Bengaluru City
ಸತ್ತವರನ್ನೆಲ್ಲ ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನಾಗಿ ಮಾಡ್ಕೊಳ್ತಿದ್ದಾರೆ: ಸಿಎಂ

ಬೆಂಗಳೂರು: ಬಿಜೆಪಿಯವರು ಸತ್ತ ವ್ಯಕ್ತಿಗಳನ್ನೆಲ್ಲಾ ತಮ್ಮ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ನೂತನ ಕಟ್ಟಡ ಉದ್ಘಾಟನೆ ಬಳಿಕ ಸಂತೋಷ್ ಕೊಲೆ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಿಎಂ, ಸಂತೋಷ್ ಬಿಜೆಪಿ ಕಾರ್ಯಕರ್ತ ಅಲ್ಲವೇ ಅಲ್ಲ. ಸತ್ತವರನ್ನೆಲ್ಲ ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನಾಗಿ ಮಾಡಿಕೊಳ್ತಿದ್ದಾರೆ. ಸಂತೋಷ್ ಹತ್ಯೆಗೆ ನಮ್ಮ ಖಂಡನೆ ಇದೆ. ಕೊಲೆಯನ್ನ ನಾವು ತೀವ್ರವಾಗಿ ಖಂಡಿಸ್ತೀವಿ. ಹತ್ಯೆ ಮಾಡಿರುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಉದ್ದೇಶದಿಂದ ಪ್ರಕರಣವನ್ನ ಸಿಸಿಬಿಗೆ ವಹಿಸಿದ್ದೇವೆ. ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ತೀವಿ ಅಂತಾ ಹೇಳಿದರು.
ಗಾಂಜಾ ಗಲಾಟೆಯಲ್ಲಿ ಸಂತೋಷ್ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗಾಂಜಾ ಮಾರಾಟ ಮಾಡುತ್ತಿರುವವರ ವಿರುದ್ಧವೂ ಕ್ರಮ ತೆಗೆದುಕೊಳ್ತೀವಿ ಎಂದು ಸಿಎಂ ಹೇಳಿದ್ರು. ಸಂತೋಷ್ ಮನೆಗೆ ಭೇಟಿ ನೀಡ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸದೆ ಹೊರಟು ಹೋದರು.
