– ಕೋಗಿಲು ಲೇಔಟ್ ಅಕ್ರಮಕ್ಕೆ ಸಕ್ರಮ – ಸಬ್ಸಿಡಿ, ಸಾಲ ಜೊತೆ ಪುನರ್ವಸತಿ ಭಾಗ್ಯ!
ಬೆಂಗಳೂರು: ಪ್ರವಾಹ ಬಂದು ಮನೆ ಕುಸಿತಕ್ಕೂ ಸೂರು ವ್ಯವಸ್ಥೆ ಮಾಡ್ಬೇಕು, ಆನೆ ತುಳಿದು ಸತ್ತರೂ ಪರಿಹಾರ ಕೊಡ್ಬೇಕು. ಮಾತೆತ್ತಿದ್ರೆ ಮಾನವೀಯತೆಯ ಅಸ್ತ್ರ..! ಕೇರಳದಲ್ಲಿ ಏನೇ ಆದರೂ ಕರ್ನಾಟಕ ಸಹಾಯ ಮಾಡಬೇಕು.. ಕೇರಳದವರೂ ಏನೇ ಹೇಳಿದರೂ ಅದಕ್ಕೆ ಪರಿಹಾರ ಕೊಡಬೇಕು. ಈಗ ಅಕ್ರಮದಾರರಿಗೆ ಪರ್ಯಾಯ ಸೂರಿನ ಭಾಗ್ಯ. ಇದು ಕರ್ನಾಟಕ ಸರ್ಕಾರದ (Karnataka Government) ಸಕಲ ವ್ಯವಸ್ಥೆಯ ಪರಿ.
ಕೋಗಿಲು ಲೇಔಟ್ ಅಕ್ರಮಕ್ಕೆ (Kogilu layout Demolition) ಬೈಯ್ಯಪ್ಪನಹಳ್ಳಿ ಬಳಿ ಸಕ್ರಮ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ, ಮಾನವೀಯತೆಯ ದೃಷ್ಠಿಯಿಂದ ಬೈಯಪ್ಪನಹಳ್ಳಿಯಲ್ಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ನಾಳೆ ಹಾಗೂ ನಾಡಿದ್ದು ಜಿಲ್ಲಾಧಿಕಾರಿಗಳು ಹಾಗೂ ಜಿಬಿಎ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಅರ್ಹರ ಪಟ್ಟಿಯನ್ನು ನೀಡಲಿದ್ದಾರೆ. ಈ ಪಟ್ಟಿ ಆಧರಿಸಿ ಒಂಟಿ ಮನೆ ಯೋಜನೆಯಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: Kogilu layout Demolition | ಅರ್ಹರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನ: ಸಿದ್ದರಾಮಯ್ಯ
ಇನ್ನೂ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಾಸವಿರೋದನ್ನು ಸರ್ಕಾರ ಒಪ್ಪಿಕೊಂಡಿದೆ. ತಹಶೀಲ್ದಾರ್ ಹಾಗೂ ಶಿರಸ್ತೇದಾರರಿಗೆ ಗೊತ್ತಿಲ್ಲದೆ ಅಕ್ರಮ ವಾಸ ಸಾಧ್ಯವಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಅಹವಾಲು ಆಲಿಸಿದ ಡಿಕೆಶಿ
ಇನ್ನು, ವೇಣುಗೋಪಾಲ್ ಆದೇಶವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದು, ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಆದ್ರೆ, ಅವರಿಗೆ ಹೇಳುವ ಹಕ್ಕಿದೆ ಅಂತ ಹೇಳಿದ್ದಾರೆ. ಇದಕ್ಕೂ ಮುನ್ನ, ತೆರವು ಸ್ಥಳಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ಕೊಟ್ಟಿದ್ರು.
2023ರಲ್ಲಿ ಮನೆಗಳು ಇರಲಿಲ್ಲ. 24ರಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ ಅಂತ ಬೆಂಗಳೂರು ಡಿಸಿ ಜಗದೀಶ್ ಸ್ಯಾಟಲೈಟ್ ಇಮೇಜ್ ತೋರಿಸಿದ್ದಾರೆ. ರಾತ್ರೋರಾತ್ರಿ ಯಾರೋ ಶೆಡ್‌ಗಳನ್ನ ಹಾಕಿಕೊಂಡಿದ್ದು, ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ ಅಂತ ಡಿಸಿಎಂ ದೂರಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್‌ಗೆ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಡಿ.31ರಂದು ಮೂರು ಮಾರ್ಗದಲ್ಲಿ ಸೇವಾ ಸಮಯ ವಿಸ್ತರಣೆ
ರಾಜ್ಯ ಸರ್ಕಾರದ ನಡೆಗೆ ಬಿಜೆಪಿ ವ್ಯಾಪಕ ಆಕ್ರೋಶ ಹೊರಹಾಕಿದೆ. ವೇಣುಗೋಪಾಲ್ ಹಸ್ತಕ್ಷೇಪಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಮಾನವನ್ನ ದೇಶದ ಮುಂದೆ ಹರಾಜು ಹಾಕಿದ್ದು, ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಅಂತಾ ಅಶೋಕ್ ಆಗ್ರಹಿಸಿದ್ದಾರೆ. ಅಕ್ರಮದಾರರಿಗೆ ಪುನರ್ವಸತಿ ಭಾಗ್ಯ ಹೇಗೆ ಕೊಡ್ತಾರೆ? ಅಂತ ಪ್ರಶ್ನಿಸಿದೆ. ಪಿಣರಾಯಿ ವಿಜಯನ್ ಕರ್ನಾಟಕ ಸರ್ಕಾರ ನಡೆಸಲಿ ಅಂತ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಜನರಲ್ – 1 ಮನೆಗೆ 11.20 ಲಕ್ಷ ರೂ.
* ಒಂಟಿ ಮನೆ ಸ್ಕೀಂ ಅಡಿ ಬಿಬಿಎಂಪಿಯಿಂದ 5 ಲಕ್ಷ ರೂ. ಸಬ್ಸಿಡಿ
* ರಾಜೀವ್ ಗಾಂಧಿ ವಸತಿ ಯೋಜನೆಯಡಿ 3.70 ಲಕ್ಷ ಸಬ್ಸಿಡಿ
* ಒಟ್ಟು 8 ಲಕ್ಷ 70 ಸಾವಿರ ರೂ. ಜನರಲ್‌ಗೆ ಸಿಗುತ್ತೆ
* ಉಳಿದ 2.50 ಲಕ್ಷ ಸಾಲದ ರೂಪದಲ್ಲಿ ಸರ್ಕಾರವೇ ಕೊಡಿಸುತ್ತೆ.

