– ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡ್ತೀನಿ
ಬೆಂಗಳೂರು: ವೀರಪ್ಪ ಮೊಯ್ಲಿ (Veerappa Moily) ಅಥವಾ ಬೇರೆಯವರು ಸಿಎಂ ಬದಲಾವಣೆ ವಿಚಾರ ಹೇಳುವುದು ಮುಖ್ಯವಲ್ಲ. ಹೈಕಮಾಂಡ್ ಏನು ಹೇಳುತ್ತಾರೋ ಅದು ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
Advertisement
ಡಿಕೆಶಿ ಸಿಎಂ ಆಗೇ ಆಗ್ತಾರೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಬೇರೆ ಅವರು ಮಾತನಾಡಿದರೆ ನಾನೇನು ಮಾತನಾಡಲಿ. ನಾನು ಹೈಕಮಾಂಡ್ ನಿರ್ದೇಶನದಂತೆ ಹೋಗುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಖಚಿತ – ಬಿ.ವೈ.ವಿಜಯೇಂದ್ರ
Advertisement
ಗುತ್ತಿಗೆದಾರರಿಗೆ ಏಪ್ರಿಲ್‌ನಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದೇನೆ. 30 ಸಾವಿರ ಕೋಟಿ ರೂ. ಬಾಕಿ ಇದೆ. 15 ಸಾವಿರ ಕೋಟಿ ರೂ. ಕೊಡಬೇಕು ಎಂದು ಹೇಳಿದ್ದಾರೆ. ಆದರೆ ಅಷ್ಟೆಲ್ಲಾ ಕೊಡಲು ಆಗುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕೊಡುತ್ತೇವೆ ಎಂದರು.
Advertisement
Advertisement
ಹೈಕಮಾಂಡ್ ದೂರು ನೀಡುತ್ತೇವೆ ಎಂಬ ಗುತ್ತಿಗೆದಾರರ ಸಂಘದವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲಿ ಯಾರು ಬೇಡ ಅಂದರು. ನಾವು ಹಣಕಾಸು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುತ್ತೇವೆ. ಹಣ ಬಾಕಿ ಉಳಿದಿದ್ದು ಯಾರಿಂದ? ಬಜೆಟ್‌ನಲ್ಲಿ ಹಣ ಇಡದೇ ಟೆಂಡರ್ ಕರೆದು ಕೆಲಸ ಶುರು ಮಾಡಿದರು. ಅದಕ್ಕೆ ನಾವು ಹೊಣೆನಾ? ಗುತ್ತಿಗೆದಾರರು ಯಾರಿಗಾದರೂ ದೂರು ಕೊಡಲಿ. ನಾವು ಹಣಕಾಸು ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುವುದು ಎಂದು ಖಡಕ್ ಉತ್ತರ ನೀಡಿದರು. ಇದನ್ನೂ ಓದಿ: ಓಲಾದ 1 ಸಾವಿರ ಉದ್ಯೋಗಿಗಳು ಮನೆಗೆ
ಅಧಿಕಾರಿಗಳು ಕಮಿಷನ್ ಕೇಳುತ್ತಾರೆ ಎಂಬ ಆರೋಪ ಕುರಿತು ಮಾತನಾಡಿ, ಅಧಿಕಾರಿಗಳು ಕಮಿಷನ್ ಕೇಳಿದರೆ ಕೊಡುವುದು ಬೇಡ. ಯಾಕೆ ಕಮಿಷನ್ ಕೊಡುತ್ತೀರಾ. ಲಂಚ ತೆಗೆದುಕೊಳ್ಳುವುದು ಅಪರಾಧ. ಅದೇ ರೀತಿ ಲಂಚ ಕೊಡುವವನು ಅಪರಾಧಿನೇ. ಕಮಿಷನ್ ಯಾರು ಕೊಡಬಾರದು. ನಾನು ಇದೂವರೆಗೂ ಹಣ ಬಿಡುಗಡೆಗೆ ದುಡ್ಡು ಕೇಳಿಲ್ಲ ಎಂದು ಹೇಳಿದರು.
ಬಜೆಟ್ ನಿರೀಕ್ಷೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಾ. 7ರಂದು ಬಜೆಟ್ ಮಂಡನೆ ಮಾಡುತ್ತೇವೆ. ಬಜೆಟ್ ಮಂಡನೆ ಆದ ಮೇಲೆ ನೋಡಿ. ಬಜೆಟ್ ಮಂಡನೆ ಮಾಡೋವರೆಗೂ ಅದು ಸೀಕ್ರೆಟ್ ಡಾಕ್ಯುಮೆಂಟ್ ಆಗಿರುತ್ತದೆ. ಅದರಲ್ಲಿ ಏನಿದೆ ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕೆ ಸಾಹೇಬ್ರು ಹೇಳಿರೋದ್ರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶ – ಸಾಧು ಕೋಕಿಲ