– ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ʻಸೇಂಟ್ ಮೇರಿಸ್ʼ ಹೆಸರಿಡುವಂತೆ ಮನವಿ
ಬೆಂಗಳೂರು: ಇಲ್ಲಿನ ಶಿವಾಜಿನಗರದ (Shivaji Nagar) ಸಂತ ಮೇರಿ ಜಯಂತ್ಯುತ್ಸವ ಅಂಗವಾಗಿ ನಡೆದ ಅಮ್ಮ ಮರಿಯಮ್ಮನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂದರು. ಸಿಎಂ ಜೊತೆಗೆ ಸಿದ್ದರಾಮಯ್ಯ (Siddaramaiah), ಶಾಸಕ ರಿಜ್ವಾನ್ ಹರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸಹ ಪಾಲ್ಗೊಂಡಿದ್ದರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ಪೀಟರ್ ಮಾಚಡೋ ಕ್ರಿಶ್ಚಿಯನ್ ಧರ್ಮದ (Christianity) ಉನ್ನತೀಕರಣದ ಪ್ರಯತ್ನಕ್ಕೆ ಸರ್ಕಾರ ಎಲ್ಲಾ ಸಹಕಾರ ನೀಡಲಿದೆ. ಕಳೆದ ವರ್ಷ 5 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಮುಂದಿನ ವರ್ಷ 5 ಕೋಟಿ ಅನುದಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ಇಂದು ರಾತ್ರಿಯೇ ಡಿಸಿಎಂ ಡಿಕೆಶಿ ಅಮೆರಿಕ ಪ್ರವಾಸ – ಕಮಲಾ ಹ್ಯಾರಿಸ್‌ರಿಂದ ಬಂತು ವಿಶೇಷ ಆಹ್ವಾನ?
Advertisement
Advertisement
ಈ ದೇಶದಲ್ಲಿ ನಮ್ಮ ಕರ್ತವ್ಯ ನಿರ್ವಹಿಸುವುದು ಅಂದ್ರೇ ಮನುಷ್ಯರಾಗಿ ಬಾಳುವುದು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಪಾದ್ರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಈ ಬೆಸಿಲಿಕಾ ಚರ್ಚ್‌ಗೆ ಎಲ್ಲಾ ಧರ್ಮ, ಜಾತಿಯವರೂ ಬರ್ತಾರೆ. ಪುರಾತನ ಚರ್ಚ್ ಆದರೂ ಭಾವೈಕ್ಯತೆಯ ಕೇಂದ್ರ ಅಂದ್ರೆ ಅತಿಶಯೋಕ್ತಿ ಅಲ್ಲ. ನಾವೆಲ್ಲರೂ ದೇಶದಲ್ಲಿ ಮನುಷ್ಯರಾಗಿ ಬಾಳುವುದೇ ಕರ್ತವ್ಯ. ಕ್ರಿಶ್ಚಿಯನ್ ಪಾದ್ರಿಗಳು ದೇಶದ ಉದ್ದಗಲಕ್ಕೂ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡುತ್ತಾ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಕಳೆದ ಬಾರಿ ಕಾರ್ಯಕ್ರಮಕ್ಕೆ ಬಂದಾಗ 10 ಕೋಟಿ ರೂ. ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ 5 ಕೋಟಿ ರೂ. ನೀಡಿದ್ದೇನೆ. ಮುಂದಿನ ವರ್ಷ ಬಜೆಟ್‌ನಲ್ಲಿ 5 ಕೋಟಿ ರೂ. ಕೊಡುತ್ತೇನೆ ಎಂದು ನುಡಿದಿದ್ದಾರೆ.
