Tuesday, 17th July 2018

Recent News

ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ- ಶಾಸಕ ಕೆ.ಎನ್ ರಾಜಣ್ಣರಿಂದ ರಾಜಾತಿಥ್ಯ

ತುಮಕೂರು: ಜಿಲ್ಲೆಯ ಮಧುಗಿರಿ ಕ್ಷೇತ್ರ ಶಾಸಕದ ಕೆ.ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಾತಿಥ್ಯವನ್ನು ನೀಡಿದ್ದು, ಸಿಎಂ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಿದ್ದಾರೆ.

ಗುರುವಾರ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶಿರಾಗೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾವಹಿಸುವ ಮುನ್ನ ಕ್ಯಾತಸಂದ್ರದಲ್ಲಿರುವ ಮಧುಗಿರಿಯ ಶಾಸಕ ಕೆ.ಎನ್ ರಾಜಣ್ಣ ಅವರ ಮನೆಯಲ್ಲಿ ಬೆಳ್ಳಿ ತಟ್ಟೆ, ಲೋಟಾದಲ್ಲಿ ಉಪಹಾರ ಸೇವನೆ ಮಾಡಿದ್ದರು. ಅಲ್ಲದೇ ಸಿಎಂ ಕಾಫಿ ಹಾಗೂ ಡ್ರೈಫ್ರೂಟ್ ಸೇವಿಸಲು ನೀಡಿದ್ದ ವಸ್ತುಗಳು ಬೆಳ್ಳಿಯಿಂದ ತಯಾರು ಮಾಡಿದ್ದವು.

 

ಸಿಎಂ ಸಿದ್ದರಾಮಯ್ಯ ಅವರು ಸರಳ ಜೀವನ ಹಾಗೂ ಸಮಾಜವಾದಿ ಹಿನ್ನೆಲೆಯಿಂದ ಬೆಳೆದು ಬಂದ ನಾಯಕರಗಿದ್ದೂ, ಪ್ರಸ್ತುತ ಅವರು ಸ್ವೀಕರಿಸಿರುವ ರಾಜಾತಿಥ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಕಳೆದ ಡಿಸೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಸಾಧನಾ ಸಮಾವೇಶ ಮುಗಿದ ನಂತರ ಸಿಎಂ ಸಿದ್ದರಾಮಯ್ಯದ ಹಾಗೂ ಸಹೋದ್ಯೋಗಿಗಳ ಭೋಜನಕ್ಕೆ ಬೆಳ್ಳಿ ತಟ್ಟೆಯನ್ನು ಬಳಕೆ ಮಾಡಲಾಗಿದ್ದು, ಈ ಭೋಜನ ಕೂಟಕ್ಕಾಗಿ ಸುಮಾರು 10ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಕಲಬುರುಗಿ ಬಿಜೆಪಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ್ ತೇಲ್ಕೂರ ಆರೋಪ ಮಾಡಿದ್ದರು. ಆದರೆ ಜಿಲ್ಲಾಡಳಿತ ಈ ಆರೋಪವನ್ನು ತಿರಸ್ಕರಿಸಿ ಭೋಜನ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಸಮಿಸಿ ಆಯೋಜಿಸಿತ್ತು ಎಂದು ಹೇಳಿತ್ತು.

Leave a Reply

Your email address will not be published. Required fields are marked *