ ಪ್ರೂವ್ ಮಾಡಲಿ. ಇವರ ತಲೆಯಲ್ಲಿ ಏನೂ ಇಲ್ಲ. ರಾಜಕೀಯ ನಂಜು ಇವರ ತಲೆಯಲ್ಲಿ ತುಂಬಿದೆ. ಇದು ರಾಜ್ಯದ ಜನರಿಗೆ ಮಾಡಿದ ದ್ರೋಹ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ
ಬೊಮ್ಮಾಯಿ ಮ್ಯಾಚಿಂಗ್ ಗ್ರ‍್ಯಾಂಟ್ ಕೊಡಬೇಕು ಅಂತ ಸುಳ್ಳು ಹೇಳ್ತಾರೆ. ಇದುವರೆಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇದನ್ನೆ ನಾನು ಬಜೆಟ್‌ನಲ್ಲಿ ಹೇಳಿದ್ದೇನೆ. ನಾನು ಸುಳ್ಳು ಹೇಳಿದ್ರೆ ರಾಜ್ಯಪಾಲರು ಭಾಷಣ ಮಾಡ್ತಿದ್ರಾ? ಇದು ಸತ್ಯ, ಇದನ್ನ ಹೇಳಿದ್ರೆ ಬಿಜೆಪಿ ಅವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ಇದನ್ನ ಕೇಳೋಕೆ ಆಗದೆ ಒದ್ದಾಡಿ ಅವರು ಬಾಯ್ಕಾಟ್ ಮಾಡಿದ್ರು. ಬಿಜೆಪಿ ಅವರಿಗೆ ಸತ್ಯದ ಉರಿ ತಡೆದುಕೊಳ್ಳಲು ಆಗದೇ ಒದ್ದಾಡಿ ಬಾಯ್ಕಾಟ್ ಮಾಡಿದ್ರು ಎಂದು ತಿರುಗೇಟು ನೀಡಿದ್ದಾರೆ.