ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ 2024-25ರ ಮಧ್ಯಂತರ ಆಯವ್ಯಯ ಪತ್ರದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರು ನಿರ್ಮಿಸಿರುವ ʻವಿನಾಶಕಾರಿ ಭಾರತʼದ ವಾಸ್ತವವನ್ನು ಬಚ್ಚಿಟ್ಟು ʻವಿಕಸಿತ ಭಾರತʼ ಎಂಬ ಭ್ರಮಾಲೋಕವನ್ನು ದೇಶದ ಜನತೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆದಿ ಮಾತನಾಡಿದ ಅವರು, ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನೊಳಗೊಂಡ ನಾಲ್ಕು ‘ಜಾತಿ’ಗಳ ಅಭಿವೃದ್ದಿಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೆ ʻವಿಕಸಿತ ಭಾರತʼದ ಕನಸು ಎಂದು ಅವರು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿಯವರ (Narendra Modi) 10 ವರ್ಷಗಳ ಆಡಳಿತದಲ್ಲಿ ಕಷ್ಟ, ನಷ್ಟ, ದಮನ, ದೌರ್ಜನ್ಯಕ್ಕೀಡಾಗಿರುವುದು ಇದೇ ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಈ ಸಮುದಾಯಗಳ ಪಾಲಿಗೆ ಮೋದಿಯವರ 10 ವರ್ಷಗಳ ಆಡಳಿತ ʻವಿಕಸಿತ ಭಾರತʼ ಅಲ್ಲ ಅದು ʻವಿನಾಶಕಾರಿ ಭಾರತʼ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: 6 ಬಜೆಟ್, 6 ಸೀರೆ – ಪ್ರತಿ ಬಜೆಟ್ನಲ್ಲೂ ಸೀರೆಯಿಂದ್ಲೆ ಸುದ್ದಿಯಾಗ್ತಾರೆ ಕೇಂದ್ರ ಸಚಿವೆ
Advertisement
Advertisement
16 ಲಕ್ಷ ಕೋಟಿ ಸಾಲ ಮಾಡಿದ್ದಾರೆ:
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್, ನಿರಾಶದಾಯಕ ಬಜೆಟ್. ಚುನಾವಣೆ ಇರೋದ್ರಿಂದ ಪೂರ್ತಿ ಬಜೆಟ್ ಮಂಡನೆ ಮಾಡಿಲ್ಲ. 47 ಲಕ್ಷ ಕೋಟಿ ರೂ. ಬಜೆಟ್ ಗಾತ್ರ ಇದು. ಕಳೆದ ವರ್ಷ 45 ಲಕ್ಷ ಕೋಟಿ ಗಾತ್ರ ಇತ್ತು. ಈ ವರ್ಷ 2 ಲಕ್ಷ ಕೋಟಿ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಬಜೆಟ್ ಗಾತ್ರ 5.8% ಜಾಸ್ತಿ ಆಗಿದೆ. 47 ಲಕ್ಷ ಕೋಟಿ ಬಜೆಟ್ ನಲ್ಲಿ ಸುಮಾರು 16 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಸದ್ಯ 196 ಲಕ್ಷ ಕೋಟಿ ರೂ. ಸಾಲ ಇದೆ. ಈ ಬಜೆಟ್ನಲ್ಲಿ ಬಡ್ಡಿಗೆ 11 ಲಕ್ಷದ 91 ಸಾವಿರ ಕೋಟಿ ಕೊಡ್ತಿದ್ದಾರೆ. ಚುನಾವಣೆ ಬಜೆಟ್ ಆಗಿರೋದ್ರೀಂದ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಲೆಕ್ಷನ್ ಬಜೆಟ್ನಲ್ಲಿ ಪುಕ್ಕಟೆ ಯೋಜನೆಗಳಿಲ್ಲ – ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಕಳೆದ ವರ್ಷ ಎಷ್ಟಿತ್ತು?
Advertisement
ಬಜೆಟ್ನಲ್ಲಿ ಜನರ ಮುಂದೆ ಬಿಚ್ಚಿಟ್ಟಿರೋದಕ್ಕಿಂತ ಜನರಿಗೆ ಮುಚ್ಚಿಟ್ಡಿರೋದೇ ಜಾಸ್ತಿ. ಬೆಲೆ ಏರಿಕೆ, ಬರ, ನಿರುದ್ಯೋಗದ ಬಗ್ಗೆ ಹೇಳಿಲ್ಲ. ಸಾಲದ ಬಗ್ಗೆ ಹೇಳಿಲ್ಲ. 2004-14ರ ವರೆಗೆ ಮನಮೋಹನ್ ಸಿಂಗ್ ಪಿಎಂ ಆಗಿದ್ರು. ಆಗ ಬಜೆಟ್ ವಾರ್ಷಿಕ ಸರಾಸರಿ 13.79% ಇತ್ತು. 2014-24 ವರೆಗೆ ಈಗ 9.6% ಆಗಿದೆ. ವಿಕಸಿತ ಆಗಿದೆ ಅಂತ ಇವರು ಹೇಳ್ತಾರೆ. ಆದರೆ 9.6% ಆಗಿದೆ, ಮನಮೋಹನ್ ಸಿಂಗ್ ಅವರಿಗೆ ಹೋಲಿಸಿದ್ರೆ ಬಜೆಟ್ ಗಾತ್ರ 4.19% ಕಡಿಮೆ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಕ್ಕನ ಆಭರಣಗಳ ಮೇಲೆ ತಂಗಿ ಕಣ್ಣು – ರೈಲಿನಲ್ಲೇ ಕೈಚಳಕ ತೋರಿ ಜೈಲು ಪಾಲು!