– ಮಂಡ್ಯದಲ್ಲಿ ಹನುಮ ಧ್ವಜ ಘರ್ಷಣೆ, ಕೆರಗೋಡು ಗ್ರಾಮ ಉದ್ವಿಗ್ನ
– ಕಾಂಗ್ರೆಸ್‌ನದ್ದು ರಾಮ ವಿರೋಧಿ ನೀತಿ ಎಂದ ಅಶೋಕ್
ಚಿತ್ರದುರ್ಗ/ಮಂಡ್ಯ: ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.
ಚಿತ್ರದುರ್ಗದ ಎಸ್.ಜೆಎಂ ಶಾಲಾ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದ (Mandya) ಕೆರಗೋಡು ಗ್ರಾಮಮದಲ್ಲಿ ಪೊಲೀಸರು (Mandya Police) ಹನುಮಧ್ವಜ ಇಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ರಾಷ್ಟ್ರ ಧ್ಬಜ ಹಾಗೂ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಆದ್ರೆ ರಾಷ್ಟ್ರ ಧ್ಬಜ ಹಾರಿಸುವ ಬದಲು ಹನುಮ ಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ
Advertisement
Advertisement
ಇದು ಕಾಂಗ್ರೆಸ್‌ನ ರಾಮ ವಿರೋಧಿ ನೀತಿ:
ಸಿದ್ದರಾಮಯ್ಯ `ಜೈ ಶ್ರೀರಾಮ್’ ಅಂದರು, ಡಿಕೆ ಶಿವಕುಮಾರ್ ಶಿವ ಅಂದರು. ಕುಕ್ಕರ್ ಬಾಂಬ್ ಹಿಡಿದುಬಂದನಿಗೆ ಬ್ರದರ್ ಅಂದರು, ಅವರ ಹೃದಯದಲ್ಲಿ ಟಿಪ್ಪು ತುಂಬಿದ್ದಾನೆ. ಹನುಮಧ್ವಜ ಕೆಳಗಿಳಿಸಲು ನೇರವಾಗಿ ಕಾಂಗ್ರೆಸ್ ಕಾರಣ. ಇದು ಹಿಂದೂ ವಿರೋಧಿ ಹಾಗೂ ರಾಮ ವಿರೋಧಿ ನೀತಿ. ಏಕಾಏಕಿ ಪೋಲಿಸರನ್ನ ಕರೆದುಕೊಂಡು ಹೋಗಿ ಧ್ವಜ ತೆಗೆಸುವಂತಹದ್ದು ಏನಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಅವರೇ ನಿಮ್ಮ ಹೆಸರಲ್ಲಿ ರಾಮ ಇದ್ರೆ ಆಗಲ್ಲ, ಮನಸ್ಸಿಲ್ಲಿ ಇರೋದು ಟಿಪ್ಪು. ಹನುಮ ಧ್ವಜ ಕಿತ್ತುಹಾಕಿರುವುದು ಹಿಂದೂಗಳಿಗೆ ಮಾಡಿರುವ ಅವಮಾನ. ಗ್ರಾಮ ಪಂಚಾಯಿತಿಯಲ್ಲೇ ತೀರ್ಮಾನ ಮಾಡಿದ ಬಳಿಕ ಹನುಮಧ್ವಜ ಹಾಕಲಾಗಿತಗ್ತು. ಆದ್ರೆ ಕಾಂಗ್ರೆಸ್‌ಗೆ ಹನುಮನ ಬಗ್ಗೆ ದ್ವೇಷದಿಂದ ಈ ಕೆಲಸ ಮಾಡಿದೆ ಎಂದು ಕೆಂಡ ಕಾರಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್
ನಾವು ಕೆರೆಗೋಡಿಗೆ ಹೋಗಿ ಅಲ್ಲಿ ಪ್ರತಿಭಟನೆ ಮಾಡ್ತಿವಿ, ಅಲ್ಲಿ ಗ್ರಾಮಸ್ಥರ ಮೇಲೆ ಲಾಟಿ ಚಾರ್ಜ್ ಆಗಿದೆ. ಅಲ್ಲೇ ನಾವು ಹನುಮಧ್ವಜ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.