– ಮುಂದಿನ ಬಾರಿ ಬಿಜೆಪಿಯನ್ನ ಧೂಳಿಪಟ ಮಾಡ್ತೀವಿ ಎಂದ ಸಿದ್ದರಾಮಯ್ಯ
ಬೆಂಗಳೂರು: ನಾವು ಎಲ್ಲಾ ಬೆಲೆ, ತೆರಿಗೆ ಸೇರಿ 6-7 ಸಾವಿರ ಕೋಟಿ ರೂ. ಮಾತ್ರ ಹೆಚ್ಚಳ ಮಾಡಿರುವುದು ನಿಜ. ಯೋಜನೆಗಳಿಗೆ ಹಣ ಖರ್ಚು ಮಾಡಬೇಕಲ್ಲವಾ? ಸುಮ್ಮನೇ ಹಣ ಬರುತ್ತಾ? ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಪಕ್ಷಗಳಿಗೆ ಪ್ರಶ್ನೆ ಮಾಡಿದರು.
ವಿಧಾನ ಪರಿಷತ್ ಕಲಾಪದಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ವಿಪಕ್ಷಗಳ ವಿರುದ್ಧ ಕೆರಳಿ ಕೆಂಡವಾದರು. ಇದನ್ನೂ ಓದಿ: ತಾಪಮಾನ ಹೆಚ್ಚಳದಿಂದಾಗಿ ಮುಂಜಾಗ್ರತಾ ಕ್ರಮ – ಬಿಸಿಲಿನಿಂದ ಅಸ್ವಸ್ಥಗೊಂಡವರಿಗೆ ಹೀಟ್ ಸ್ಟ್ರೋಕ್ ವಾರ್ಡ್ ಆರಂಭ
ರೈಲ್ವೆ ಯೋಜನೆಗಳಿಗೆ ನಾವು ಜಮೀನು ಕೊಡ್ತೀವಿ. ಕೇಂದ್ರದ ಅರ್ಧದಷ್ಟು ಯೋಜನೆಗೆ ದುಡ್ಡು ನಾವೇ ಕೊಡ್ತೀವಿ. ಆದ್ರೆ ಲಾಭ ಹೋಗೋದು ಕೇಂದ್ರಕ್ಕೆ. ಫ್ಲಾಟ್‌ಫಾರ್ಮ್ ಟಿಕೆಟ್ ಹಣ ಕೂಡ ಕೇಂದ್ರ ಪಡೆಯುತ್ತದೆ. ನರೇಂದ್ರ ಮೋದಿ (PM Modi) ಕಾಲದಲ್ಲಿ ಬೆಲೆ ಏರಿಕೆ ಜಾಸ್ತಿ ಆಗಿದೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಲಿಲ್ಲ. ಆದ್ರೆ ನಾವು ಎಲ್ಲಾ ಬೆಲೆ, ತೆರಿಗೆ ಹೆಚ್ಚಳ ಮಾಡಿರೋದು 6-7 ಸಾವಿರ ಕೋಟಿ ರೂ. ಮಾತ್ರ. ನಾವು ಗ್ಯಾರಂಟಿಗೆ 60 ಸಾವಿರ ಕೋಟಿ ರೂ. ಖರ್ಚು ಮಾಡ್ತಿದ್ದೇವೆ. ನೀರಾವರಿ ಯೋಜನೆಗೆ 1 ಸಾವಿರ ಕೋಟಿ ರೂ. ಜಾಸ್ತಿ ಮಾಡಿದ್ದೇವೆ. ಯೋಜನೆಗಳಿಗೆ ಹಣ ಖರ್ಚು ಮಾಡಬೇಕು ಅಲ್ಲವಾ? ಸುಮ್ಮನೆ ಹಣ ಬರುತ್ತಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮೋದಿ ಬಳಿ ಉದ್ಧವ್ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್ ಶಿಂಧೆ
ಅಲ್ಲದೇ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿಲ್ಲವಾ? ಗ್ಯಾಸ್ ರೇಟ್ ಜಾಸ್ತಿ ಆಗಿಲ್ಲವಾ? ತೆರಿಗೆ ಜಾಸ್ತಿ ಹಾಕೋದು ನಿರಂತರ ಪ್ರಕ್ರಿಯೆ. ಯೋಜನೆಗಳಿಗೆ ಹಣ ಕೋಡೋಕೆ ತೆರಿಗೆ ಜಾಸ್ತಿ ಮಾಡಿದ್ದೇವೆ ಎಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.
ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಪೂಜಾರ್, ನೀರಾವರಿ ಯೋಜನೆಗೆ ಏನೂ ಕೊಟ್ಟಿಲ್ಲ, ಚೊಂಬು ಕೊಟ್ಟಿದ್ದೀರಿ. ಉತ್ತರ ಕರ್ನಾಟಕವನ್ನ ನಾಶ ಮಾಡಿದ್ದೀರಿ ನೀವು ಎಂದು ಆಕ್ರೋಶ ಹೊರಹಾಕಿದರು. ಇದರಿಂದ ಮತ್ತಷ್ಟು ಸಿಟ್ಟಾದ ಸಿಎಂ, ಯಡಿಯೂರಪ್ಪ ಮಹದಾಯಿ ಯೋಜನೆ ಮಾಡಿಸೋದಾಗಿ ಹೇಳಿದ್ರು… ಮಾಡಿಸಿದ್ರಾ? ರಕ್ತದಲ್ಲಿ ಬರೆದುಕೊಡ್ತೀನಿ ಅಂದರು.. ಕೊಟ್ರಾ? ಅಂತ ಪ್ರಶ್ನೆ ಮಾಡಿದ್ರು. ಈ ವೇಳೆ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿಯನ್ನ ಧೂಳಿಪಟ ಮಾಡ್ತೀವಿ:
ಕರ್ನಾಟಕದಲ್ಲಿ ಬಿಜೆಪಿ ಅವರು ಗೆದ್ದೇ ಇಲ್ಲ. ಕರ್ನಾಟಕದ ಜನ ಬಿಜೆಪಿಗೆ ಆಶೀರ್ವಾದ ಮಾಡೇ ಇಲ್ಲ. 1977 ವರೆಗೂ ಕಾಂಗ್ರೆಸ್ ಗೆಲ್ಲುತ್ತಿತ್ತು. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ 100 ಸ್ಥಾನ ಗೆದ್ದಿದ್ದೇವೆ. ಮುಂದಿನ ಬಾರಿ ಬಿಜೆಪಿಯನ್ನ ಧೂಳಿಪಟ ಮಾಡ್ತೀವಿ ಎಂದು ಸಿಎಂ ಹೇಳಿದರು. ಈ ವೇಳೆ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಮುಂದಿನ ಬಾರಿಯೂ ಮೋದಿ ಪ್ರಧಾನಿ ಆಗ್ತಾರೆ ಅಂತ ಟಾಂಗ್ ಕೊಟ್ಟರು. ಇದನ್ನೂ ಓದಿ: ದೆಹಲಿಯಲ್ಲಿ ವೃದ್ಧದಂಪತಿಯ ಹತ್ಯೆ – ಮನೆಕೆಲಸದವರ ಸಹಕಾರದಿಂದಲೇ ಕೊಲೆ ಶಂಕೆ
ಬಳಿಕ ಮೋದಿ ಕೀ ಗ್ಯಾರಂಟಿ ಅಂತ ಪ್ರಣಾಳಿಕೆ ಪ್ರದರ್ಶನ ಮಾಡಿದ ಸಿಎಂ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿದ ಪ್ರಣಾಳಿಕೆ ಈಡೇರಿಕೆ ಮಾಡಿಲ್ಲ. 600 ಭರವಸೆ ಕೊಟ್ಟರು 10% ಜಾರಿ ಈಡೇರಿಸಿಲ್ಲ. ರೈತರ ಸಾಲಮನ್ನಾ ಮಾಡದೇ ಅಂಬಾನಿ, ಅದಾನಿ ಸಾಲಮನ್ನಾ ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ವಿಪಕ್ಷ ಸದಸ್ಯರು ಸಿಎಂ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು. ಈ ವೇಳೆ ಸದನದಲ್ಲಿ ಗದ್ದಲ – ಕೋಲಾಹಲ ಉಂಟಾಯಿತು.