ಬೆಂಗಳೂರು: 2023-24ರ ಅವಧಿಯಲ್ಲಿ ನಮ್ಮದು ಒಟ್ಟು ಸಾಲ (Loan) 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮದು ಸಾಲದ ಪ್ರಮಾಣ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಸಿಎಂ ಅಂಕಿ ಅಂಶ ಸಮೇತ ಉತ್ತರಿಸಿದರು. ಇದನ್ನೂ ಓದಿ: ಡಿ.14ರಂದು ʻಮಹಾʼ ಸಂಪುಟ ವಿಸ್ತರಣೆ – ಪ್ರಧಾನಿ ಮೋದಿ ಭೇಟಿಯಾದ ಸಿಎಂ ಫಡ್ನವಿಸ್
Advertisement
Advertisement
ಯಾವುದೇ ಸರ್ಕಾರ ತನ್ನ ಕೆಲಸಗಳಿಗೆ ಹಣ ಖರ್ಚು ಮಾಡಲು ಸಾಲ ಮಾಡಬೇಕಾಗುತ್ತದೆ. ಸಾಮರ್ಥ್ಯ ನೋಡಿಕೊಂಡು ಸಾಲ ಮಾಡಬೇಕು. ಎಷ್ಟು ಸಾಲ ಕೊಡಬೇಕು ಅಂತ ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ. ಅದರ ಪ್ರಕಾರ ನಾವು ಸಾಲ ಪಡೆಯುತ್ತೇವೆ, ಸಾಲದ ಮಿತಿ ಕೊಟ್ಟಷ್ಟು ಸಾಲ ಪಡೆದಿದ್ದೇವೆ. ನಿಯಮದ ಪ್ರಕಾರ 3 ಮಾನದಂಡ ನಿಗದಿಯಾಗಿದೆ. ನಮ್ಮಲ್ಲಿ ವಿತ್ತೀಯ ಕೊರತೆಯು (Financial Deficit) 2024-25ರಲ್ಲಿ 2.9% ಇದೆ, 2023-24ರಲ್ಲಿ 2.6% ಇತ್ತು ಎಂದು ತಿಳಿಸಿದರು.
Advertisement
2023-24 ರಲ್ಲಿ ನಮ್ಮದು ಒಟ್ಟು ಸಾಲ 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇವೆ. ಆಂಧ್ರ, ಅಸ್ಸಾಂ, ಹಿಮಾಲಯ ಪ್ರದೇಶ, ಕೇರಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ತಮಿಳುನಾಡು ಸೇರಿ ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ಸಾಲದ ಪ್ರಮಾಣ ಕಡಿಮೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಪ್ರತಿಭಟನೆಯಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಿ – ವಚನಾನಂದ ಶ್ರೀಗಳ ವಿರುದ್ಧ ಮಾಜಿ ಶಾಸಕ ಗರಂ
Advertisement
ಅನಗತ್ಯ ಖರ್ಚಿಗೆ ಕಡಿವಾಣ:
ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ. ಇದು ಹೆಚ್ಚಾಗಬಹುದು. ಹೆಚ್ಚಾದರೆ ಪೂರಕ ಬಜೆಟ್‌ನಲ್ಲಿ ಸೇರಿಸಿಕೊಳ್ತೀವಿ. ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿ ಆಯ್ತು ಅಂತ ವಿಪಕ್ಷಗಳು ಆರೋಪ ಮಾಡುತ್ತಿವೆ. ಇದರಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿಗೆ ಹಣ ಇದೆ, ರಾಜ್ಯದಲ್ಲಿ ಈ ವರ್ಷ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಆಗಿದೆ. ಇದರಲ್ಲಿ 1.20 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ಬಳಕೆ ಮಾಡ್ತಿದ್ದೇವೆ. ಇನ್ನೂ ಈ ಬಾರಿ 14 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಆಗಿದ್ದು, ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಸರಿ ದೂಗಿಸುತ್ತೇವೆ ಎಂದು ಸಿಎಂ ವಿವರಿಸಿದರು.
ಇದೇ ವೇಳೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾಯಾರಣಸ್ವಾಮಿ ಮಾತನಾಡಿ, 52 ಸಾವಿರ ಕೋಟಿ ರೂ. ಗ್ಯಾರಂಟಿಗೆ ಹಣ ಇಟ್ಡಿದ್ದೇವೆ ಅಂತ ಸಿಎಂ ಹೇಳಿದ್ದಾರೆ. SCSP-TSPಯಿಂದ ಹಣ ತೆಗೆದಿದ್ದೀರಾ? ಅದನ್ನ ಯಾವುದಕ್ಕೆ ಖರ್ಚು ಮಾಡಿದ್ದೀರಾ? ಗ್ಯಾರಂಟಿ ಕೊಡಬೇಡಿ ಎಂದು ನಾವು ಹೇಳಿಲ್ಲ. ಆದ್ರೆ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ, ಗ್ಯಾರಂಟಿ ನಿಲ್ಲಿಸಿ ಅಂತ ನಿಮ್ಮ ಶಾಸಕರೇ ಹೇಳ್ತಿದ್ದಾರೆ, ಇದಕ್ಕೇನು ಹೇಳ್ತೀರಾ? ಅಂತ ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ, ಗಣಿಗಾರಿಕೆಗೆ ತೆರಿಗೆ ಪರಿಷ್ಕರಣೆ ಮಾಡಿದ್ದೇವೆ. ಅದರ ಪ್ರಕಾರ 4,700 ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತದೆ. ಶಾಸಕ ರಾಜು ಕಾಗೆ ಅವರು ಕೇಳಿದ್ದು, ಹೆಚ್ಚುವರಿ ಅನುದಾನ ಕೊಡಿ ಅಂತ. ಅದನ್ನ ಕೊಡೋಕೆ ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ
ಮುಂದುವರಿದು, SCSP-TSP ಯೋಜನೆ ಹಣ ಬಿಜೆಪಿ ಅವಧಿಯಲ್ಲಿ ಕಡಿಮೆ ಮಾಡಿದ್ದರು. ನಾವು ಈ ಬಾರಿ 39,000 ಕೋಟಿ ರೂ. ಇಟ್ಟಿದ್ದೇವೆ. ಬಿಜೆಪಿ ಅಧಿಕಾರ ಮಾಡ್ತಿರೋ ಬೇರೆ ರಾಜ್ಯಗಳಲ್ಲಿ SCSP-TSP ಕಾಯ್ದೆಯೇ ಇಲ್ಲ. ಇಡೀ ದೇಶದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ಬಿಟ್ಟು ಇನ್ಯಾವುದೇ ರಾಜ್ಯದಲ್ಲಿ ಈ ಕಾಯ್ದೆ ಇಲ್ಲ. ಅಲ್ಲದೇ ಪರಿಶಿಷ್ಟ ಜಾತಿಯವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಇರೋದು ಕರ್ನಾಟಕದಲ್ಲಿ ಮಾತ್ರ ಎಂದು ಸ್ಪಷ್ಟನೆ ನೀಡಿದರು. ಸಿಎಂ ಉತ್ತರಕ್ಕೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು, ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು.