ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಪ್ರಮುಖ ಪಾತ್ರದ ಬಗ್ಗೆ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಆಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೊಣೆ ಹೊರಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂದೇಹವೇ ಬೇಡ. ಈ ಬಗ್ಗೆ ನಾವು ಮೊದಲಿನಿಂದ ಹೇಳಿದ್ದೇವೆ. ಇದಕ್ಕೆ ಸಿದ್ದರಾಮಯ್ಯ ಅವರು ಹೊಣೆ ಹೊರಬೇಕು. ಆರ್ಥಿಕ ಇಲಾಖೆ ಅವರ ಕೈಯಲ್ಲಿದೆ. ಚುನಾವಣೆಗೆ ಹಣ ಬಳಕೆ ಆಗಿದೆ ಎಂದರೆ ಇದರ ಹಿಂದೆ ಕಾಂಗ್ರೆಸ್ (Congress) ಹೈಕಮಾಂಡ್ ಇದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಿಎಂ ರಾಜೀನಾಮೆ ನಿಶ್ಚಿತ, ಖಾಲಿಯಾಗುವ ಸ್ಥಾನಕ್ಕೆ ಹಗ್ಗಜಗ್ಗಾಟ: ವಿಜಯೇಂದ್ರ ಟಾಂಗ್
ಚಂದ್ರಶೇಖರ್ ಆತ್ಮಹತ್ಯೆ ಪತ್ರದಲ್ಲಿ ಸ್ಪಷ್ಟವಾಗಿ ಇತ್ತು. ನಾಗೇಂದ್ರ ನಿರ್ದೇಶನದಂತೆಯೇ ಆಗಿದೆ. ಚುನಾವಣೆ ಬಳಿಕ ಈ ಬಗ್ಗೆ ಸ್ಪಷ್ಟವಾಗಿ ಕಂಡಿದೆ. ಇಡಿ ಚಾರ್ಜ್ ಶೀಟ್ ಬಹಳ ಸ್ಪಷ್ಟವಾಗಿ ಹೇಳಿದೆ.ಹೆಚ್ಚಿನ ತನಿಖೆ ಆದಾಗ ಪ್ರಮುಖ ವ್ಯಕ್ತಿಗಳು ಹೊರ ಬರುತ್ತಾರೆ. ನೇರವಾಗಿ ಖಜಾನೆಯಿಂದಲೇ ಹಣ ಹೋಗಿರೋದು ಇದೇ ಮೊದಲು ಅನಿಸುತ್ತದೆ. ಹಣಕಾಸು ಇಲಾಖೆ ಗೊತ್ತಿಲ್ಲದೇ ಇದು ನಡೆದಿಲ್ಲ ಎಂಬುದು ಗೊತ್ತಾಗುತ್ತಿದೆ. ಹಿಂದೆ ಕೆವಲ ಆರೋಪ ಆಗಿತ್ತು. ಈಗ ಸ್ಪಷ್ಟವಾಗುತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಡೆತ್ ನೋಟಲ್ಲಿ ಹಣವನ್ನ ಟ್ರಾನ್ಸ್ಫರ್ ಮಾಡಿರುವುದು ಎಲೆಕ್ಷನ್‌ಗೆ ಬಳಕೆ ಆಗಿರೋದು ಬಹಳ ಸ್ಪಷ್ಟವಾಗಿದೆ ಎಂದರು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್
ರಾಜ್ಯ ಸರ್ಕಾರ ವಿಫಲವಾಗಿದೆ. ಎಸ್‌ಐಟಿ ಮೂಲಕ ಎಫ್‌ಐಆರ್ ಕೂಡ ದಾಖಲಿಸಿರಲಿಲ್ಲ. ಇನ್ನೂ ಮತ್ತಷ್ಟು ವ್ಯಕ್ತಿಗಳ ಹೆಸರು ಹೊರಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಮೇಲೆ ಆಪಾದನೆ ಇದೆ. ಅಂದು, ಇಂದು, ಮುಂದೆ ಕೂಡ ಹಣ ಬಳಕೆ ಬಗ್ಗೆ ಆಪಾದನೆ ಮಾಡುತ್ತೇವೆ. 100% ಪೇಮೆಂಟ್ ಆಗಿದೆ. ಖಜಾನೆ ಮೂಲಕ ಅಕೌಂಟಿಗೆ ಹೋಗಿದ್ರೆ, ಇದೇ ಇತಿಹಾಸದಲ್ಲಿ ಮೊದಲು. ಹಣಕಾಸು ಇಲಾಖೆ ಸಹಕಾರ ಇಲ್ಲದೆ ಇದು ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವೃಷಭಾವತಿ ಏತ ನೀರಾವರಿ ಯೋಜನೆ ಕಾಮಗಾರಿ ಚುರುಕುಗೊಳಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ
ಎನ್‌ಐಎ ಚಾರ್ಜ್ ಶೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಯೋತ್ಪಾದಕ ತಂಡಗಳು ಇಡೀ ದೇಶದ ಶಾಂತಿಯನ್ನ ಕದಡಬೇಕು ಎಂದು ದೇಶದ ಅಖಂಡತೆ, ಏಕತೆಗೆ ದುಡಿಯುತ್ತಿರುವ ಪಕ್ಷವನ್ನ ಟಾರ್ಗೆಟ್ ಮಾಡಿದೆ. ಘಟನೆ ನಡೆದಾಗ ವ್ಯವಹಾರದಲ್ಲಿ ದ್ವೇಷ ಇರಬೇಕು ಎಂದು ಕಾಂಗ್ರೆಸ್‌ನವರು ಹೇಳಿದರು. ಅವರ ಮೇಲೆ ಮೃದು ಧೋರಣೆ, ತುಷ್ಟೀಕರಣ ಮಾಡುವ ಕೆಲಸ ಆಗುತ್ತಿದೆ. ದೇಶದ ಭದ್ರತೆಗೆ ಇದು ಮಾರಕ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮುಂದಿನ ಕಾನೂನು ಹೋರಾಟದ ಬಗ್ಗೆ ಪತ್ನಿ ಜೊತೆ ಚರ್ಚೆ – ಬುಧವಾರ ಜೈಲಿಗೆ ಬರುವಂತೆ ಹೇಳಿದ ದರ್ಶನ್