Advertisement
Advertisement
ಪ್ರತಿವರ್ಷದಂತೆ ಈ ವರ್ಷವೂ ತಾಯಿ ಮೇರಿ ಜಯಂತ್ಯುತ್ಸವ ಚರ್ಚ್‌ನಲ್ಲಿ ಆಚರಣೆಯಾಗುತ್ತಿದೆ. ಎಲ್ಲಾ ಭಕ್ತವೃಂದಕ್ಕೆ ಜಯಂತ್ಯುತ್ಸವದ ಶುಭಾಶಯಗಳು. ತಾಯಿ ಮೇರಿಯವರ ಆರ್ಶೀವಾದವನ್ನು ಪ್ರತಿವರ್ಷ ಪಡೆಯುತ್ತಿದ್ದೇನೆ. ʻಸರ್ವ ಜನಾಂಗದ ಶಾಂತಿಯ ತೋಟʼ ಎಂಬ ಕುವೆಂಪು ಅವರ ಮಾತಿನಂತೆ 7 ಕೋಟಿ ಜನರು ಪ್ರೀತಿ ವಿಶ್ವಾಸದಿಂದ ಬದುಕಬೇಕು. ಕೆಲವು ಕಪಟಿಗಳು ಸಮಾಜದಲ್ಲಿ ದ್ವೇಷ ಬಿತ್ತುತ್ತಾರೆ. ಬೇರೆ ಬೇರೆ ಜಾತಿ, ಜನಾಂಗದವರು ಒಂದೇ ತಾಯಿಯ ಮಕ್ಕಳಂತೆ ಬದುಕುವ ಹಾಗೆ ಮಾಡಬೇಕಾಗಿದ್ದು ಸರ್ಕಾರದ ಕರ್ತವ್ಯ. ಸಂವಿಧಾನದಲ್ಲೂ ಪರಸ್ಪರ ಪ್ರೀತಿ, ಸಹಬಾಳ್ವೆ ಇರಬೇಕು ಅಂತಾ ಹೇಳಲಾಗಿದೆ. ಸಹಿಷ್ಣುತೆ ಇರಬೇಕು, ಜಾತಿ,ಧರ್ಮ ಮೀರಿ ನಾವೆಲ್ಲಾ ಮನುಷ್ಯರಾಗಿ ಬಾಳಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: Paralympics 2024 | ಐತಿಹಾಸಿಕ 29 ಪದಕಗಳ ಸಾಧನೆ – 18ನೇ ಸ್ಥಾನ ಪಡೆದ ಭಾರತ
ಅಜಾನ್ ಕೂಗುತ್ತಿದ್ದಂತೆ ಭಾಷಣ ನಿಲ್ಲಿಸಿದ ಸಿಎಂ:
ಈ ವೇಳೆ ಮಸೀದಿಯಲ್ಲಿ ಅಜಾನ್ ಕೂಗುತ್ತಿದ್ದಂತೆ ಸಿಎಂ ಭಾಷಣ ನಿಲ್ಲಿಸಿದರು. ಅಜಾನ್ ಮುಗಿಯುವವರೆಗೂ ಮೌನವಹಿಸಿದ್ದರು.
ಸಿಎಂ ಮುಂದೆ ಚರ್ಚ್ ಫಾದರ್ ಬೇಡಿಕೆ:
ಸಿಎಂ ಭಾಷಣ ಮುಗಿಸಿದ ವೇಳೆ ಶಿವಾಜಿನಗರದ ಚರ್ಚ್ ಫಾದರ್ ಸಿಂಗೆ ಹಲವು ಬೇಡಿಕೆಗಳನ್ನಿಟ್ಟರು.
* ಶಿವಾಜಿ ನಗರ ಚರ್ಚ್ ಮುಂಭಾಗ ಅಂಡರ್ ಪಾರ್ಕಿಂಗ್ ವ್ಯವಸ್ಥೆ ಆಗಬೇಕು
* ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿಸ್ ಮೆಟ್ರೋ ಸ್ಟೇಷನ್ ಎಂದು ನಾಮಕರಣ ಮಾಡಬೇಕು. ಇದರಿಂದ ಪುಣ್ಯಕ್ಷೇತ್ರ ಮೇರಿ ಚರ್ಚ್‌ಗೆ ಹೆಚ್ಚು ಜನರು ಬರಲು ಅನುಕೂಲ ಆಗುತ್ತೆ.