– ಅನುದಾನಕ್ಕಾಗಿ ಮಿಸ್ಟರ್ ಕಟೀಲ್ ಬಾಯಿ ಬಿಟ್ಟಿದ್ಯಾ? ಶೋಭಾ ಕರಾಂದ್ಲಾಜೆ ಬಾಯಿ ಬಿಟ್ಟಿದ್ಯಮ್ಮಾ?
ಮಂಗಳೂರು: ಮೋದಿ (Narendra Modi) ಕೊಟ್ಟ ಮಾತಿನಂತೆ ಎಂದೂ ನಡೆಯಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ನೋಡಿಲ್ಲ. ಮೋದಿ ನಮ್ಮ ಗ್ಯಾರಂಟಿ ಪದವನ್ನು ಕದ್ದು ಬಿಟ್ಟಿದ್ದಾರೆ. ಈಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಮಂಗಳೂರು (Mangaluru) ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು (BJP) ನಿನ್ನೆ (ಶುಕ್ರವಾರ) ಮೊದಲೇ ಪ್ಲ್ಯಾನ್ ಮಾಡಿ ಪ್ಲೆಕಾರ್ಡ್‍ಗಳನ್ನು ಹಿಡಿದು ಸಿದ್ಧವಾಗಿದ್ದರು. ಬಜೆಟ್‍ನ್ನು ಧಿಕ್ಕರಿಸಿ ಹೋಗಲು ನಿರ್ಧರಿಸಿದ್ದರು. ಯಾಕೆಂದರೆ ಅವರಿಗೆ ಸತ್ಯ ಹೇಳಿದರೆ ಮೈ ಎಲ್ಲಾ ಉರಿಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಅಂತಾ ಕರೆದರೆ ಹೊಟ್ಟೆ ತುಂಬುತ್ತಾ: ಮಂಗಳೂರು ಜನತೆಗೆ ಖರ್ಗೆ ಪ್ರಶ್ನೆ
Advertisement
Advertisement
ಲೋಕಸಭಾ ಚುನಾವಣೆಗಿಂತ ಮುಂಚಿತವಾಗಿ ಇದು ಮೊದಲ ಸಭೆಯಾಗಿದ್ದು, ಮಂಗಳೂರಿನಿಂದಲೇ ಆರಂಭ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು. ಈ ಬಾರಿ ಮಂಗಳೂರು ಹಾಗೂ ಉಡುಪಿ ಲೋಕಸಭಾ ಸ್ಥಾನ ಗೆಲ್ಲಲೇ ಬೇಕು. ಮಂಗಳೂರಿನ ಜನರಿಗೆ ದೇಶದ ರಾಜ್ಯದ ರಾಜಕಾರಣ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಕೈ ಮುಗಿದು ಕೇಳುತ್ತೇವೆ ಬಿಜೆಪಿಯನ್ನು ನಂಬಬೇಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ನುಡಿದಂತೆ ನಡೆಯಲ್ಲ. ಮೋದಿ ಹೇಳಿದ ಯಾವುದಾದರೂ ಭರವಸೆ ಈಡೇರಿಸಿದ್ದಾರಾ? ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಧಾರ್ಮಿಕ ವಿಚಾರ ಜನರ ಮುಂದೆ ಇಡುತ್ತಾರೆ.
ಅಚ್ಚೇ ದಿನ ಬಂತಾ ಎಂದು ಪ್ರಶ್ನಿಸಿದ್ದಾರೆ.
ನಾವು ಮಾತು ಕೊಟ್ಟಂತೆ ನಡೆದಿದ್ದೇವೆ, ಬಿಜೆಪಿ ಥರ ಸುಳ್ಳು ಭರವಸೆ ನೀಡಿಲ್ಲ. ಕಳೆದ ಸಲ ನಾವು ಒಳ್ಳೆಯ ಕೆಲಸ ಮಾಡಿದ್ರೂ ಜನ ನಮ್ಮ ಕೈ ಹಿಡಿಯಲಿಲ್ಲ. ನಾವು ಮಾಡಿದ ಕೆಲಸ ಜನರಿಗೆ ತಿಳಿಸುವಲ್ಲಿ ಸೋತಿದ್ದೆವು. ಚುನಾವಣೆ ಮುಂಚೆ ಘೋಷಿಸಿದ್ದ 5 ಗ್ಯಾರಂಟಿ ನೀಡಿದ್ದೇವೆ. ಆದಾಯ ಜಾಸ್ತಿ ಆಗಿದೆ ಎಂದು ಹೆಗ್ಗಡೆಯವರು ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಗ್ಯಾರಂಟಿ ಘೋಷಣೆ ಆದಾಗ ಮೋದಿ ಜಾರಿ ಆಗಲ್ಲ, ಕರ್ನಾಟಕ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ನಾವು ಕೊಟ್ಟೇ ಕೊಡುತ್ತೇವೆ ಎಂದು ಹೇಳಿದ್ದೆವು. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಕರ್ನಾಟಕ ದಿವಾಳಿ ಆಗಿಲ್ಲ, ಸುಭದ್ರವಾಗಿದೆ. ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯವಾಗಿದೆ. ದೇಶದಲ್ಲಿ ತೆರಿಗೆ ವಸೂಲಿ ಮಾಡುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಮಗ್ಯಾಕೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಅನುದಾನದ ವಿಚಾರದಲ್ಲಿ ಸಂಸದರ ಮೌನದ ಬಗ್ಗೆ ಸಿಎಂ ಆಕ್ರೋಶ ಹೊರಹಾಕಿದ್ದು, ಮಿಸ್ಟರ್ ಕಟೀಲ್ ನೀನು ಯಾವತ್ತಾದ್ರೂ ಬಾಯಿ ಬಿಟ್ಟಿದ್ಯಾ? ಶೋಭಾ ಕರಾಂದ್ಲಾಜೆ ಯಾವಾಗಾದರೂ ಬಾಯಿ ಬಿಟ್ಟಿದ್ಯಮ್ಮಾ? ಸ್ವಾಭಿಮಾನ ಇದ್ದರೆ ಕಟೀಲ್ ಮತ್ತು ಶೋಭಾರನ್ನು ಸೋಲಿಸಿ. ಮಂಗಳೂರು ಉಡುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ. ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಯತ್ನಾಳ್ ಟೋಪಿ ಹಾಕಿದವರು ಆಫೀಸ್‍ಗೆ ಬರಬೇಡಿ ಎಂದು ಹೇಳುತ್ತಾರೆ. ಮೋದಿ ಪ್ರಧಾನಿಯಾದ ಮೇಲೆ ಬಡವರ ಮೇಲೆ ತೆರಿಗೆ ಹಾಕಿದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಉರ್ದು ಕವಿ ಗುಲ್ಜಾರ್, ವಿದ್ವಾಂಸ ರಾಮಭದ್ರಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