BagalkotDistrictsKarnatakaLatest

ಅನಂತ್‍ ಕುಮಾರ್ ಹೆಗಡೆ ಬಳಸುವ ಭಾಷೆಯನ್ನ ನಮ್ಮೂರಲ್ಲಿ ಎಮ್ಮೆ ಮೇಯ್ಸೋರು ಬಳಸ್ತಾರೆ: ಸಿಎಂ

ಬಾಗಲಕೋಟೆ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗಡೆ ಬಳಸುವ ಭಾಷೆಯನ್ನ ನಮ್ಮೂರಲ್ಲಿ ಎಮ್ಮೆ ಮೇಯ್ಸೋರು ಬಳಸ್ತಾರೆ ಅಂತ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಬಸವೇಶ್ವರ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಗಾಗಿ ಬಾಗಲಕೋಟೆ ನಗರಕ್ಕೆ ಆಗಮಿಸಿದ ಅವರು, ರಾಜಕೀಯವಾಗಿ ಮಾತನಾಡುವಾಗ ವೈಯುಕ್ತಿಕವಾಗಿ ಮಾತನಾಡಬಾರದು. ನಾನು ಯಾವತ್ತೂ ಅಸಂಸದೀಯ ಭಾಷೆ ಬಳಸಿಲ್ಲ ಅಂದ್ರು. ಎಡಬಿಡಂಗಿ ಹಾಗೂ ಚಪ್ರಾಸಿ ಸಾಹಿತಿಗಳು ಎಂದು ಪದ ಬಳಸಿದ್ದ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿ, ಅವರು ಬಳಸುವ ಭಾಷೆಯನ್ನ ನಮ್ಮೂರಲ್ಲಿ ಎಮ್ಮೆ ಮೇಯ್ಸೋರು ಬಳಸ್ತಾರೆ. ಅವ್ರಿಗಿಂತ ಚನ್ನಾಗಿ ಬೈಗುಳನ್ನ ಬಳಸ್ತಾರೆ ಎಂದು ಕಿಡಿ ಕಾರಿದ್ರು.

75 ವರ್ಷ ತುಂಬಿದ ಬಿಎಸ್‍ವೈ ಮಹಾನ್ ಸುಳ್ಳುಗಾರ. ಬೇಸ್ ಲೆಸ್ ಆರೋಪ ಮಾಡುವ ಅವರಿಗೆ ರಾಜಕೀಯ ಸಂಸ್ಕøತಿ ಹಾಗೂ ಜ್ಞಾನವಿಲ್ಲ ಅಂದ್ರು. ಪ್ರಧಾನಿ ಮೋದಿ ಹಾಗೂ ಬಿಎಸ್‍ವೈ ಬಗ್ಗೆಯೂ ನಾನು ಏಕವಚನದಲ್ಲಿ ಮಾತನಾಡಿಲ್ಲ. ಆದ್ರೆ ಪ್ರಧಾನಿ ಅಂದ್ರೆ ಅವ್ರನ್ನ ಯಾರೂ ಟೀಕೆ ಮಾಡಬಾರದಾ? ಎಂದು ಪ್ರಶ್ನೆ ಹಾಕಿದ್ರು. ಅಚ್ಚೇ ದಿನ್ ಬರುತ್ತೆ ಅಂದ್ರು, ಯಾವಾಗ ಬಂತು ಅಚ್ಚೇ ದಿನ್? ಪ್ರತೀ ವರ್ಷ 2 ಲಕ್ಷ ಉದ್ಯೋಗ ಸೃಷ್ಟಿಸ್ತೀವಿ ಅಂದ್ರು. ಅದನ್ನ ಕೇಳಬಾರದಾ? ನಾವು ರೈತರ ಸಾಲ ಮನ್ನಾ ಮಾಡಿದ್ವಿ. ಕೇಂದ್ರದವರು ಸಾಲ ಮನ್ನಾ ಮಾಡಿ ಎಂದು ಕೇಳಬರದಾ? ಅಂದ್ರು.

ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಬಿಜೆಪಿಗೆ ಹೋಗಲ್ಲ. ಬದಲಾಗಿ ಬಿಜೆಪಿಯವ್ರೇ ನನ್ನ ಸಂಪರ್ಕದಲ್ಲಿದ್ದಾರೆ. ಸಮಯ ಬಂದಾಗ ಅವರ ಹೆಸರು ಬಹಿರಂಗ ಪಡೆಸುವೆ ಎಂದ್ರು. ಇನ್ನು ಕೃಷ್ಣಾ ಮೇಲ್ದಂಡೆ ಯೋಜನಾಗಾಗಿ ನಾವು 25 ಸಾವಿರ ಕೋಟಿ ಖರ್ಚು ಮಾಡಿದ್ದೀವಿ. ಅಸೆಂಬ್ಲಿಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೀವಿ. ಮತ್ತೇಕೆ ಶ್ವೇತಪತ್ರ ಹೊರಡಿಸಬೇಕು ಎಂದ್ರು. ನಾವು ಭಷ್ಟಚಾರ ಮಾಡಿದ್ರೆ ಯಾಕೆ ಅಂಸೆಂಬ್ಲಿಯಲ್ಲಿ ದಾಖಲೆ ಬಿಡುಗಡೆ ಮಾಡ್ಲಿಲ್ಲ ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ರು.

Leave a Reply

Your email address will not be published. Required fields are marked *

Back to top button