ಬೆಂಗಳೂರು: ಬಿಜೆಪಿ (BJP) ಅವರು ನಮ್ಮ ಸರ್ಕಾರದ ಗ್ಯಾರಂಟಿಗಳನ್ನು(Guarantee) ಮೊದಲು ಟೀಕೆ ಮಾಡಿ ಈಗ ನಮ್ಮ ಗ್ಯಾರಂಟಿ ನೋಡಿಕೊಂಡು ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ (Modi Guarantee) ಎಂದು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ನಲ್ಲಿ ನಡೆದ 100 ಅಶ್ವಮೇಧ ಕ್ಲಾಸಿಕ್ ಬಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
Advertisement
Advertisement
ನಾವು ಚುನಾವಣೆ (Election) ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೆವು. ಜೂನ್ 11 ಕ್ಕೆ ಇದೇ ಜಾಗದಲ್ಲಿ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿ ಮಾಡಿದೆವು. ಅಲ್ಲಿಂದ ಇಲ್ಲಿಯವರೆಗೆ 146 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಇಷ್ಟು ಜನ ಉಚಿತವಾಗಿ ಪ್ರಯಾಣ ಮಾಡ್ತಾರೆ ಅಂದರೆ ಅವರು ತೆಗೆದುಕೊಳ್ಳಬೇಕಾದ ಹಣ ಉಳಿತಾಯ ಆಗಿದೆ. ಕೋಟಿಗಟ್ಟಲೆ ಹಣ ಹೆಣ್ಣು ಮಕ್ಕಳಿಗೆ ಉಳಿತಾಯವಾಗಿದೆ. ಈ ಉಳಿತಾಯದ ಹಣ ಬೇರೆಯದಕ್ಕೆ ಹೆಣ್ಣುಮಕ್ಕಳು ಖರ್ಚು ಮಾಡಿದ್ದಾರೆ. ನಾವು ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುತ್ತೇವೆ ಎಂದು ಹೇಳಿದೆವು. ಎಲ್ಲಾ ಜಾತಿ, ಧರ್ಮದ, ಪಕ್ಷದ ಬಡವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೇವೆ ಎಂದರು.
Advertisement
ಹಿಂದೆ ಯಾವುದಾದರೂ ಸರ್ಕಾರ ಈ ಕೆಲಸ ಮಾಡಿತ್ತಾ? 1.17 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಕೊಡುವ ಯೋಜನೆ ಹಿಂದೆ ಯಾರಿಗಾದ್ರು ಇತ್ತಾ? ಮಹಿಳಾ ಸಬಲೀಕರಣ ಆಗಿಲ್ಲ. ಹೀಗಾಗಿ ನೀವು ಯಾರಿಗೆ ಸಪೋರ್ಟ್ ಮಾಡಬೇಕು? ಅಂತ ಪರೋಕ್ಷವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಬೇಕು ಎಂದರು. ಇದನ್ನೂ ಓದಿ: KSRTCಗೆ 800 ʻಅಶ್ವಮೇಧʼ ಕ್ಲಾಸಿಕ್ ಬಸ್‌ಗಳ ಬಲ – 100 ಬಸ್‌ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ
Advertisement
ಬಿಜೆಪಿ ಅವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಮೊದಲು ಗ್ಯಾರಂಟಿ ಜಾರಿ ಮಾಡಲು ಆಗುವುದಿಲ್ಲ ಎಂದರು. ಜಾರಿ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದರು. ಜಾರಿ ಮಾಡಿದ ಮೇಲೆ ಚುನಾವಣೆ ಆದ ಮೇಲೆ ನಿಲ್ಲಿಸುತ್ತಾರೆ ಎಂದು ಹೇಳುತ್ತಾರೆ. ರಾಜಸ್ಥಾನದಲ್ಲಿ ಮೋದಿ ಅವರು ಗ್ಯಾರಂಟಿಯಿಂದ ದಿವಾಳಿ ಆಗುತ್ತದೆ ಎಂದು ಹೇಳಿದರು. ಆದರೆ ಈಗ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಅಂತಾರೆ. 10 ವರ್ಷ ಯಾಕೆ ಮೋದಿ ಅವರೇ ಗ್ಯಾರಂಟಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ
ಬಿಜೆಪಿಯವರು ಎರಡು ಕೋಟಿ ಉದ್ಯೋಗ ಕೊಟ್ಟಿದ್ದಾರಾ? ಅಚ್ಚೇ ದಿನ್ ಆಯೇಗಾ ಅಂದ್ರು ಬಂತಾ?ಪೆಟ್ರೋಲ್, ಡಿಸೇಲ್, ಗ್ಯಾಸ್, ಗೊಬ್ಬರ ಬೆಲೆ ಕಡಿಮೆ ಆಯ್ತಾ? ರೈತರ ಆದಾಯ ದುಪ್ಪಟ್ಟು ಆಯ್ತಾ? ಈಗ ಮೋದಿ ಗ್ಯಾರಂಟಿ.. ಮೋದಿ ಗ್ಯಾರಂಟಿ ಅಂತಾರೆ. ಈಗ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಸ್ ಫ್ರೀ ಕೊಡಿ. 2 ಸಾವಿರ ಹಣ ಕೊಡಿ. 5 ಕೆಜಿ ಅಕ್ಕಿಗೆ 170 ರೂಪಾಯಿ ಹಣ ಕೊಡುತ್ತಿದ್ದೇವೆ. ನೀವು ಯಾಕೆ ನೀಡುವುದಿಲ್ಲ? ನಿರುದ್ಯೋಗಗಳಿಗೆ 3 ಸಾವಿರ ರೂ., 1500 ರೂ. ಕೊಡುತ್ತೇವೆ. ನೀವು ನಿಮ್ಮ ಆಡಳಿತದ ರಾಜ್ಯದಲ್ಲಿ ಇವೆಲ್ಲ ಗ್ಯಾರಂಟಿ ಯೋಜನೆ ಕೊಡಿ ಮೋದಿ ಅವರೇ ಅಂತ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸವಾಲ್ ಹಾಕಿದರು.
ಶಕ್ತಿ ಯೋಜನೆಗೆ 4,530 ಕೋಟಿ ಹಣ ರೂ. ಕೊಟ್ಟಿದ್ದೇವೆ. 1 ಕೋಟಿ ನೌಕರರಿಗೆ ವಿಮಾ ಯೋಜನೆ ಕೊಟ್ಟಿದ್ದೇವೆ. ರಾಜಕೀಯ ಇಚ್ಚಾಶಕ್ತಿ, ಬಡವರ ಪರ ಕಾಳಜಿ ಇದ್ದರೆ ಇವೆಲ್ಲ ಕಾರ್ಯಕ್ರಮ ಮಾಡಲು ಆಗುತ್ತದೆ. ನಮ್ಮದು ಬಡವರ ಬಗ್ಗೆ ಇರುವ ಬದ್ಧತೆ. ಇದು ಕಾಂಗ್ರೆಸ್ ಬದ್ದತೆ ಎಂದು ವಾಗ್ದಾಳಿ ನಡೆಸಿದ್ದಾರೆ.